Sirsi News: ಜನವರಿ 5 ರಂದು ಸಂಗೀತೋತ್ಸವ, ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮ
Sirsi News: ಜನವರಿ 5 ರಂದು ಸಂಗೀತೋತ್ಸವ, ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮ
Ashok Nayak
January 1, 2025
ಶಿರಸಿ: ಸ್ವರಸಾಮ್ರಾಟ ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ನಿಂದ ಜನವರಿ 5 ರಂದು ಭಾನವಾರ ಸಂಜೆ ನಗರದ ಟಿಎಮ್.ಎಸ್. ಸಭಾಭವನದಲ್ಲಿ ಸಂಗೀತೋತ್ಸವ, ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮ ನಡೆಯಲಿದೆ ಎಂದು ಟ್ರಸ್ಟ್ ನ ನಿಜಗುಣ ರಾಜಗುರು ಹೇಳಿದರು. ಅವರು ಬುಧವಾರ ನಗರದ ಸಾಮ್ರಾಟ್ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಅಂದು'ನಾ ರಾಜಗುರು' ಸಂಗೀತ ನಾಟಕ ನಡೆಯಲಿದೆ. ಪಂ. ಗಣಪತಿ ಭಟ್ ಹಾಸಣಗಿ , ವಿದುಷಿ ಮೇಧಾ ಭಟ್ ಗಾಯನವಿದ್ದು, ವಿಶ್ವರಾಜ ನಿಜಗುಣ ಅವರಿಂದ ಏಕ ಪಾತ್ರಾಭಿನಯ ನಡೆಯಲಿದೆ ಎಂದರು.