BY Vijayendra: ಜನಪ್ರತಿನಿಧಿಗಳ ಕಥೆ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು? ಬಿ.ವೈ. ವಿಜಯೇಂದ್ರ ಪ್ರಶ್ನೆ
ಜನಪ್ರತಿನಿಧಿಗಳ ಕಥೆ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
Vishwavani News
December 23, 2024
ಶಿವಮೊಗ್ಗ: ಜನಪ್ರತಿನಿಧಿಗಳ ಕಥೆ ಹೀಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ತಿಳಿಸಿದರು. ಶಿವಮೊಗ್ಗದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿ.ಟಿ. ರವಿNews in Kannada (CT Ravi) ಅವರು ಆ ರೀತಿಯ ಮಾತನ್ನು ಹೇಳಿಲ್ಲವೆಂದು ಸಭಾಪತಿ ಹೊರಟ್ಟಿಯವರು ಸ್ಪಷ್ಟವಾಗಿ ಹೇಳಿದ್ದಾರೆ. ಇಂಥ ಸಂದರ್ಭದಲ್ಲಿ ಈ ವಿಚಾರ ಅಲ್ಲಿಗೇ ಮುಗಿಯಬೇಕಿತ್ತು. ದೂರು ನೀಡಿದರು, ಅದರ ಬಳಿಕ ಪೊಲೀಸರು ಸಿ.ಟಿ.ರವಿ ಅವರನ್ನು ಬಂಧಿಸಿದರು. ಪೊಲೀಸರ ಅತಿರೇಕದ ವರ್ತನೆ ನಡೆದಿದೆ ಎಂದು ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | IPPB Recruitment 2024: ಅಂಚೆ ಬ್ಯಾಂಕ್‌ನಲ್ಲಿ ವಿಶೇಷ ಹುದ್ದೆಗಳಿಗೆ ಅರ್ಜಿ ಆಹ್ವಾನ, ಹೀಗೆ ಅರ್ಜಿ ಸಲ್ಲಿಸಿ
ಸದನದ ಒಳಗಡೆ ಸಭಾಧ್ಯಕ್ಷರ ತೀರ್ಮಾನವೇ ಅಂತಿಮ
ಪೊಲೀಸರು ನೋಟಿಸ್ ಕೊಡದೆ ಎಫ್‍ಐಆರ್ ದಾಖಲಿಸಿದ್ದು ಸರಿಯಲ್ಲ ಎಂದು ರಾಜ್ಯ ಹೈಕೋರ್ಟ್ ತಿಳಿಸಿದೆ. ಸಭಾಪತಿಗಳು ಮತ್ತೊಮ್ಮೆ ಇವತ್ತು ಹೇಳಿಕೆ ಕೊಟ್ಟಿದ್ದು, ಸಿ.ಟಿ.ರವಿ ಅವರು ಅಂಥ ಹೇಳಿಕೆ ಕೊಟ್ಟಿಲ್ಲ ಎಂದಿದ್ದಾರೆ. ಸದನದ ಒಳಗಡೆ ಸಭಾಧ್ಯಕ್ಷರ ತೀರ್ಮಾನವೇ ಅಂತಿಮ ಎಂದು ಹೇಳಿದರು.
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಗಾಗ ದೂರವಾಣಿ ಕರೆ ಬರುತ್ತಿತ್ತು. ಅವರ ನಿರ್ದೇಶನದಂತೆ ಸಿ.ಟಿ.ರವಿ ಅವರನ್ನು ಕರೆದೊಯ್ಯುತ್ತಿದ್ದರು. ಹಾಗಾಗಿ ಆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಯಾವ ಅಧಿಕಾರಿ ಫೋನ್ ಮಾಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಆ ಅಧಿಕಾರಿಗಳಿಗೆ ಯಾವ ಸಚಿವರ ಒತ್ತಡ ಇತ್ತು? ಗೃಹ ಸಚಿವರು ಫೋನ್ ಮಾಡಿದರೇ? ಮುಖ್ಯಮಂತ್ರಿಗಳು ಫೋನ್ ಮಾಡಿದ್ದರೇ? ಎಂದು ಕೇಳಿದ ಅವರು, ಇವೆಲ್ಲವೂ ತನಿಖೆ ಆಗಲೇಬೇಕಾಗುತ್ತದೆ ಎಂದು ತಿಳಿಸಿದರು.
