Raichur News: ಪೊಲೀಸ್ ಠಾಣೆಯಲ್ಲೇ ಮಾಜಿ ಶಾಸಕನಿಂದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ!
Raichur News: ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ಆವರಣದಲ್ಲಿ ಘಟನೆ ನಡೆದಿದೆ. ಬೆಂಬಲಿಗನಿಗೆ ಥಳಿಸಿದ್ದರಿಂದ ಕಾಂಗ್ರೆಸ್ ಮುಖಂಡನ ಮೇಲೆ ಮಾಜಿ ಶಾಸಕ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
Prabhakara R
December 23, 2024
ರಾಯಚೂರು: ಮಾಜಿ ಶಾಸಕನಿಂದ ಕಾಂಗ್ರೆಸ್ ಮುಖಂಡನ ಮೇಲೆ ಹಲ್ಲೆ ನಡೆದಿರುವ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪೊಲೀಸ್ ಠಾಣೆ ಆವರಣದಲ್ಲಿ ಘಟನೆ ನಡೆದಿದೆ. ಮಾನ್ವಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ್ ವಿರುದ್ಧ ಹಲ್ಲೆ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಮುಖಂಡ ಆಲ್ದಾಳ್ ವೀರಭದ್ರಪ್ಪನ ಮೇಲೆ ಹಲ್ಲೆ ನಡೆಸಿರುವ ಆರೋಪವಿದೆ. ಹಲ್ಲೆ ನಡೆದ ಸಮಯದ ಸಿಸಿ ಕ್ಯಾಮೆರಾ ದೃಶ್ಯಾವಳಿ ನೀಡಲು ಮಾನ್ವಿ ಠಾಣೆ ಪೊಲೀಸರಿಗೆ ಆಲ್ದಾಳ ವೀರಭದ್ರಪ್ಪ ಮನವಿ ಮಾಡಿದ್ದಾರೆ. ಮಾಜಿ ಶಾಸಕನ ಬೆಂಬಲಿಗನಿಗೆ ಥಳಿಸಿದ ಆರೋಪದಲ್ಲಿ ಕಾಂಗ್ರೆಸ್ ಮುಖಂಡನಿಗೆ ಕಾಲಿನಿಂದ ಒದ್ದು, ಮುಖಕ್ಕೆ ಗುದ್ದಿದ್ದಾರೆ ಎನ್ನಲಾಗಿದೆ.
ಆಲ್ದಾಳ ವೀರಭದ್ರಪ್ಪನ ಜಮೀನಿನಲ್ಲಿ ಕೆಲವರು ಜೂಜು ಅಡ್ಡೆ ಮಾಡಿಕೊಂಡಿದ್ದರು. ಇಸ್ಪೀಟ್ ಆಟ ವಿಚಾರದಲ್ಲಿ ಗಲಾಟೆ ಆದ ಹಿನ್ನೆಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸುದ್ದಿಯನ್ನೂ ಓದಿ | Viral Video: ಇದು ‘ಚಿಲ್ರೆ’ ಸಂಗತಿ ಅಲ್ಲ ‘ಚಿಲ್ಲರೆ’ ಸುದ್ದಿ..! ಪತ್ನಿಗೆ ಜೀವನಾಂಶ ನೀಡಲು 80 ಸಾವಿರ ರೂ. ಈ ವ್ಯಕ್ತಿ ತಂದದ್ದಾದರೂ ಹೇಗೆ?
ಧಾರವಾಡದಲ್ಲಿ ಕ್ಯಾಂಟರ್ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ; ಮೂವರ ದುರ್ಮರಣ
ಧಾರವಾಡ: ಕ್ಯಾಂಟರ್ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೂವರು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ (Dharwad News) ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹೊರವಲಯದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕ್ಯಾಂಟರ್ ವಾಹನದಲ್ಲಿದ್ದ ಹನುಮಂತಪ್ಪ ಮಲ್ಲದ, ಮಹಾಂತೇಶ ಚವ್ಹಾಣ, ಮಹದೇವ ಹುಳೊಳ್ಳಿ ಮೃತರು. ಇವರು ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಕ್ಯಾಂಟರ್ ವಾಹನ ಶಿರಸಂಗಿಯಿಂದ ಗೋವಾಗೆ ತೆರಳುತ್ತಿತ್ತು. ಗೋವಾದಿಂದ ಹುಬ್ಬಳ್ಳಿಗೆ ಟಿಟಿ ವಾಹನ ಬರುತ್ತಿತ್ತು. ಕ್ಯಾಂಟರ್ ವಾಹನ ಕಡಬಗಟ್ಟಿ ಗ್ರಾಮದ ಹೊರವಲಯದ ಬಳಿ ಪಲ್ಟಿಯಾಗಿ ಟಿಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಯಾಂಟರ್ ವಾಹನದಲ್ಲಿದ್ದ ಮೂವರು ಮೃತಪಟ್ಟಿದ್ದು, ಒಬ್ಬರಿಗೆ ಗಾಯಗಳಾಗಿವೆ. ಟಿಟಿ ವಾಹನದಲ್ಲಿನ ಇಬ್ಬರು ಪ್ರಯಾಣಿಕರು ಸಹ ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ಗೆ ರವಾನಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Allu Arjun: ಅಲ್ಲು ಅರ್ಜುನ್ ಮನೆ ಬಳಿ ಗಲಾಟೆ ಮಾಡಿದ್ದ ಆರೋಪಿಗಳಿಗೆ ಜಾಮೀನು