ಮಳೆಯಿಂದ ಬೆಳೆಹಾನಿ ಪರಿಹಾರಕ್ಕೆ ರೈತರ ಮನವಿ
ಮಳೆಯಿಂದ ಬೆಳೆಹಾನಿ ಪರಿಹಾರಕ್ಕೆ ರೈತರ ಮನವಿ
Vishwavani News
November 15, 2022
ಮಾನವಿ : ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ಅತಿಸಣ್ಣ ರೈತರು ಬೆಳೆ ಬೆಳೆಯಲು ಬ್ಯಾಂಕ್‌ಗಳಲ್ಲಿ ಮಾಡಿದ ಬೆಳೆಸಾಲವನ್ನು ಮನ್ನಾ ಮಾಡಬೇಕು,ಕೃಷಿ ಯಂತ್ರಗಳ ಸಹಾಯಧನವನ್ನು ಹೆಚ್ಚಿಸ ಬೇಕು, ಭತ್ತ ಸೇರಿದಂತೆ ಇತರ ಬೆಳೆಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಕರ್ನಾಟಕ ಜಾಗೃತಿ ರೈತ ಸಂಘ ದಿಂದ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ಕರ್ನಾಟಕ ಜಾಗೃತ ರೈತ ಸಂಘ ತಾಲೂಕು ಸಮಿತಿ ವತಿಯಿಂದ ಮುಖ್ಯಮಂತ್ರಿ ಗಳಿಗೆ ಉಪತಹಸೀಲ್ದಾರ್ ವಿನಾಯಕರಾವ್‌ರವರ ಮೂಲಕ ಮನವಿ ಸಲ್ಲಿಸಿ ತಾ.ಅಧ್ಯಕ್ಷ ಕೃಷ್ಣ ಮಾತನಾಡಿ , ಬಗರ್ ಹುಕುಂ ಸಾಗುವಳಿ ದಾರರಿಗೆ ಭೂ ಮಂಜೂರಾತಿ ಪ್ರಮಾಣ ಪತ್ರ ನೀಡಬೇಕು. ಸರಕಾರದಿಂದ ನಡೆದ ಜಿಮ್ ಸಮಾವೇಶದಲ್ಲಿ ಕೈಗೊಂಡ ರೈತ ವಿರೋಧಿ ಒಪ್ಪಂದಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರದೀಪ್ ಕಪಗಲ್, ಸದಾನಂದ ಪನ್ನೂರು, ಸುಮಿತ್ರಾ, ಮಂಜುನಾಥ, ಮೆಹಬೂಬ್, ಪೃಥ್ವಿ, ಬಾಬು, ಜಿ.ನರಸಿಂಹ, ವಸಂತ, ಮೆಹಬೂಬ್, ರಘು, ಈರಣ್ಣ, ಜಲಾಲ್, ರವಿ, ರಾಜು, ಬಸವರಾಜ, ಸೇರಿದಂತೆ ಇನ್ನಿತರರು ಇದ್ದರು.