Shivaram Hebbar: ಎಸ್.ಎಮ್.ಕೃಷ್ಣ ಅಗಲಿಕೆ ಅತೀವ ನೋವನ್ನುಂಟು ಮಾಡಿದೆ: ಶಿವರಾಮ ಹೆಬ್ಬಾರ್
ಸಜ್ಜನ ನಾಯಕರಾದ ಶ್ರೀ ಎಸ್.ಎಮ್.ಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರನ್ನು ಜಾಗತಿಕ ಐಟಿ ಹಬ್ ಆಗಿ ಪರಿವರ್ತಿಸಿ ವಿಶ್ವಕ್ಕೆ ಪರಿಚಯಿಸಿದರು
Ashok Nayak
December 10, 2024
ಮಾಜಿ ಮುಖ್ಯಮಂತ್ರಿಗಳು, ರಾಜಕೀಯದಲ್ಲಿ ಘನತೆಯನ್ನು ಬಿಂಬಿಸಿದ ಸಜ್ಜನ ರಾಜಕಾರಣಿ ಎಸ್.ಎಮ್.ಕೃಷ್ಣ ಅವರ ಅಗಲಿಕೆಯು ಅತೀವ ನೋವನ್ನುಂಟು ಮಾಡಿದೆ ಎಂದು ಯಲ್ಲಾಪುರ - ಮುಂಡಗೋಡ - ಬನವಾಸಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶಿವರಾಮ ಹೆಬ್ಬಾರ್ ಶೋಕ ವ್ಯಕ್ತಪಡಿಸಿದ್ದಾರೆ.
ಸಜ್ಜನ ನಾಯಕರಾದ ಶ್ರೀ ಎಸ್.ಎಮ್.ಕೃಷ್ಣ ಅವರು ತಮ್ಮ ಅಧಿಕಾರಾವಧಿಯಲ್ಲಿ ಬೆಂಗಳೂರನ್ನು ಜಾಗತಿಕ ಐಟಿ ಹಬ್ ಆಗಿ ಪರಿವರ್ತಿಸಿ ವಿಶ್ವಕ್ಕೆ ಪರಿಚಯಿಸಿದರು.
ಭಗವಂತ ಶ್ರೀಯುತರ ಆತ್ಮಕ್ಕೆ ಚಿರ ಶಾಂತಿ ನೀಡಿ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಇದನ್ನೂ ಓದಿ: #ShivaramHebbar