ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Badlapur Horror : ಬದ್ಲಾಪುರ​​ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಸಾವಿಗೆ ಪೊಲೀಸರೇ ಹೊಣೆ ಎಂದ ತನಿಖಾ ವರದಿ

ಕಳೆದ ವರ್ಷ ಬದ್ಲಾಪುರದ ಶಾಲೆಯೊಂದರ ಬಾಲಕಿಯರ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಪೊಲೀಸರು ಎನ್‌ಕೌಂಟರ್‌ ಮಾಡಿದ್ದು, ಇದೀಗ ಅದರ ತನಿಖಾ ವರದಿ ಬಂದಿದೆ. ವರದಿಯಲ್ಲಿ 5 ಪೊಲೀಸರು ಎನ್​​ಕೌಂಟರ್​ಗೆ ಕಾರಣ ಎಂದು ಹೇಳಲಾಗಿದೆ.

ಬದ್ಲಾಪುರ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌- ಫೇಕ್‌ ಎನ್‌ಕೌಂಟರ್‌ನಲ್ಲಿ ಆರೋಪಿಯ ಹತ್ಯೆ; ಪೊಲೀಸರ ವಿರುದ್ಧ ಕೇಸ್‌

Badlapur case

Profile Vishakha Bhat Jan 21, 2025 11:04 AM

ಮುಂಬೈ: ಮಹಾರಾಷ್ಟ್ರದ (Maharashtra) ಬದ್ಲಾಪುರ್​ ಶಾಲೆಯ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ (Badlapur Horror) ಎಸಗಿದ ಪ್ರಕರಣದ ಆರೋಪಿ ಅಕ್ಷಯ್ ಶಿಂಧೆ ಎನ್​​ಕೌಂಟರ್​ಗೆ ಪೊಲೀಸರೇ ಕಾರಣ ಎಂದು ಮ್ಯಾಜಿಸ್ಟ್ರೇಟ್​ ತನಿಖೆಯಲ್ಲಿ ಬಹಿರಂಗವಾಗಿದೆ. ಪೊಲೀಸರ ಎನ್​ಕೌಂಟರ್​ ಕುರಿತು ಮ್ಯಾಜಿಸ್ಟ್ರೇಟ್​ ತನ್ನ ತನಿಖಾ ವರದಿಯನ್ನು ಬಾಂಬೆ ಹೈಕೋರ್ಟ್​ಗೆ ಸಲ್ಲಿಸಿತ್ತು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೆರೆ ಮತ್ತು ನೀಲಾ ಗೋಖಲೆ ಅವರಿದ್ದ ವಿಭಾಗೀಯ ಪೀಠವು, ಪ್ರಕರಣದಲ್ಲಿ ಭಾಗಿಯಾದ ಐವರು ಪೊಲೀಸರು ಆರೋಪಿಯ ಸಾವಿನಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ.

ಅಕ್ಷಯ್ ಶಿಂಧೆಯ ಕಸ್ಟಡಿ ಸಾವಿನ ಆರೋಪಕ್ಕೆ ಒಳಗಾದವರಲ್ಲಿ ಠಾಣೆ ಕ್ರೈಮ್ ಬ್ರಾಂಚ್‌ನ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸಂಜಯ್ ಶಿಂಧೆ, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ ನೀಲೇಶ್ ಮೋರೆ, ಹೆಡ್ ಕಾನ್ಸ್‌ಟೇಬಲ್‌ಗಳಾದ ಅಭಿಜಿತ್ ಮೋರೆ, ಬರೀಶ್ ತಾವ್ಡೆ ಹಾಗೂ ಪೊಲೀಸ್ ಚಾಲಕ ಸೇರಿದ್ದಾರೆ.

ಪೊಲೀಸರ ಮೇಲಿನ ಆರೋಪವೇನು?

ಸೆಪ್ಟೆಂಬರ್ 23 ರಂದು, ವಿಚಾರಣೆಗಾಗಿ ಜೈಲಿನಿಂದ ಆರೋಪಿಯನ್ನು ಕರೆದೊಯ್ಯುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಆತ ಮೃತಪಟ್ಟಿದ್ದ. ಪೊಲೀಸ್ ವ್ಯಾನ್‌ನಲ್ಲಿ ಹೋಗುತ್ತಿದ್ದಾಗ, ಸಿಬ್ಬಂದಿಯ ಬಂದೂಕನ್ನು ಕಸಿದುಕೊಂಡು ಆರೋಪಿ ಗುಂಡು ಹಾರಿಸಿದ್ದ, ಇದಕ್ಕೆ ಪ್ರತಿಯಾಗಿ ಪೊಲೀಸರು ದಾಳಿ ನಡೆಸಿದಾಗ ಆತನ ತಲೆಗೆ ಗುಂಡು ತಗುಲಿತು ಎಂದು ಪೊಲೀಸರು ಹೇಳಿದ್ದರು.

ಆದರೆ ವರದಿಯು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿ ಬಂದೂಕಿನ ಮೇಲೆ ಸತ್ತವನ ಯಾವುದೇ ಬೆರಳಚ್ಚುಗಳಿಲ್ಲ ಮತ್ತು ಅವನ ಕೈಗಳು, ಕೈಕೋಳಗಳ ಅಥವಾ ಬಟ್ಟೆಗಳ ಮೇಲೆ ಯಾವುದೇ ಗುಂಡೇಟಿನ ಅವಶೇಷಗಳು ಕಂಡುಬಂದಿಲ್ಲ ಎಂದು ಹೇಳಿತ್ತು. ಇದೀಗ ಇದರಲ್ಲಿ ಭಾಗಿಯಾಗಿರುವ ಪೊಲೀಸರ ವಿರುದ್ಧಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ಪೀಠ ಸೂಚಿಸಿದೆ. ಆಪಾದಿತ ನಕಲಿ ಎನ್‌ಕೌಂಟರ್‌ನ ತನಿಖೆಯನ್ನು ನಡೆಸುವ ಸಂಸ್ಥೆಯ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಲು ಪಬ್ಲಿಕ್ ಪ್ರಾಸಿಕ್ಯೂಟರ್ ಹಿತೇನ್ ವೆನೆಗಾಂವ್ಕರ್ ಅವರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ.

ರಾಜಕೀಯ ಕಾರಣಕ್ಕಾಗಿ ತನ್ನ ಮಗನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿ ಮೃತನ ತಂದೆ ಅಣ್ಣಾ ಶಿಂಧೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಘಟನೆಯ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ಅವರು ಕೋರಿದ್ದಾರೆ.

ಈ ಸುದ್ದಿಯನ್ನೂ ಓದಿ : Physical Assault: ಇಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ; ಅಣ್ಣಾ ವಿವಿಯಲ್ಲಿ ಇದೆಂಥಾ ಪೈಶಾಚಿಕ ಕೃತ್ಯ!

ಬದ್ಲಾಪುರ ಶಾಲೆಯೊಂದರ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಕ್ಷಯ್ ಶಿಂಧೆ (24) ಎಂಬಾತನನ್ನು ಬಂಧಿಸಲಾಗಿತ್ತು. ಆತ ಶಾಲೆಯ ಅಟೆಂಡರ್ ಆಗಿದ್ದ. ಈ ಘಟನೆ ಮಹಾರಾಷ್ಟ್ರದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಎನ್​​ಕೌಂಟರ್​ ಮಾಡಬೇಕು ಎಂದು ಒತ್ತಾಯಿಸಿ, ಜನರು ತೀವ್ರ ಪ್ರತಿಭಟನೆ ನಡೆಸಿದ್ದರು.