ಸ್ಥಳೀಯ ಪ್ರಕಾಶನದಿಂದ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದಂತೆ: ಕಂ ವೀರಭದ್ರಪ್ಪ

ಸ್ಥಳೀಯ ಪ್ರಕಾಶನದಿಂದ ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದಂತೆ: ಕಂ ವೀರಭದ್ರಪ್ಪ

image-316167c5-fd90-48ff-8c63-fa0927602e74.jpg
Profile Vishwavani News November 12, 2022
image-ac138152-ae2e-41af-a934-4c5436ceb17d.jpg ಬಾನಾಡಿಗಳ ಒಡನಾಡಿ ಪುಸ್ತಕ ಬಿಡುಗಡೆ ಮಾನವಿ: ಹಿರಿಯ ಲೇಖಕರು ತಮ್ಮ ಕೃತಿಗಳನ್ನು ತಾಲೂಕು ಮಟ್ಟದ ಪ್ರಕಾಶನ ಸಂಸ್ಥೆಗಳಿಂದ ಬಿಡುಗಡೆ ಗೊಳಿಸಿದಾಗ ಮಾತ್ರ ಮನೆ ಮನೆಗೆ ಪುಸ್ತಕಗಳು ತಲುಪಲು ಸಾಧ್ಯವಾಗುತ್ತದೆ ಮುಂದಿನ ನನ್ನ ಎರಡು ಪುಸ್ತಕಗಳನ್ನು ಸ್ಥಳಿಯ ಪ್ರಕಾಶನ ಸಂಸ್ಥೆಗಳಿಂದ ಬಿಡುಗಡೆ ಗೊಳಿಸಲಾಗುವುದು ಪ್ರತಿಯೊಬ್ಬರು ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳಸಿ ಕೊಂಡಾಗ ಮಾತ್ರ ಹೆಚ್ಚಿನ ಸಾಹಿತಿಗಳು ಕೃತಿಗಳನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ಕುಂ ವೀರಭದ್ರಪ್ಪ ಅವರು ಹೇಳಿದರು. ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆಯ ನೇತಾಜಿ ಪಿ.ಯು.ಕಾಲೇಜಿನ ಆವರಣದಲ್ಲಿ ಭಾರತದ ಪಕ್ಷೀ ಪ್ರೇಮಿ ಸಲೀಂಅಲಿ ಅವರ ಜನ್ಮದಿನಾಚರಣೆ ಕಾರ್ಯಕ್ರಮದ ಅಂಗವಾಗಿ ನೇತಾಜಿ ಪ್ರಕಾಶನ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ತಾ.ಘಟಕ ಸಂಯುಕ್ತಾಶ್ರಯದಲ್ಲಿ ಕೆ.ಈ.ನರಸಿಂಹ ರಚಿಸಿರುವ ಬಾನಾಡಿಗಳ ಒಡನಾಡಿ ಪುಸ್ತಕವನ್ನು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ,ಕಥೆಗಾರ ಕುಂ.ವೀರಭದ್ರಪ್ಪ ಬಿಡುಗಡೆ ಗೊಳಿಸಿ ಮಾತನಾಡಿ ಹಾಗೂ ಕನ್ನಡ ಬಾಷೆ ಶ್ರೀಮಂತಗೊಳ್ಳುತ್ತದೆ ಒಂದು ಪಕ್ಷೀ ಗಾಯ ಗೊಂಡಿದನ್ನು ನೋಡಿ ಪ್ರಭಾವಿತರಾದ ವಾಲ್ಮೀಕಿ ಮಹರ್ಷಿಗಳು ಶ್ರೀ ರಾಮಯಾಣ ಮಹಾಕಾವ್ಯವನ್ನೇ ರಚಿಸಿದರು. ಬಸವಾದಿ ಶರಣರ ವಚನಗಳಲ್ಲಿ ಪಕ್ಷಿಗಳ ಜೀವನವನ್ನು ಹಲವು ವಚನಗಳಲ್ಲಿ ಬಳಸಿರುವುದನ್ನು ಕಾಣಬಹುದಾಗಿದೆ. ಪಕ್ಷೀ ಪ್ರೇಮಿ ಸಲೀಂಅಲಿ ಅವರು ಕೂಡ ಒಂದು ಪಕ್ಷಿಗೆ ಗಾಯವಾಗಿದನ್ನು ಕಂಡು ತಮ್ಮ ಜೀವನವನ್ನೇ ಪಕ್ಷೀಗಳ ಜೀವನದ ಆಧ್ಯಯನಕ್ಕಾಗಿ ಮೀಸಲಾಗಿಟ್ಟರು ಅವರ ಪಕ್ಷಿಗಳ ಅದ್ಬುತ ಜ್ಞಾನದಿಂದಾಗಿ ನಮಗೆ ಭಾರತದಲ್ಲಿನ ೩ಸಾವಿರಕ್ಕೂ ಹೆಚ್ಚು ಪಕ್ಷಿಗಳ ಸಂಪೂರ್ಣವಾದ ಜೀವನ ಕ್ರಮವನ್ನು ತಿಳಿಯಲು ಸಾಧ್ಯವಾಗಿದೆ ಅವರಿಗೆ ಭಾರತ ಸರಕಾರದಿಂದ ಭಾರತ ರತ್ನ ಪ್ರಶಸ್ತಿ ದೊರೆಯಬೇಕಾಗಿತ್ತು ತಾಲೂಕಿನ ಸಲ್ಲಾವುದ್ದಿನ್ ಅವರು ಕೂಡ ತಮ್ಮ ಮನೆಯಲ್ಲಿ ಹಲವು ಪಕ್ಷಿಗಳಿಗೆ ಆಶ್ರಯವನ್ನು ನೀಡುವ ಮೂಲಕ ಗಾಯಗೊಂಡ ಪಕ್ಷಿಗಳ ಆರೈಕೆ ಮಾಡುವ ಮೂಲಕ ಕಳೆದ ೧೦ವರ್ಷಗಳಿಂದ ತಮ್ಮ ಮನೆಯಲ್ಲಿ ಪಕ್ಷಿಗಳ ಲೋಕವನ್ನೆ ಸೃಷ್ಟಿಸಿ ಜನರಲ್ಲಿ ಪಕ್ಷಿ ಪ್ರೇಮವನ್ನು ಮೂಡಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಸುಸಂಸ್ಕೃತರನ್ನಾಗಿ,ವೈಚಾರಿಕವಾಗಿ,ದೇಶಭಕ್ತರನ್ನಾಗಿ,ಮಾನವಿಯ ಮೌಲ್ಯವುಳ್ಳ ನಾಗರಿ ಕರನ್ನಾಗಿ ರೂಪಿಸುವ ಜವಬ್ದಾರಿ ಇದೆ. ಇಂದಿನ ದಿನಗಳಲ್ಲಿ ದೇಶದಲ್ಲಿ ಅಲ್ಪ ಸಂಖ್ಯೆತ ಸಮುದಾಯದವರು ಅತ್ಯಂತ ಅತಂಕದ ಸ್ಥಿತಿಯಲ್ಲಿದ್ದಾರೆ ದೇಶವನ್ನು ಕಟ್ಟುವಲ್ಲಿ ಅಲ್ಪ ಸಂಖ್ಯೆತರು ಕೂಡ ತ್ಯಾಗ ಬಲಿದಾನವನ್ನು ನೀಡಿದ್ದಾರೆ. ಮನುಷ್ಯನ ಜೀವನಕ್ಕಿಂತ ಪಕ್ಷಿಗಳ ಜೀವನ ಅತ್ಯಂತ ವೈಶಿಷ್ಟತೆಯಿಂದ ವಿಭಿನ್ನತೆಯಿಂದ ಕೂಡಿದ್ದು ಮೋಬೈಲ್ ಟವರ್‌ಗಳ ತರಂಗಗಳು ಪಕ್ಷಿಗಳ ಮೇಲೆ ಹಾಗೂ ಮಾನವರ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ. ಶ್ರೀಮಂತರ ಐಷಾ ರಾಮಿ ಜೀವನಕ್ಕಾಗಿ ತಯಾರಿಸುವ ವಸ್ತುಗಳಿಗಾಗಿ,ಔಷದಿಗಳಿಗಾಗಿ ಪಕ್ಷಿಗಳನ್ನು ಹತ್ಯ ಮಾಡಲಾಗುತ್ತಿದೆ ಇದು ಸರಿಯಲ್ಲ ಎಂದು ತಿಳಿಸಿದರು. ಕ.ಸಾ.ಪ.ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ ಮಾತನಾಡಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸದೆ ನಾಶಮಾಡುತ್ತಿರುವುದು ಸರಿಯಲ್ಲ ಪ್ರತಿಯೋಬ್ಬರು ಒಂದು ಮರವನ್ನಾದರು ಉಳಿಸಿ ಬೆಳೆಸುವ ಸಂಕಲ್ಪವನ್ನು ಮಾಡಬೇಕು ಕನ್ನಡ ಬಾಷೆಯ ಪುಸ್ತಕಗಳನ್ನು ರಚಿಸಲು ಸ.ಶಾಪದಿಂದ ಜಿಲ್ಲೆಯ ಲೇಖಕರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು. ಪುಸ್ತಕ ಕುರಿತು ಹಿರಿಯ ಸಾಹಿತಿ ರಮೇಶಬಾಬು ಯಾಳಗಿಯವರು ಹಾಗೂ ಸಿಂಧನೂರು ಹಿರಿಯ ಸಾಹಿತಿ ವೆಂಕನಗೌಡ ವಟಗಲ್ ವಿಶೇಷ ಉಪನ್ಯಾಸ ನೀಡಿದರು. ಹಾಗೂ ಲೇಖಕರಾದ ಕೆ.ಈ.ನರಸಿಂಹ, ಪಕ್ಷಿಪ್ರೇಮಿ ಸಲ್ಲಾವುದ್ದೀನ್ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನೇತಾಜಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಕೆ.ವಿಜಯಲಕ್ಷ್ಮ, ಜಿಲ್ಲಾ ಕ.ಸಾ,ಪ. ಗೌ.ಕಾರ್ಯದರ್ಶಿ ತಾಯಪ್ಪ ಬಿ ಹೊಸೂರು , ತಾ.ಅಧ್ಯಕ್ಷರಾದ ರವಿಕುಮಾರ ಪಾಟೀಲ್, ನಿಕಟಪೂರ್ವ ಜಿಲ್ಲಾ ಕ.ಸಾ.ಪ. ಅಧ್ಯಕ್ಷರಾದ ಮಹಾಂತೇಶ ಮಸ್ಕಿ, ವಲಯ ಅರಣ್ಯಾಧಿಕಾರಿ ರಾಜೇಶನಾಯಕ, ದಿನಪತ್ರಿಕೆಯ ವರದಿಗಾರರಾದ ಪಿ.ಪರಮೇಶ,ಶರಣ ಬಸವ ನೀರಮಾನ್ವಿ, ವ್ಯಂಗ ಚಿತ್ರಕರಾದ ಈರಣ್ಣ ಬೆಂಗಾಲಿ, ವೀರಹನುಮಾನ್, ಹಿರಿಯ ಛಾಯಗ್ರಾಹಕರಾದ ಜಗನ್ನಾಥಚೌಧರಿ ಸೇರಿದಂತೆ ಇನ್ನಿತರರು ಇದ್ದರು.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