ಮಲ್ಪೆ ಬೀಚ್ನಲ್ಲಿ ಈಜು: ನಾಲ್ವರ ರಕ್ಷಣೆ
ಮಲ್ಪೆ ಬೀಚ್ನಲ್ಲಿ ಈಜು: ನಾಲ್ವರ ರಕ್ಷಣೆ
Vishwavani News
June 6, 2022
ಉಡುಪಿ: ಮಲ್ಪೆ ಬೀಚ್ನಲ್ಲಿ ಈಜುವ ವೇಳೆ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ರಕ್ಷಿಸಲಾಗಿದೆ.
ಬಿಜಾಪುರ ಮೂಲದ ಮೋಬಿನ್, ಸೋಫಿಯಾ,ಅಹ್ಮದ್ ಮತ್ತು ಮೊಹಮ್ಮದ್ ಎಂಬುವರನ್ನು ಮಲ್ಪೆ ಜೀವ ರಕ್ಷದ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.
ಬಿಜಾಪುರ ಮೂಲದ ಇವರು ಮಲ್ಪೆ ಬೀಚ್ಗೆ ಪ್ರವಾಸಕ್ಕೆಂದು ಬಂದಿದ್ದಾರೆ. ಕಡಲಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಮೀರಿ ಈಜಲು ತೆರಳಿದ ವೇಳೆ ಸಮುದ್ರದ ಅಲೆಗಳಲ್ಲಿ ಸಿಲುಕಿಕೊಂಡಿದ್ದು, ಕೂಡಲೇ ಇತರೆ ಪ್ರವಾಸಿಗರು ಮಾಹಿತಿ ನೀಡಿದ್ದರಿಂದ ಎಲ್ಲರ ಜೀವ ಉಳಿದಿದೆ.
ಕಡಲು ಪ್ರಕ್ಷುಬ್ದವಾಗಿದ್ದರಿಂದ ಈ ನಾಲ್ವರು ಈಜಲು ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ಅಲೆಯ ಅಬ್ಬರ ಜೋರಾಗಿದ್ದು, ಅಲೆಯ ರಭಸಕ್ಕೆ ಸಿಲುಕಿಕೊಂಡು,ಪ್ರಾಣ ರಕ್ಷಣೆಗಾಗಿ ಕೂಗಿದ್ದಾರೆ. ಸದ್ಯ ಈ ನಾಲ್ವರನ್ನು ಜೀವ ರಕ್ಷಕ ದಳದ ಭರತ್, ಮಧು, ರವಿ ಹಾಗೂ ವಿನೋದ್ ಪ್ರವಾಸಿಗರ ಪ್ರಾಣ ರಕ್ಷಿಸಿದ್ದಾರೆ. ಇದೇ ತಂಡ ನಿನ್ನೆ ಸಂಜೆಯೂ ನಾಲ್ವರನ್ನು ರಕ್ಷಿಸಿತ್ತು.