ಮಾನವಿ ಹಿರಿಯ ಪತ್ರಕರ್ತ ವಿ.ಶ್ರೀನಿವಾಸರಾವ್ ನಿಧನ
ಮಾನವಿ ಹಿರಿಯ ಪತ್ರಕರ್ತ ವಿ.ಶ್ರೀನಿವಾಸರಾವ್ ನಿಧನ
Vishwavani News
December 14, 2022
ಮಾನವಿ: ತಾಲೂಕಿನ ಹಿರಿಯ ಪತ್ರಕರ್ತ ವಿ.ಶ್ರೀನಿವಾಸರಾವ್ (60) ಮಂಗಳವಾರ ರಾತ್ರಿ ಕೊಟ್ಟಾಯಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಪ್ರತಿವರ್ಷ ಅಯ್ಯಪ್ಪಸ್ವಾಮಿ ಮಾಲೆ ಹಾಕುತ್ತಿದ್ದ ಇವರು ಈ ವರ್ಷವೂ ಕೂಡಾ ಅಯ್ಯಪ್ಪಸ್ವಾಮಿ ಮಾಲೆ ಹಾಕಿ ಹಿರೇಕೊಟ್ನೆ ಕಲ್ ಗ್ರಾಮದ ಸ್ನೇಹಿತರೊಂದಿಗೆ ಜೀಪಿ ನಲ್ಲಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದರ್ಶನಕ್ಕೆ ತೆರಳಿದ್ದರು. ದಾರಿ ಮಧ್ಯೆ ಆರೋಗ್ಯ ದಲ್ಲಿ ಏರುಪೇರಾದ ಕಾರಣ ಅವರನ್ನು ಸಮೀಪದ ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರು ಪತ್ನಿ ಗೋಪಿಕಾ ದೇಸಾಯಿ, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಗಳನ್ನು ಬಿಟ್ಟಗಲಿದ್ದಾರೆ. ಕಳೆದ ಕೆಲವು ತಿಂಗಳುಗಳ ಹಿಂದೆಯಷ್ಟೇ ಇವರ ಪುತ್ರ ಮಣಿಕಂಠ ರಸ್ತೆ ಅಪಘಾತದಲ್ಲಿ ನಿಧನ ಹೊಂದಿದ್ದರು.
ನಿಧನದ ಸುದ್ದಿ ತಿಳಿದು ವಿ.ಶ್ರೀನಿವಾಸರಾವ್ ಅವರ ಪುತ್ರಿ ಮತ್ತು ಸಂಭಂಧಿಕರು ಕೊಟ್ಟಾಯಂಗೆ ತೆರಳಿದ್ದು ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ಪಾರ್ಥಿವ ಶವವನ್ನು ಮಾನ್ವಿಗೆ ತಂದು ಅಂತ್ಯಕ್ರಿಯೆ ಮಾಡಲಾ ಗುವುದು ಎಂದು ತಿಳಿದುಬಂದಿದೆ.
ಸಂತಾಪ:ಮೃತ ವಿ.ಶ್ರೀನಿವಾಸರಾವ್ ಇವರ ನಿಧನಕ್ಕೆ ಮಾನ್ವಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು, ಸದಸ್ಯರು, ಪತ್ರಕರ್ತರು, ಗಣ್ಯರು, ವಿವಿಧ ರಾಜಕೀಯ ಪಕ್ಷದ ಮುಖಂಡರು ಸಂತಾಪ ಸೂಚಿಸಿದ್ದಾರೆ.