Road Accident: ಜೋಗದ ಬಳಿ ಪ್ರವಾಸಿ ಬಸ್ ಅಪಘಾತ, 21ಜನರಿಗೆ ಗಂಭೀರ ಗಾಯ
Road Accident: ಜೋಗದ ಬಳಿ ಪ್ರವಾಸಿ ಬಸ್ ಅಪಘಾತ, 21ಜನರಿಗೆ ಗಂಭೀರ ಗಾಯ
ಹರೀಶ್ ಕೇರ
December 16, 2024
ಶಿವಮೊಗ್ಗ: ಮಂಗಳೂರಿನಿಂದ ಶಿವಮೊಗ್ಗ ಜಿಲ್ಲೆಗೆ ಪ್ರವಾಸಕ್ಕಾಗಿ (tour) ಬಂದಿದ್ದ ಜನರಿದ್ದ ಬಸ್ ಜೋಗ (Jog Falls) ಬಳಿ ಅಪಘಾತಕ್ಕೆ (Road Accident) ತುತ್ತಾಗಿ 21 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಸಾಗರ ತಾಲೂಕಿನ ದೇವಸ್ಥಾನಗಳಿಗೆ ಪ್ರವಾಸಕ್ಕೆ ಬಂದಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಪಲ್ಟಿಯಾಗಿದೆ. 60 ಪ್ರಯಾಣಿಕರಲ್ಲಿ 21ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಘಟನೆ ಜಿಲ್ಲೆಯ ಸಾಗರ ತಾಲೂಕಿನ ಅರಳಗೊಡು ಸಮೀಪದ ಮುಪ್ಪನೆ ಬಳಿ ಭಾನುವಾರ ಮಧ್ಯಾಹ್ನ ನಡೆದಿದೆ. ಕಾರ್ಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಮಂಗಳೂರಿನ ಬಿಸಿ ರೋಡ್ ನಿವಾಸಿಗಳ ತಂಡ ಶನಿವಾರ ರಾತ್ರಿ ಸ್ನೇಹಿತರ ಜೊತೆ ಪ್ರವಾಸ ಕೈಗೊಂಡಿದ್ದು, ಭಾನುವಾರ ಬೆಳಿಗ್ಗೆ ಸಾಗರದ ಜೋಗ ಜಲಪಾತ ವೀಕ್ಷಣೆ ಮಾಡಿಕೊಂಡು ತಾಲೂಕಿನಲ್ಲಿ ಇರುವ ಬಲೆ ಪದ್ಮಾವತಿ ದೇವಸ್ಥಾನ ವೀಕ್ಷಣೆ ಮಾಡಲು ಹೋಗುತ್ತಿರುವ ಸಂದರ್ಭದಲ್ಲಿ ಅರಳಗೋಡು ಸಮೀಪ ಅಪಘಾತ ಸಂಭವಿಸಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಆಸ್ಪತ್ರೆಗೆ ದೌಡಾಯಿಸಿ ಗಾಯಗೊಂಡಿದ್ದ ಪ್ರವಾಸಿಗರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ.
ಬೈಕ್‌ಗೆ ಮರಳು ಲಾರಿ ಡಿಕ್ಕಿ, ಸವಾರ ಸಾವು
ಉಡುಪಿ: ಬೈಕ್‌ಗೆ ಅಕ್ರಮ ಮರಳುಗಾರಿಕೆ ಲಾರಿ ಡಿಕ್ಕಿ ಹೊಡೆದು ಬೈಕ್ ಹಿಂಬದಿ ಸವಾರ ಸಾವನ್ನಪ್ಪಿರುವ ಘಟನೆ ಉಡುಪಿ ಬಡಗುಬೆಟ್ಟು ಗ್ರಾಮದಲ್ಲಿ ನಡೆದಿದೆ. ಮರಳು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆದು ಬೈಕ್ನಲ್ಲಿದ್ದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಜನಾರ್ದನ್ ಮೃತ ವ್ಯಕ್ತಿ. ಬೈಕ್ ಸವಾರ ಸಂತೋಷ್ಗೆ ಗಾಯವಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಟಿಪ್ಪರ್ ಮಾಲೀಕ, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಲಾರಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮುಖಂಡನಿಗೆ ಸೇರಿದ್ದು ಎನ್ನಲಾಗುತ್ತಿದೆ. ಈ ಮರಳುಗಾರಿಕೆಯಲ್ಲಿಎನ್ಎಸ್ಯುಐ ಮುಖಂಡನೊಬ್ಬ ಪಾಲುದಾರಿಕೆ ಹೊಂದಿದ್ದು, ಲಾರಿಗಳ ಒಡೆತನ ಹೊಂದಿದ್ದಾರೆ.
ಇದನ್ನೂ ಓದಿ: Accident: ಕಾರು ಡಿಕ್ಕಿ ವ್ಯಕ್ತಿ ಹಾಗೂ ಹಸು ಸಾವು