ಸತೀಶ ಜಾರಕಿಹೋಳಿಯವರ ಹೇಳಿಕೆಯನ್ನು ತಿರುಚಲಾಗಿದೆ: ಬಿ.ಶಿವರಾಜ
ಸತೀಶ ಜಾರಕಿಹೋಳಿಯವರ ಹೇಳಿಕೆಯನ್ನು ತಿರುಚಲಾಗಿದೆ: ಬಿ.ಶಿವರಾಜ
Vishwavani News
November 10, 2022
ಮಾನವಿ: ಮಾನವಿಯತೆಯನ್ನು,ವೈಚಾರಿಕತೆಯನ್ನು, ಮೂಡಿಸುವ ಉದ್ದೇಶದಿಂದ ಬುದ್ದ,ಬಸವ,ಅಂಬೇಡ್ಕರ್ ರವರ ತತ್ವ ಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ವೇದಿಕೆಯ ಸಂಸ್ಥಾಪಕರಾದ ಸತೀಶ ಜಾರಕಿಹೋಳಿಯವರು ನಾಡಿನಾಧ್ಯಂತ ಹಾಲವು ಕಾರ್ಯಕ್ರಗಳನ್ನು ನಡೆಸುತ್ತಿದ್ದಾರೆ ಎಂದು ಬಿ ಶಿವರಾಜ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಬಿ.ಶಿವರಾಜ ಮಾತನಾಡಿ ರಾಜ್ಯಾಧ್ಯಂತ ನ.೬ರಂದು ನಿಪ್ಪಾಣಿಯಲ್ಲಿ ನಡೆದ ವೇದಿಕೆಯ ಕಾರ್ಯಕ್ರಮದಲ್ಲಿ ಅನೇಕ ಗ್ರಂಥಗಳ ಅಧ್ಯಯನ ನಡೆಸಿ ಹಿಂದೂ ಪದದ ಅರ್ಥವನ್ನು ಮಾತ್ರ ಹೇಳಿದ್ದು ಅವರು ಹಿಂದೂ ಧರ್ಮದ ಬಗ್ಗೆ ಅಥವ ಹಿಂದೂ ಧರ್ಮದ ವ್ಯಕ್ತಿಗಳ ಬಗ್ಗೆ ಯಾವುದೇ ಹೇಳಿಕೆ ಗಳನ್ನು ನೀಡಿಲ್ಲ ಆದರೆ ಅವರ ರಾಜಕೀಯ ಏಳಿಗೆಯನ್ನು ಸಹಿಸದೆ ಇರುವವರು ಅವರ ಬಗ್ಗೆ ಅನೇಕ ತಪ್ಪು ಹೇಳಿಕೆಗಳನ್ನು ಪ್ರತಿಭಟನೆಯನ್ನು ನಡೆಸುತ್ತಿದ್ದು ಅವುಗಳನ್ನು ಕೈಬಿಡ ಬೇಕು ಇಲ್ಲದೇ ಇದ್ದಲ್ಲಿ ಅವರ ಪರವಾಗಿ ಹೋರಾಟ ಗಳನ್ನು ನಡೆಸಲಾಗುವುದು ಎಂದು ತಿಳಿಸಿದರು.
ಪಿ,ತಿಪ್ಪಣ್ಣ ವಕೀಲರು, ಲಕ್ಷ್ಮಣ, ಮಾರೆಪ್ಪ, ಶಿವಪ್ಪನಾಯಕ, ಶರಣ ಬಸವ ನಾಯಕ, ನರಸೀಂಹ ಸಿಕಾಲ್,ಮಂಜುನಾಥ ದದ್ದಾಲ್ ಇದ್ದರು.