Delhi CM Atishi : ಮಾನನಷ್ಟ ಪ್ರಕರಣದಲ್ಲಿ ದೆಹಲಿ ಸಿಎಂ ಅತಿಶಿ, ಸಂಸದ ಸಂಜಯ್ ಸಿಂಗ್‌ಗೆ ಕೋರ್ಟ್ ನೋಟಿಸ್
ಕಾಂಗ್ರೆಸ್ ಕಾಂಗ್ರೆಸ್ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ದೆಹಲಿಯ ಸಿಎಂ ಅತಿಶಿ ಹಾಗೂ ಆಪ್ ಸಂಸದ ಸಂಜಯ್ ಸಿಂಗ್ ವಿರುದ್ಧ ಇದೀಗ ದೆಹಲಿ ಹೈಕೋರ್ಟ್ ನೋಟೀಸ್ ಜಾರಿ ಮಾಡಿದೆ.
ನವದೆಹಲಿ ಜ. 16 2025 : ಕಾಂಗ್ರೆಸ್ ನ ಮಾಜಿ ಸಂಸದ ಸಂದೀಪ್ ದೀಕ್ಷಿತ್ (Sandeep deexit) ಅವರು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯವು ಮುಖ್ಯಮಂತ್ರಿ ಅತಿಶಿ (CM Atishi ) ಮತ್ತು ಆಪ್ (Aam Admi Party) ಸಂಸದ ಸಂಜಯ್ ಸಿಂಗ್ (Sanjay Singh) ಅವರಿಗೆ ಗುರುವಾರ ನೋಟಿಸ್ ಜಾರಿ ಮಾಡಿದೆ. ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪರಾಸ್ ದಲಾಲ್ ಅವರು ಜನವರಿ 27 ರೊಳಗೆ ಉತ್ತರವನ್ನು ಸಲ್ಲಿಸುವಂತೆ ಎಎಪಿ ನಾಯಕರಿಗೆ ಸೂಚಿಸಿದ್ದಾರೆ. ನ್ಯಾಯಾಲಯವು ಈ ವಿಷಯವನ್ನು ಮತ್ತಷ್ಟು ವಿಚಾರಣೆ ನಡೆಸಲಿದೆ.
ಡಿಸೆಂಬರ್ 26, 2024 ರಂದು ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅತಿಶಿ ಮತ್ತು ಸಂಜಯ್, ಸಿಂಗ್ ಸಂದೀಪ್ ದೀಕ್ಷಿತ್ ಅವರ ಮೇಲೆ ಆಧಾರ ರಹಿತ ಆರೋಪ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ದೂರಿನಲ್ಲಿದೆ. ಬಿಜೆಪಿಯಿಂದ ಕೋಟ್ಯಂತರ ರೂಪಾಯಿಗಳನ್ನು ದೀಕ್ಷಿತ್ ಸ್ವೀಕರಿಸಿದ್ದಾರೆ ಮತ್ತು ಮುಂಬರುವ ಚುನಾವಣೆಯಲ್ಲಿ ಆಪ್ ಅನ್ನು ಸೋಲಿಸಲು ಪಕ್ಷದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆ ಸೇರಿದಂತೆ ಮಾನಹಾನಿಕರ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಸಂದೀಪ್ ದೀಕ್ಷಿತ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಆಪ್ ಪಕ್ಷದ ಇಬ್ಬರಿಗೆ ನೋಟಿಸ್ ನೀಡಲಾಗಿದೆ. ಸಂದೀಪ್ ದೀಕ್ಷಿತ್ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
ದೆಹಲಿಯಲ್ಲಿ ಚುನಾವಣೆ ಕಾವು ಜೋರಾಗಿದ್ದು, ಫೆ 5 ರಂದು ನಡೆಯಲಿದೆ. ಚುನಾವಣೆ ಪ್ರಚಾರ ಕೂಡ ಜೋರಾಗಿಯೇ ಇದ್ದು, ದೆಹಲಿಯಲ್ಲಿ ಅಧಿಕಾರಕ್ಕೆ ಬಂದರೆ ನಗರದ ನಿವಾಸಿಗಳಿಗೆ 500 ರೂ. ದರದಲ್ಲಿ ಎಲ್‌ಪಿಜಿ ಸಿಲಿಂಡರ್, ಉಚಿತ ಪಡಿತರ ಕಿಟ್ ಮತ್ತು 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಕಾಂಗ್ರೆಸ್ ಗುರುವಾರ ಭರವಸೆ ನೀಡಿದೆ. ಇನ್ನೊಂದೆಡೆ ಬಿಜೆಪಿ ಕೂಡ ಮಾಸ್ಟರ್ ಪ್ಲಾನ್ ಮಾಡಿದೆ. ವಿಧಾನಸಭೆ ಚುನಾವಣೆಗೆ 70 ಅಭ್ಯರ್ಥಿಗಳ ಪೈಕಿ 59 ಹುರಿಯಾಳುಗಳನ್ನು ಘೋಷಿಸಿರುವ ಬಿಜೆಪಿ, ಅಚ್ಚರಿಯ ಅಭ್ಯರ್ಥಿಯಾಗಿ ಕೇಂದ್ರ ಮಾಜಿ ಸಚಿವೆ ಸ್ಮೃತಿ ಇರಾನಿ ಅವರನ್ನು ಹಾಲಿ ಸಚಿವ ಸೌರಭ್ ಭಾರದ್ವಾಜ್ ವಿರುದ್ಧ ಕಣಕ್ಕಿಳಿಸಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲಿಗೆ, ಈ ಚುನಾವಣೆಯಲ್ಲಿ ಗೆದ್ದರೆ ಆಮ್ ಆದ್ಮಿಯು ಸಿಎಂ ಸ್ಥಾನಕ್ಕೆ ಕೂರಿಸಲಿರುವ ಸೌರಭ್ ವಿರುದ್ಧ ಬಿಜೆಪಿಯು ಸ್ಮೃತಿ ಇರಾನಿಯವರನ್ನು ತನ್ನ ಅಸ್ತ್ರವನ್ನಾಗಿಸಲು ನಿರ್ಧರಿಸಿದೆ.
ಈ ಸುದ್ದಿಯನ್ನೂ ಓದಿ : DK Shivakumar: ‘ಗೃಹಲಕ್ಷ್ಮಿʼ ಮಾದರಿಯಲ್ಲಿ ʼಪ್ಯಾರಿ ದೀದಿ ಯೋಜನೆʼ; ದೆಹಲಿ ಚುನಾವಣೆಗೆ ಕಾಂಗ್ರೆಸ್ ಮೊದಲ ಗ್ಯಾರಂಟಿ ಭರವಸೆ