leopard spotted: ಚಿರತೆಯ ಬಾಲ ಹಿಡಿದು ಬೋನಿಗೆ ಹಾಕಿದ ಯುವಕ!
leopard spotted: ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಚಿರತೆಯನ್ನು ಹಿಡಿಯಲು ಅರಣ್ಯ ಸಿಬ್ಬಂದಿ ಪರದಾಡುತ್ತಿದ್ದಾಗ, ಯುವಕ ಚಿರತೆಯ ಬಾಲವನ್ನು ಹಿಡಿದು ಬೋನಿಗೆ ಹಾಕಿದ್ದಾನೆ.
Prabhakara R
January 7, 2025
ತುಮಕೂರು: ಸಾಮಾನ್ಯವಾಗಿ ಹುಲಿ, ಚಿರತೆ ಕಂಡರೆ (leopard spotted) ಜನರು ಮೈಲಿ ದೂರ ಓಡುತ್ತಾರೆ. ಆದರೆ, ಇಲ್ಲೊಬ್ಬ ಮಹಾಶಯ, ಚಿರತೆ ಬಾಲ ಹಿಡಿದು ಬೋನಿಗೆ ಹಾಕಿರುವುದು ಕಂಡುಂದಿದೆ. ತಿಪಟೂರು ತಾಲೂಕಿನ ರಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಆನಂದ್ ಎಂಬ ಯುವಕ ಚಿರತೆಯನ್ನು ಹಿಡಿದಿದ್ದು, ಆತನ ಚಾಕಚಕ್ಯತೆ ಮತ್ತು ಧೈರ್ಯ, ಸಾಹಸಕ್ಕೆ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿರತೆಯೊಂದು ಹಲವು ದಿನಗಳಿಂದ ರಂಗಾಪುರ ಗ್ರಾಮದ ಸುತ್ತಮುತ್ತ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.ಅದನ್ನು ಸೆರೆ ಹಿಡಿಯಲು ಸತತ ಪ್ರಯತ್ನ ನಡೆದಿತ್ತು. ಈ ನಡುವೆ ಪುರಲೇಹಳ್ಳಿ ರಸ್ತೆಯಲ್ಲಿರುವ ಕುಮಾರ್ ಎಂಬವರ ಮನೆ ಬಳಿ ಚಿರತೆ ಕಾಣಿಸಿಕೊಂಡಿದೆ.
ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಿಟ್ಟು ಚಿರತೆ ಸೆರೆಹಿಡಿಯುವ ಸಲುವಾಗಿ ಆಗಮಿಸಿದ್ದರು. ಆದರೆ ಚಿರತೆ ಸೆರೆಹಿಡಿಯಲಾಗದೇ ಕೈಚೆಲ್ಲಿ ಕುಳಿತರು. ಈ ವೇಳೆ ಅಲ್ಲಿಗೆ ಬಂದ ಆನಂದ ಚಿರತೆ ನೋಡಿ ಹಿಡಿಯಲು ಮುಂದಾಗಿ ಚಲಬಿಡದೆ ಕೊನೆಗೆ ಅದರ ಬಾಲ ಹಿಡಿದು ಬೋನಿಗೆ ಹಾಕಿದ್ದಾನೆ. ಯುವಕನ ನೋಡುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಕೊನೆಗೆ ಸುಮಾರು 5 ವರ್ಷದ ಚಿರತೆಯನ್ನು ಹಿಡಿದ ಆನಂದ್ ಅವರ ಸಾಹಸವನ್ನು ಕೊಂಡಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Scam: ಬಾಲಿವುಡ್ ಖ್ಯಾತ ನಟಿಗೆ ಕೋಟ್ಯಂತರ ರೂ. ಪಂಗನಾಮ! ಏನಿದು ಕೇಸ್?
