Mysuru News: ವೀರಶೈವ ಲಿಂಗಾಯತ ಸಮಾಜದಿಂದ ದೇಶದ ಏಳಿಗೆಗೆ ಬಹುದೊಡ್ಡ ಕೊಡುಗೆ: ಬಿ.ವೈ.ವಿಜಯೇಂದ್ರ
Mysuru News: ಮೈಸೂರಿನಲ್ಲಿ ಜ. 17ರಂದು ಆಯೋಜಿಸಿದ್ದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ 2025 ಸಮಾವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದರು.
ಮೈಸೂರು, ಜ.17, 2025: ಸ್ವಾಭಿಮಾನದ ವಿಚಾರದಲ್ಲಿ ಯಾರೊಂದಿಗೂ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಂದರ್ಭ ಬಂದಾಗಲೆಲ್ಲವೂ ವೀರಶೈವ ಲಿಂಗಾಯತ ಸಮಾಜ ತೋರಿಸಿಕೊಟ್ಟಿದೆ. ಎಷ್ಟೇ ಕಷ್ಟ-ನಷ್ಟಗಳಾದರೂ ದುಡಿದು ತಿನ್ನುತ್ತೇವೆ. ಅದೇ ಶರಣ ತತ್ವ, ಅದೇ ಕಾಯಕ ತತ್ವ ಎಂದು ನಂಬಿ ಬದುಕುತ್ತಿರುವ ಸಮಾಜ ಇಂದು ಕರುನಾಡು ಕಟ್ಟುವ ಮೂಲಕ ದೇಶದ ಏಳಿಗೆಗಾಗಿ ಬಹುದೊಡ್ಡ ಕೊಡುಗೆಯನ್ನು ಕೊಟ್ಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದರು.
ಮೈಸೂರಿನಲ್ಲಿ (Mysuru News) ಜ. 17ರಂದು ಆಯೋಜಿಸಿದ್ದ ವೀರಶೈವ ಲಿಂಗಾಯತ ಗ್ಲೋಬಲ್ ಬಿಸಿನೆಸ್ ಕಾನ್‌ಕ್ಲೇವ್ 2025 ಸಮಾವೇಶದಲ್ಲಿ ಪಾಲ್ಗೊಂಡು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ತ್ರಿವಿಧ ದಾಸೋಹದ ಫಲಾನುಭವಿಗಳಾಗಿರುವ ನಾವು ಬೆವರು ಸುರಿಸಿ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಬೇಕು. ಬೇಡುವ ಸಮಾಜವಲ್ಲ, ನೀಡುವ ಸಮಾಜ ಎಂದು ಹೆಮ್ಮೆಯಿಂದ ಎಲ್ಲರೂ ಗೌರವಿಸುವ ಸಮಾಜದ ಬಂಧುಗಳು ವಿಕಸಿತ ಭಾರತಕ್ಕಾಗಿ ಮಹತ್ವದ ಕೊಡುಗೆ ನೀಡಲು ಸಜ್ಜಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಪರಮಪೂಜ್ಯ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಈ ಸುದ್ದಿಯನ್ನೂ ಓದಿ | Reliance: ಡಿಸೆಂಬರ್ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ಗೆ ದಾಖಲೆಯ 21,930 ಕೋಟಿ ರೂ. ಲಾಭ!
ಸಚಿವ ಎಂ.ಬಿ. ಪಾಟೀಲ್, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ನಿರ್ದೇಶಕ ನಿತೇಶ್ ಪಾಟೀಲ್, ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ರಾಜ್ಯ ಸಮಿತಿ ಅಧ್ಯಕ್ಷ, ನ್ಯಾ. ಸುಭಾಷ್ ಬಿ. ಆದಿ, ಫೆಡರೇಶನ್ ಆಫ್ ಇಂಡಸ್ಟ್ರೀಸ್ ಆಫ್ ಇಂಡಿಯಾದ ಅಧ್ಯಕ್ಷ ಬಾಲಚಂದ್ರ ಸಿನ್ಹಾ ರಾವ್ ರಾಣೆ, ಆದರ್ಶ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಎಂ. ಜಯಶಂಕರ್, ಬಸವ ಸಮಿತಿ ಅಧ್ಯಕ್ಷ ಅರವಿಂದ್ ಜತ್ತಿ, ಶಾಸಕರಾದ ಗಣೇಶ್ ಪ್ರಸಾದ್, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ಕಾರ್ಯಕ್ರಮದ ಆಯೋಜಕರಾದ ಸಂತೋಷ್ ಕೆಂಚಾಂಬ, ಬಿ.ಎಸ್. ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.