Mandya Horror: ಪಾರ್ಸೆಲ್ ಬಂದಿದೆ ಎಂದು ಮನೆಗೆ ನುಗ್ಗಿದ ದರೋಡೆಕೋರ- ಮರ ಕತ್ತರಿಸೋ ಯಂತ್ರದಿಂದ ವೃದ್ಧನ ಬರ್ಬರ ಹತ್ಯೆ
Mandya Horror: ಸಂಜೆ 7 ಗಂಟೆ ವೇಳೆಗೆ ಕ್ಯಾತನಹಳ್ಳಿ ಗ್ರಾಮದ ತೋಟದ ಮನೆಗೆ ಅನಾಮಧೇಯ ದರೋಡೆ ಮಾಡಲು ಬಂದಿದ್ದ. ಮೊದಲಿಗೆ ರಮೇಶ್ ಪತ್ನಿ ಯಶೋದಮ್ಮರನ್ನು ಮಾತನಾಡಿಸಿದವನು ನಿಮ್ಮ ಮನೆಗೆ ಮರ ಕತ್ತರಿಸುವ ಯಂತ್ರ ಬಂದಿದೆ. ನಿಮ್ಮ ಮನೆಯವರೇ ಆರ್ಡರ್ ಮಾಡಿದ್ದಾರೆ ತೆಗೆದುಕೊಳ್ಳಿ ಎಂದಿದ್ದಾನೆ. ಆಗ ನಾವು ಯಾವುದೇ ಯಂತ್ರ ಆರ್ಡರ್ ಮಾಡಿಲ್ಲ ಎಂದಿದ್ದಾರೆ. ಈ ವೇಳೆ ಅವರ ಕುತ್ತಿಗೆಗೆ ಯಂತ್ರ ಹಿಡಿದು ತಳ್ಳಿದ್ದಾನೆ. ಈ ವೇಳೆ ಯಶೋದಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆಮೇಲೆ ರಮೇಶ್ ಅವರನ್ನು ಮರ ಕತ್ತರಿಸುವ ಯಂತ್ರದಿಂದ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
Rakshita Karkera
December 22, 2024
ಮಂಡ್ಯ: ಮರ ಕತ್ತರಿಸುವ ಯಂತ್ರದಿಂದ ವೃದ್ಧನನ್ನು ಕತ್ತರಿಸಿ ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ಮಂಡ್ಯದಲ್ಲಿ ನಡೆದಿದೆ(Mandya Murder Case). ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ತೋಟದ ಮನೆಯಲ್ಲಿ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಒಂಟಿ ಮನೆಗೆ ಮರ ಕತ್ತರಿಸೋ ಯಂತ್ರದ ಜೊತೆ ನುಗ್ಗಿದ ದರೋಡೆಕೋರ ಈ ಘೋರ ಕೃತ್ಯ ಎಸಗಿದ್ದಾನೆ. ಇನ್ನು ಬಲಿಯಾದ ವ್ಯಕ್ತಿಯನ್ನು ರಮೇಶ್ ಎಂದು ಗುರುತಿಸಲಾಗಿದ್ದು, ಅವರ ಪತ್ನಿ ಯಶೋಧಮ್ಮ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ(Mandya Horror).
ನಡೆದಿದ್ದೇನು?
ಸಂಜೆ 7 ಗಂಟೆ ವೇಳೆಗೆ ಕ್ಯಾತನಹಳ್ಳಿ ಗ್ರಾಮದ ತೋಟದ ಮನೆಗೆ ಅನಾಮಧೇಯ ದರೋಡೆ ಮಾಡಲು ಬಂದಿದ್ದ. ಮೊದಲಿಗೆ ರಮೇಶ್ ಪತ್ನಿ ಯಶೋದಮ್ಮರನ್ನು ಮಾತನಾಡಿಸಿದವನು ನಿಮ್ಮ ಮನೆಗೆ ಮರ ಕತ್ತರಿಸುವ ಯಂತ್ರ ಬಂದಿದೆ. ನಿಮ್ಮ ಮನೆಯವರೇ ಆರ್ಡರ್ ಮಾಡಿದ್ದಾರೆ ತೆಗೆದುಕೊಳ್ಳಿ ಎಂದಿದ್ದಾನೆ. ಆಗ ನಾವು ಯಾವುದೇ ಯಂತ್ರ ಆರ್ಡರ್ ಮಾಡಿಲ್ಲ ಎಂದಿದ್ದಾರೆ. ಈ ವೇಳೆ ಅವರ ಕುತ್ತಿಗೆಗೆ ಯಂತ್ರ ಹಿಡಿದು ತಳ್ಳಿದ್ದಾನೆ. ಈ ವೇಳೆ ಯಶೋದಮ್ಮ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಆಮೇಲೆ ರಮೇಶ್ ಅವರನ್ನು ಮರ ಕತ್ತರಿಸುವ ಯಂತ್ರದಿಂದ ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆರೋಪಿ ಅರೆಸ್ಟ್
ಯಶೋಧಮ್ಮ ಅವರನ್ನು ಆರೋಪಿ ತಳ್ಳಿದಾಗ ಅವರು ಪ್ರಜ್ಞೆ ತಪ್ಪಿದ್ದರು. ಆದರೂ ಕೂಡ ಅವರಿಗೆ ಗಾಯವಾಗಿದ್ದರು ಆರೋಪಿಯನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಿ ಅಕ್ಕಪಕ್ಕದ ಜನರನ್ನು ಹೋಗಿ ಕರೆದಿದ್ದಾರೆ. ಈ ವೇಳೆ ಅಕ್ಕಪಕ್ಕದ ಜನ ಸ್ಥಳೀಯರು ಸೇರಿ ಆರೋಪಿಯನ್ನು ಹಿಡಿದು ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಲೆ ಮಾಡಿರುವ ಆರೋಪಿಯನ್ನು ಮಹಮ್ಮದ್ ಇಬ್ರಾಹಿಂ ಎಂದು ತಿಳಿದುಬಂದಿದ್ದು, ಕೊಲೆಗಾರನನ್ನು ಅರೆಸ್ಟ್ ಮಾಡಲಾಗಿದೆ ಎಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ತಿಳಿಸಿದ್ದಾರೆ. ಘಟನೆ ಕುರಿತಂತೆ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ: Murder Case: ಸಿಗರೇಟ್ ಪ್ಯಾಕ್ ಕದ್ದನೆಂದು ಯುವಕನ ಥಳಿಸಿ ಕೊಲೆ