ಖಡ್ಗಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೆ ಆಗಿದ್ದೇನು? ವಿಡಿಯೊ ಇದೆ
ದಿಸ್ಪುರ್: ಏಕ ಕೊಂಬಿನ ಖಡ್ಗಮೃಗಗಳಿಗೆ ನೆಲೆಯಾಗಿರುವ ಅಸ್ಸಾಂನ ಕಾಜಿರಂಗಾ ರಾಷ್ಟ್ರೀಯ ಉದ್ಯಾನವು ಪ್ರಕೃತಿ ಉತ್ಸಾಹಿಗಳಿಗೆ ನೆಚ್ಚಿನ ತಾಣವಾಗಿದೆ. ಇಲ್ಲಿ ಜೀಪ್ ಸಫಾರಿ ಮಾಡುತ್ತಾ ಸಂದರ್ಶಕರಿಗೆ ಒಂದು ಕೊಂಬಿನ ಖಡ್ಗಮೃಗಗಳು ಮತ್ತು ಇತರ ಪ್ರಾಣಿಗಳನ್ನು ಹತ್ತಿರದಿಂದ ನೋಡುವ ಅವಕಾಶವನ್ನು ನೀಡುತ್ತದೆ. ಆದರೆ ಈ ಮೋಜಿನ ಸವಾರಿ ಇಲ್ಲೊಬ್ಬ ತಾಯಿ-ಮಗಳಿಗೆ ಬಹಳ ಅಪಾಯಕಾರಿಯಾಗಿದೆ. ಅವರು ಸ್ವಲ್ಪದರಲ್ಲೇ ತಮ್ಮ ಪ್ರಾಣದೊಂದಿಗೆ ಪಾರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ವಿಡಿಯೊದಲ್ಲಿ, ಖಡ್ಗಮೃಗವು ಉದ್ಯಾನವನದೊಳಗೆ ಹೋಗುತ್ತಿದ್ದಾಗ ಅದರ ಹಿಂದೆ ಪ್ರವಾಸಿಗರನ್ನು ತುಂಬಿಕೊಂಡು ಬಂದಿರುವ ಸಫಾರಿ ಜೀಪು ಬಂದಿದೆ. ಈ ನಡುವೆ ಪ್ರವಾಸಿಗರಿಂದ ತುಂಬಿರುವ ಮೂರು ಜೀಪುಗಳು ಬಲ ತಿರುವು ತೆಗೆದುಕೊಳ್ಳುವಾಗ ಮೊದಲ ಎರಡು ಜೀಪುಗಳು ವೇಗವಾಗಿ ಚಲಿಸುತ್ತಿದ್ದಂತೆ, ಸಮತೋಲನ ಕಳೆದುಕೊಂಡು ಯುವತಿಯೊಬ್ಬಳು ತನ್ನ ತಾಯಿಯೊಂದಿಗೆ ನೆಲದ ಮೇಲೆ ಬಿದ್ದಿದ್ದಾಳೆ. ಇಬ್ಬರೂ ಸಹಾಯಕ್ಕಾಗಿ ಕೂಗಿದ್ದಾರೆ.
ಆ ಕ್ಷಣದಲ್ಲಿ, ಮತ್ತೊಂದು ಖಡ್ಗಮೃಗವು ಪ್ರವಾಸಿಗರ ವಾಹನದ ಮೇಲೆ ದಾಳಿ ಮಾಡಲು ಸಮೀಪಿಸಿದೆ. ಕೋಪದಿಂದ ಬರುತ್ತಿರುವ ಖಡ್ಗಮೃಗವನ್ನು ನೋಡಿ, ಮೂರನೇ ಜೀಪ್ ಹಿಂದಕ್ಕೆ ಹೋಗಿದೆ. ಕಾಜಿರಂಗ ರಾಷ್ಟ್ರೀಯ ಉದ್ಯಾನವನದ ಬಗೋರಿ ಶ್ರೇಣಿಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
কাজিৰঙাত জিপ চাফাৰীৰ মাজতে ওলাল দুটাকৈ গঁড়। এখন জিপচিৰ পৰা পৰি গল মাতৃ কন্যা।ভয়ংকৰ অঘটনৰ পৰা ৰক্ষা। এনেকৈয়েই কাজিৰঙাত পৰ্যটকক সুৰক্ষা দিছে বিভাগীয় ভাবে!#Kaziranga pic.twitter.com/wJ3ZFNNd8p— Pankaj Bhattacharjee (@pankajbhatta) January 6, 2025
ವರದಿ ಪ್ರಕಾರ, ಇಬ್ಬರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ. ಪ್ರವಾಸಿಗರೊಬ್ಬರು ಈ ಭಯಾನಕ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದು ವೈರಲ್ ಆಗಿದ್ದು, ಪ್ರವಾಸಿಗರ ಸುರಕ್ಷತೆಯ ಬಗ್ಗೆ ಕಳವಳ ಮೂಡಿದೆ. ಕಾಜಿರಂಗಾ ಆಡಳಿತವು ಘಟನೆಯ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ. ಸಫಾರಿ ಸಮಯದಲ್ಲಿ ಪ್ರವಾಸಿಗರು ಜಾಗರೂಕರಾಗಿರಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:ಗೋವಾದಲ್ಲಿ ‘ಮಹಾ ಕುಂಭಮೇಳ’; ನೀರಿನ ಪ್ರವಾಹಕ್ಕೆ ಕೊಚ್ಚಿ ಹೋದ ಮರಳು ಮಾದರಿ ವಿಡಿಯೊ ವೈರಲ್
ಕಾಜಿರಂಗ ರಾಷ್ಟ್ರೀಯ ಉದ್ಯಾನವು ಕಳೆದ ಎರಡು ದಶಕಗಳಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಿದೆ. 2024 ರ ಅಕ್ಟೋಬರ್‌ನಲ್ಲಿ ಶುರುವಿನಲ್ಲಿಯೇ 1,64,636 ಜನರು ಭೇಟಿ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಉದ್ಯಾನವನವು ಸಾಮಾನ್ಯವಾಗಿ ಅಕ್ಟೋಬರ್‌ನಿಂದ ಮೇ ತಿಂಗಳವರೆಗೆ ತೆರೆದಿರುತ್ತದೆ, ನಂತರ ಇದು ಮಾನ್ಸೂನ್ ವಿರಾಮವನ್ನು ತೆಗೆದುಕೊಳ್ಳುತ್ತದೆ.