Tumkur News: ಜಮೀನು ವಿವಾದ- ಕೊಲೆಗೆ ಸುಫಾರಿ ಕೊಟ್ಟ ಲೇಡಿ ಪೊಲೀಸ್... ಇದು ಖಾಕಿಯ ʻಕಿಲ್ಲಿಂಗ್ʼ ಪ್ಲ್ಯಾನ್!
Tumkur News: ಎಸ್ಪಿ ಕಚೇರಿಯಲ್ಲಿ ಲೇಡಿ ಪೊಲೀಸ್ ಆಗಿರುವ ಶಾಂತಲ ಜಮೀನಿನ ವಿವಾದದಲ್ಲಿ ಕೊಲೆಗೆ ಸುಫಾರಿ ನೀಡಿದ್ದಾರೆ.
Deekshith Nair
January 8, 2025
ಬೆಂಗಳೂರು: ಖಾಕಿಗೆ ಅದರದ್ದೇ ಆದ ಮರ್ಯಾದೆ ಮತ್ತು ಗೌರವವಿದೆ. ಕಾನೂನನ್ನು ಕಾಪಾಡಬೇಕಾದ ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ಜನ ಸಾಮಾನ್ಯರನ್ನು ರಕ್ಷಿಸಬೇಕಾದ ಜವಾಬ್ದಾರಿ ಪೊಲೀಸರಿಗೆ ಇರುತ್ತದೆ. ಆದರೆ ಇಲ್ಲೊಬ್ಬ ಲೇಡಿ ಕಾನ್‌ಸ್ಟೇಬಲ್ ಖಾಕಿ ತೊಟ್ಟಿರುವುದನ್ನೇ ಮರೆತು ಸುಫಾರಿ ಕಿಲ್ಲರ್ ರೀತಿ ವರ್ತಿಸಿದ್ದಾರೆ. ಇದೀಗ ಅವರ ವಿರುದ್ಧ ಜಮೀನು ವಿವಾದದಲ್ಲಿ ಸಂಬಂಧಿಕರೊಬ್ಬರ ಕೊಲೆಗಾಗಿ ಎಸ್.ಪಿ ಕಚೇರಿಯಲ್ಲಿಯೇ ಕುಳಿತು ಸುಫಾರಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ(Tumkur News)
ತುಮಕೂರು ಎಸ್ಪಿ ಕಚೇರಿಯಲ್ಲಿ ಪೊಲೀಸ್ ಆಗಿರುವ ಶಾಂತಲಾ(Lady Constable) ಅವರಿಗೆ ಶಿವರಂಗಯ್ಯ ಎಂಬುವರ ಜೊತೆಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಜಗಳಗಳಾಗಿದ್ದವು. ವಿವಾದಗಳು ಮುಗಿಯದ ಕಾರಣ ಶಾಂತಲ ಹೇಮಂತ್ ಕುಮಾರ್ ಎಂಬ ವ್ಯಕ್ತಿಗೆ ಸುಫಾರಿ ನೀಡುವುದಾಗಿ ಹೇಳಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ನಿವಾಸಿಯಾದ ಶಿವರಂಗಯ್ಯ ಅವರನ್ನು ಕೊಲೆ ಮಾಡುವಂತೆ ಹೇಳಿದ್ದಾರೆ. ಕೊರಟಗೆರೆ ತಾಲೂಕಿನ ಸಂಕೇನಹಳ್ಳಿ ಗ್ರಾಮದ ಹೇಮಂತ್ ಕುಮಾರ್ ಶಿವರಂಗಯ್ಯ ಮನೆಗೆ ಹೋಗಿ ಹಲವು ಬಾರಿ ಮಾತುಕತೆ ನಡೆಸಿದ್ದಾನೆ. ಜಮೀನು ವಿವಾದ ಇತ್ಯರ್ಥವಾಗದೆ ಇದ್ದರೆ ತೋಟ ಅಥವಾ ಕಾಡಿನ ಬಳಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.(Supari Case)