ಆನೆ ನಡೆದಿದ್ದೇ ದಾರಿ ಎಂಬಂತಾಗಿದೆ
ಸಿ.ಟಿ.ರವಿ ಅವರ ಮೇಲಾದುದು ನಾಳೆ ಇನ್ನೊಬ್ಬರ ಮೇಲೂ ಆಗುತ್ತದೆ. ಕಾಂಗ್ರೆಸ್ ಪಕ್ಷ, ಮುಖ್ಯಮಂತ್ರಿಗಳಾದಿಯಾಗಿ ಇವರ‍್ಯಾರೂ ಟೀಕೆಗಳನ್ನು ಸಹಿಸುತ್ತಿಲ್ಲ. ಆನೆ ನಡೆದಿದ್ದೇ ದಾರಿ ಎಂಬಂತಾಗಿದೆ. ಬಾಣಂತಿಯರ ಸಾವಿನ ಬಗ್ಗೆ ಯಾರು ಚರ್ಚೆ ಮಾಡುತ್ತಿದ್ದಾರೆ ಎಂದು ಕೇಳಿದ ಅವರು, ಬೇಜವಾಬ್ದಾರಿ ಸರ್ಕಾರ ರಾಜ್ಯದಲ್ಲಿದ್ದು, ಸಮರ್ಪಕ ಹೇಳಿಕೆಯನ್ನೂ ಕೊಟ್ಟಿಲ್ಲ. ಆ ಕುಟುಂಬಗಳ ನೆರವಿಗೂ ಧಾವಿಸಿಲ್ಲ ಎಂದು ಅವರು ದೂರಿದರು.
ಖುಷಿ ಬಂದಂತೆ ಸರ್ಕಾರ ನಡೆಸುತ್ತಿರುವ ಧಾಟಿ ಇವರದು
ಖುಷಿ ಬಂದಂತೆ ಸರ್ಕಾರ ನಡೆಸುತ್ತಿರುವ ಧಾಟಿ ಇವರದು. ಖಂಡಿತ ಇದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷಕ್ಕೆ ಎಷ್ಟು ಜವಾಬ್ದಾರಿ ಇದೆಯೋ ಅಷ್ಟೇ ಜವಾಬ್ದಾರಿ ವಿಪಕ್ಷಕ್ಕೂ ಇದೆ. ವಿಪಕ್ಷಗಳ ಕೂಗು ಹತ್ತಿಕ್ಕುವುದು, ಜನರ ಪರವಾಗಿ ಧ್ವನಿ ಎತ್ತುವುದು ನಮ್ಮ ಜವಾಬ್ದಾರಿಯಾಗಿದೆ. ಅದಕ್ಕೆ ಕವಡೆ ಕಾಸಿನ ಕಿಮ್ಮತ್ತು ಕೊಡದ ಸರ್ಕಾರ, ಆಡಳಿತ ಪಕ್ಷದವರು ಸಂವಿಧಾನದ ಬಗ್ಗೆ ಭಾಷಣ ಬಿಗಿಯುತ್ತಾರೆ ಎಂದು ಟೀಕಿಸಿದರು.
ಈ ಸುದ್ದಿಯನ್ನೂ ಓದಿ | DHL QR CODE: ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡೋ ಮುನ್ನ ಎಚ್ಚರ…ಎಚ್ಚರ…! ಸ್ವಲ್ಪ ಯಾಮಾರಿದ್ರೂ ನಿಮ್ಮ ಹಣ ಮಂಗಮಾಯ
ಎಫ್‍ಎಸ್‍ಎಲ್ ವರದಿ ಬಂದೇ ಇಲ್ಲ. ಅಷ್ಟರೊಳಗೆ ಕ್ಷಮೆ ಕೇಳಲು ಆತುರವೇಕೆ? ಸಿ.ಟಿ.ರವಿ ಮತ್ತು ಸಭಾಪತಿಗಳು ಸ್ಪಷ್ಟವಾಗಿ ಹೇಳಿದ್ದಾರೆ. ತನಿಖೆ ನಡೆದು ವರದಿ ಬರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು.