Reliance Digital: ರಿಲಯನ್ಸ್ ಡಿಜಿಟಲ್‌ನಿಂದ ʼಹ್ಯಾಪಿನೆಸ್ ಪ್ರಾಜೆಕ್ಟ್ʼ ಅಡಿ ಮಣಿಪಾಲದ ಅಜ್ಜ- ಅಜ್ಜಿ ಮೆಸ್‌ಗೆ ನೆರವು!

ರಿಲಯನ್ಸ್ ಡಿಜಿಟಲ್‌ನಿಂದ (Reliance Digital) ʼಹ್ಯಾಪಿನೆಸ್ ಪ್ರಾಜೆಕ್ಟ್ʼ ಶುರು ಮಾಡಲಾಗಿದೆ. ಅದರ ಭಾಗವಾಗಿ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಅಜ್ಜ- ಅಜ್ಜಿ ಊಟ ಎಂಬ ಹೆಸರಿನ ಮೆಸ್‌ಗೆ ಟೆಕ್ನಾಲಜಿಯ ನೆರವನ್ನು ನೀಡಲಾಗಿದೆ. ಇದಕ್ಕಾಗಿ ಕಾರ್ಯಕ್ರಮದ ಮುಖ್ಯ ನಿರೂಪಕಿ ಫರಾಹ್ ಖಾನ್ ಹಾಗೂ ಸಹ ನಿರೂಪಕ ಸಂಜೋತ್ ಕೀರ್ ಕರ್ನಾಟಕದಲ್ಲಿನ ಮಣಿಪಾಲಕ್ಕೆ ಬಂದು ಈ ಅಜ್ಜ- ಅಜ್ಜಿ ಊಟದ ಮೆಸ್‌ಗೆ ಅಗತ್ಯ ಇರುವಂಥದ್ದನ್ನು ತಲುಪಿಸಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Profile Vishwavani News December 25, 2024
ಉಡುಪಿ: ಯಾವುದೇ ವ್ಯಕ್ತಿಯ ಬದುಕಲ್ಲೂ ಕನಸುಗಳು ಇರುತ್ತವೆ. ಆದರೆ ಅದನ್ನು ನಿಜ ಮಾಡಿಕೊಳ್ಳಲು ನಾನಾ ಸವಾಲು- ಅಡೆತಡೆಗಳು ಹೆಜ್ಜೆಹೆಜ್ಜೆಗೂ ಸಿಗುತ್ತವೆ. ಅಂಥದ್ದರಲ್ಲಿ ತಂತ್ರಜ್ಞಾನದ ಸಹಾಯದಿಂದ ದೊಡ್ಡ ಮಟ್ಟದಲ್ಲಿ ಸಹಾಯ ಆಗುವಂಥ ಕನಸುಗಳಿಗೆ ರೆಕ್ಕೆ ಕಟ್ಟುವ ಉದ್ದೇಶದಿಂದ ರಿಲಯನ್ಸ್ ಡಿಜಿಟಲ್‌ನಿಂದ (Reliance Digital) ʼಹ್ಯಾಪಿನೆಸ್ ಪ್ರಾಜೆಕ್ಟ್ʼ ಶುರು ಮಾಡಲಾಗಿದೆ. ಅದರ ಭಾಗವಾಗಿ ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಅಜ್ಜ- ಅಜ್ಜಿ ಊಟ ಎಂಬ ಹೆಸರಿನ ಮೆಸ್‌ಗೆ ಟೆಕ್ನಾಲಜಿಯ ನೆರವನ್ನು ನೀಡಲಾಗಿದೆ. ಇದಕ್ಕಾಗಿ ಕಾರ್ಯಕ್ರಮದ ಮುಖ್ಯ ನಿರೂಪಕಿ ಫರಾಹ್ ಖಾನ್ ಹಾಗೂ ಸಹ ನಿರೂಪಕ ಸಂಜೋತ್ ಕೀರ್ ಕರ್ನಾಟಕದಲ್ಲಿನ ಮಣಿಪಾಲಕ್ಕೆ ಬಂದು ಈ ಅಜ್ಜ- ಅಜ್ಜಿ ಊಟದ ಮೆಸ್‌ಗೆ ಅಗತ್ಯ ಇರುವಂಥದ್ದನ್ನು ತಲುಪಿಸಿದ್ದಾರೆ. ಗೋಪಾಲಕೃಷ್ಣ ಪ್ರಭು ಹಾಗೂ ವಸಂತಿಪ್ರಭು ಅವರು ಮಣಿಪಾಲದಲ್ಲಿ ಮೆಸ್ ನಡೆಸುತ್ತಾರೆ. ಇಲ್ಲಿ ಸಿಗುವ ಅನ್‌ ಲಿಮಿಟೆಡ್ ಬಾಳೆ ಎಲೆ ಊಟಕ್ಕೆ ಅವರು ಪಡೆಯುವುದು ಅರವತ್ತು ರೂಪಾಯಿ ಮಾತ್ರ. ಈ ದಂಪತಿಗೆ ಬಹಳ ವಯಸ್ಸಾಗಿದೆ. ಆದರೂ ಇವರಿಬ್ಬರ ಉತ್ಸಾಹ, ದುಡಿಮೆಯ ಪ್ರೀತಿ ಹಾಗೂ ಇಲ್ಲಿಗೆ ಬರುವವರಿಗೆ ಊಟ ಉಣಬಡಿಸುವುದರಲ್ಲಿನ ಅಕ್ಕರಾಸ್ಥೆ ಕಣ್ಣಲ್ಲಿ ನೀರು ಬರುವಂತೆ ಮಾಡುತ್ತದೆ. ಈ ದಂಪತಿ ಪ್ರತಿ ದಿನ ತರಕಾರಿಗಳು ತರುವುದಕ್ಕೆ ಅಂತಲೇ ಆಟೋದಲ್ಲಿ ಕೆಲವು ಕಿಲೋಮೀಟರ್ ಹೋಗಿಬರಬೇಕಿತ್ತು. ಅದೇ ರೀತಿ ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದ್ದರು. ಅದರ ಹೊಗೆಯಿಂದಲೂ ಕಣ್ಣಿನ ಉರಿ ಮೊದಲಾದ ಸಮಸ್ಯೆಗಳು ಇದ್ದವು. ಇದೀಗ ರಿಲಯನ್ಸ್ ಡಿಜಿಟಲ್‌ನವರ ʼಹ್ಯಾಪಿನೆಸ್ ಪ್ರಾಜೆಕ್ಟ್ʼ ಅಡಿಯಲ್ಲಿ ಅಜ್ಜ- ಅಜ್ಜಿ ಮೆಸ್‌ಗೆ ನಾಲ್ಕು ಬರ್ನರ್ ಇರುವ ಗ್ಯಾಸ್ ಸ್ಟೌ, ರೆಫ್ರಿಜರೇಟರ್, ಅನ್ನದ ಕುಕ್ಕರ್, ಮಿಕ್ಸರ್ ಗ್ರೈಂಡರ್, ಮೈಕ್ರೋವೇವ್ ಹಾಗೂ ಸ್ಮಾರ್ಟ್ ಫೋನ್‌ಗಳನ್ನು ಸಹ ಉಚಿತವಾಗಿ ನೀಡಲಾಗಿದೆ. ಈ ಸುದ್ದಿಯನ್ನೂ ಓದಿ | Reliance Jio: ಜಿಯೋ ಪೇಮೆಂಟ್ಸ್ ಬ್ಯಾಂಕ್‌ನಿಂದ ವಿಶೇಷ ಕೊಡುಗೆ; ಹೊಸ ಖಾತೆದಾರರಿಗೆ 5 ಸಾವಿರ ಮೌಲ್ಯದ ರಿವಾರ್ಡ್ಸ್! ಮೈಕ್ರೋವೇವ್ ಓವನ್, ರೈಸ್ ಕುಕ್ಕರ್, ಸ್ಟೌ, ಗ್ರೈಂಡರ್ ಇವೆಲ್ಲದರಿಂದ ಬಹಳ ಅನುಕೂಲವಾಯಿತು ಅನ್ನುತ್ತಾ ಈ ದಂಪತಿ ತಮ್ಮ ಖುಷಿ ಹೇಳಿಕೊಂಡರು. ಗೋಪಾಲಕೃಷ್ಣ ಪ್ರಭು ಹಾಗೂ ವಸಂತಿಪ್ರಭು ಅವರ ಊಟದ ಮೆಸ್‌ಗೆ ಅಗತ್ಯಗಳು ಏನಿದ್ದವು ಇದೀಗ ರಿಲಯನ್ಸ್ ಡಿಜಿಟಲ್‌ನಿಂದ ಪೂರ್ತಿ ಆಗಿದೆ. ತಾವು ಬಯಸುವಂಥ ಕೆಲಸ, ಹುಚ್ಚಿನಂತೆ ಪ್ರೀತಿಸುವ ವೃತ್ತಿ, ಪ್ರಾಜೆಕ್ಟ್ ಮಾಡುವುದಕ್ಕೆ ತಂತ್ರಜ್ಞಾನದ ಅಡಚಣೆ ಎದುರಾಗಿರುವುದಾದರೆ ಅಂಥವರ ಜೊತೆಗೆ ರಿಲಯನ್ಸ್ ಡಿಜಿಟಲ್ ನಿಲ್ಲಲಿದೆ. ಹೆಸರಾಂತ ಸೆಲೆಬ್ರಿಟಿ ಫರಾಹ್ ಖಾನ್ ನಿರೂಪಣೆ ಮಾಡಲಿದ್ದಾರೆ. ಇತರ ಆರು ಚುರುಕಾದ ಮನಸ್ಸುಗಳು ಅವರ ಜೊತೆಗೂಡಿ ಸಹ ನಿರೂಪಣೆ ಮಾಡಲಿದ್ದಾರೆ. ಈ ಅದ್ಭುತವಾದ ತಂಡವು ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳು ಗುರುತಿಸುತ್ತದೆ ಹಾಗೂ ಅಗತ್ಯ ಇರುವ ತಂತ್ರಜ್ಞಾನಗಳನ್ನು ರಿಲಯನ್ಸ್ ಡಿಜಿಟಲ್ ನಿಂದ ಒದಗಿಸಲಾಗುತ್ತದೆ. ಇನ್ನೂ ಮುಂದುವರಿದು ರಿಲಯನ್ಸ್ ಡಿಜಿಟಲ್ಸ್ ನ ನುರಿತ ಸಿಬ್ಬಂದಿ ಬೆಂಬಲ ನೀಡುತ್ತಾರೆ, ಅವರನ್ನು ʼಟೆಕ್ ದೋಸ್ತ್ʼ ಎನ್ನಲಾಗುತ್ತದೆ. ಈ ಕಾರ್ಯಕ್ರಮವು ಕೋಲ್ಕತ್ತಾದ ಶೋಶೋಬ್ ಎಂಬ ಎನ್‌ಜಿಒ ಜತೆಗೆ ಪ್ರಾರಂಭವಾಯಿತು. ಇದು ಅಶಕ್ತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸಲು ಮೀಸಲಾಗಿದೆ. ತಮ್ಮ ಶಾಲೆಯಲ್ಲಿನ ಉಜ್ವಲ ಮನಸ್ಸಿನವರಿಗೆ ಕಲಿಕೆಯ ಅನುಭವವನ್ನು ಹೆಚ್ಚಿಸಲು ರಿಲಯನ್ಸ್ ಡಿಜಿಟಲ್‌ನಿಂದ ಅವರಿಗೆ ತಾಂತ್ರಿಕ ಬೆಂಬಲವನ್ನು ಒದಗಿಸಿದೆ. ಆ ಸ್ಥಳಕ್ಕೆ ಅಗತ್ಯವಾದ ಪರಿಕರಗಳನ್ನು ಒದಗಿಸಿದ್ದು, ಶೋಶೋಬ್ ಈಗ ಉಜ್ವಲ ಭವಿಷ್ಯವನ್ನು ರೂಪಿಸುವ ದಾರಿಯಲ್ಲಿದೆ. ಈ ಕಾರ್ಯಕ್ರಮದ ಬಗ್ಗೆ ಮಾತನಾಡಿದ ರಿಲಯನ್ಸ್ ಡಿಜಿಟಲ್‌ನ ವಕ್ತಾರರು, ʼತಂತ್ರಜ್ಞಾನ ಎಂಬುದು ಇವತ್ತಿಗೆ ಜಗತ್ತಿನಲ್ಲಿ ಆಟವನ್ನೇ ಬದಲಿಸುವಂಥದ್ದಾಗಿದೆ. ರಿಲಯನ್ಸ್ ಡಿಜಿಟಲ್‌ನಲ್ಲಿ, ನಾವು ತಂತ್ರಜ್ಞಾನದ ಶಕ್ತಿಯನ್ನು ಗುರುತಿಸುತ್ತೇವೆ ಮತ್ತು ನಮ್ಮ ವಿಶಿಷ್ಟವಾಗಿ ವೈಯಕ್ತಿಕ ಸವಾಲುಗಳನ್ನು ಎದುರಿಸುವುದಕ್ಕೆ ಸೂಕ್ತವಾದ ಪರಿಹಾರಗಳನ್ನು ನೀಡುವ ಮೂಲಕ ಅದನ್ನು ವೈಯಕ್ತಿಕ ಮಟ್ಟದಲ್ಲಿ ನಂಬುತ್ತೇವೆ. ತಂತ್ರಜ್ಞಾನದ ಸಬಲೀಕರಣ ಧ್ಯೇಯದೊಂದಿಗೆ ಹ್ಯಾಪಿನೆಸ್ ಪ್ರಾಜೆಕ್ಟ್ ಬರುತ್ತಿದ್ದು, ಭಾರತವು ಹೊಸ ಮತ್ತು ಉಜ್ವಲವಾದ ನಾಳೆಗೆ ಜಿಗಿಯುತ್ತಿರುವಾಗ ನಮ್ಮ ಬ್ರ್ಯಾಂಡ್‌ಗೆ ಸಂಪೂರ್ಣವಾಗಿ ತಾಳೆಯಾಗುತ್ತದೆʼ ಎಂದು ಹೇಳಿದ್ದಾರೆ. ಈ ಸುದ್ದಿಯನ್ನೂ ಓದಿ | Tumkur News: ಮಹಿಳೆಯ ಬ್ಯಾಗ್ ಹಿಂದಿರುಗಿಸಿ ಮಾನವೀಯತೆ ಮರೆದ ಆರ್‌ಟಿಓ ಇನ್ಸ್‌ಪೆಕ್ಟರ್ ಈ ಪ್ರಾಜೆಕ್ಟ್ ಕರ್ನಾಟಕದ ಮಣಿಪಾಲ್, ಉತ್ತರಪ್ರದೇಶದ ಲಖನೌ, ತಮಿಳುನಾಡಿನ ಚೆನ್ನೈ ಮತ್ತು ಮುಂಬೈಗೆ ಬಂದಿದೆ, ಬರುತ್ತಿದೆ. ತಂತ್ರಜ್ಞಾನ ಎಂಬ ಜಾದೂವಿನ ಮೂಲಕ ಹಲವು ಬದುಕುಗಳಿಗೆ ತಲುಪುತ್ತದೆ. ಈ ಹ್ಯಾಪಿನೆಸ್ ಪ್ರಾಜೆಕ್ಟ್ ಸಂಚಿಕೆಗಳು ರಿಲಯನ್ಸ್ ಡಿಜಿಟಲ್ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರತಿ ಮಧ್ಯಾಹ್ನ ಒಂದು ಗಂಟೆಗೆ ಪ್ರಸಾರ ಆಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