ಶಿವರಂಗಯ್ಯ ಅವರ ಕೊಲೆಗೆ ಲೇಡಿ ಪೊಲೀಸ್ ಶಾಂತಲಾ ಸುಫಾರಿ ಕೊಡುವುದಾಗಿ ಹೇಳಿದ್ದಾರೆಂದು ಸ್ವತಃ ಹೇಮಂತ್ ಕುಮಾರ್ ಹೇಳಿದ್ದಾನೆ. ನಿಮ್ಮನ್ನು ಕೊಲೆ ಮಾಡುವುದಾಗಿ ಸುಫಾರಿ ಪಡೆಯಲಿದ್ದೇನೆ. ಆದರೆ ನಿಮ್ಮನ್ನು ಕೊಲೆ ಮಾಡುವುದಿಲ್ಲ. ನೀವೇ ಇಂತಿಷ್ಟು ಹಣ ಕೊಟ್ಟುಬಿಡಿ. ನಿಮ್ಮನ್ನು ಕೊಲೆ ಮಾಡಿರುವುದಾಗಿ ಶಾಂತಲ ಅವರನ್ನು ನಂಬಿಸುತ್ತೇನೆ. ನೀವು ಸತ್ತಂತೆ ನಟಿಸಿ ಒಂದು ಫೋಟೊ ಕಳುಹಿಸಿ ಎಂದು ಹೇಮಂತ್ ಶಿವರಂಗಯ್ಯ ಅವರ ಬಳಿ ಹೇಳಿದ್ದಾನೆ. ಈ ಮೊದಲು ಫೋನ್ ಕರೆಯ ಮೂಲಕ ನಕಲಿ ಪತ್ರಕರ್ತನ ಸೋಗಿನಲ್ಲಿ ಮಾತನಾಡಿ ಹೆದರಿಸಲು ಪ್ರಯತ್ನಿಸಿದ್ದಾನೆ. ಇಬ್ಬರ ನಡುವಿನ ಸಂಭಾಷಣೆಯ ವಿಡಿಯೊ ಲಭ್ಯವಾಗಿದೆ.
ಜೀವ ಭಯದಿಂದ ಶಿವರಂಗಯ್ಯ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಶಾಂತಲ ಮತ್ತು ಹೇಮಂತ್ ಕುಮಾರ್ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ರಾಜಿ ಪಂಚಾಯಿತಿ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಶಿವರಂಗಯ್ಯ ಅವರಿಗೆ ಹಾಗಲವಾಡಿಯಲ್ಲಿ 30 ಎಕರೆ ಜಮೀನಿದ್ದು, ಈ ಜಮೀನು ಅವರಿಗೆ ಪಿತ್ರಾರ್ಜಿತವಾಗಿ ಬಂದಿದೆ. ಶಾಂತಲ ಶಿವರಂಗಯ್ಯನ ಅಕ್ಕನ ಮಗಳಾಗಿದ್ದು, ಜಮೀನಿನಲ್ಲಿ ಭಾಗ ಕೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಹಲವು ವರ್ಷಗಳಿಂದ ಜಗಳಗಳಾಗಿದ್ದವು. ಮನಃಸ್ತಾಪವಿತ್ತು ಎಂದು ತಿಳಿದು ಬಂದಿದೆ.
ಸಲ್ಮಾನ್ ಖಾನ್ ಹತ್ಯೆಗೆ ₹ 25 ಲಕ್ಷ ಸುಪಾರಿ
ಕೆಲ ತಿಂಗಳುಗಳ ಹಿಂದೆಯಷ್ಟೇ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್(Bishnoi Gang) ಹಿಟ್‌ಲಿಸ್ಟ್‌ನಲ್ಲಿರುವ ನಟ ಸಲ್ಮಾನ್ ಖಾನ್(Salman Khan) ಅವರ ಹತ್ಯೆಗೆ ಬರೋಬ್ಬರಿ ₹ 25 ಲಕ್ಷದ ಸುಪಾರಿ ಪಡೆದಿರುವ ವಿಚಾರ ಚಾರ್ಜ್‌ಶೀಟ್(Chargesheet)ನಲ್ಲಿ ಬಯಲಾಗಿತ್ತು. ಬಿಷ್ಣೋಯ್ ಗ್ಯಾಂಗ್ ವಿರುದ್ಧ ನವಿ ಮುಂಬೈ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಚಾರ್ಜ್‌ಶೀಟ್‌ನಲ್ಲಿ ಐದು ಜನ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್