Green Peas Peel: ಬಟಾಣಿ ಸಿಪ್ಪೆಯನ್ನುಎಸೆಯೋ ಮುನ್ನ ಈ ಆರೋಗ್ಯ ಲಾಭದ ಬಗ್ಗೆ ತಿಳಿಯಿರಿ
Green Peas Peel: ಬಟಾಣಿ ಮಾತ್ರ ಸೇವಿಸಿ ಅದರ ಸಿಪ್ಪೆಗಳನ್ನು(Green Peas Peel) ಎಸೆಯುತ್ತಾರೆ. ಆದರೆ ನೀವು ಎಸೆಯುವ ಸಿಪ್ಪೆಯಿಂದ ವಿವಿಧ ರೀತಿಯ ಖಾದ್ಯ,ರಸಂ,ಸೂಪ್ ತಯಾರಿಸಬಹುದು. ಇದರ ಸಿಪ್ಪೆಯಲ್ಲಿ ಅನೇಕ ರೀತಿಯ ಪೋಷಕಾಂಶ ಇರಲಿದ್ದು ಫೈಬರ್, ಪೊಟ್ಯಾಸಿಯಮ್, ವಿಟಮಿನ್ಸ್ ನಂತಹ ಅಂಶಗಳು ಹೇರಳವಾಗಿದೆ. ಹಾಗಾಗಿ ಬಟಾಣಿ ಕಾಳು ಸೇವಿಸುವ ಜೊತೆಗೆ ಅದರ ಸಿಪ್ಪೆಯನ್ನು ಬಳಕೆ ಮಾಡಿಕೊಳ್ಳಿ.
Pushpa Kumari
January 13, 2025
ನವದೆಹಲಿ: ಹಸಿ ಬಟಾಣಿ ಕಾಳುಗಳು ಪ್ರತಿಯೊಬ್ಬರಿಗೂ ತಿನ್ನಲು ಇಷ್ಟವಾಗುತ್ತವೆ. ಅದರಲ್ಲೂ ಚಳಿಗಾಲದಲ್ಲಿ ಹೆಚ್ಚು ಲಭ್ಯವಾಗುವ ತರಕಾರಿಗಳಲ್ಲಿ ಹಸಿ ಬಟಾಣಿಯು ಒಂದು. ಈ ಹಸಿ ಬಟಾಣಿ ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ಬಟಾಣಿ ಸೇವನೆಯಿಂದ ನಾನಾ ರೀತಿಯ ಆರೋಗ್ಯ ಲಾಭಗಳಿದೆ. ಆದರೆ ಹೆಚ್ಚಿನ ಜನರು ಬಟಾಣಿ ಮಾತ್ರ ಸೇವಿಸಿ ಅದರ ಸಿಪ್ಪೆಗಳನ್ನು(Green Peas Peel) ಎಸೆಯುತ್ತಾರೆ. ಆದರೆ ನೀವು ಎಸೆಯುವ ಸಿಪ್ಪೆಯಿಂದ ವಿವಿಧ ರೀತಿಯ ಖಾದ್ಯ, ರಸಂ, ಸೂಪ್ ತಯಾರಿಸಬಹುದು. ಇದರ ಸಿಪ್ಪೆಯಲ್ಲಿ ಅನೇಕ ರೀತಿಯ ಪೋಷಕಾಂಶ ಇರಲಿದ್ದು ಫೈಬರ್, ಪೊಟ್ಯಾಸಿಯಮ್, ವಿಟಮಿನ್ಸ್‌ನಂತಹ ಅಂಶಗಳು ಹೇರಳವಾಗಿದೆ. ಹಾಗಾಗಿ ಬಟಾಣಿ ಕಾಳು ಸೇವಿಸುವ ಜೊತೆಗೆ ಅದರ ಸಿಪ್ಪೆಯನ್ನು ಬಳಕೆ ಮಾಡಿಕೊಳ್ಳಿ.
ಬಟಾಣಿ ಸಿಪ್ಪೆಯನ್ನು ಬಳಸಿಕೊಂಡು ರುಚಿಕರವಾದ ಸೂಪ್ ತಯಾರಿಸಬಹುದು. ಅದರಲ್ಲೂ ಹಸಿರು ಬಟಾಣಿ ಸಿಪ್ಪೆಯ ಸೂಪ್ ಬಹಳಷ್ಟು ರುಚಿ ಇರಲಿದ್ದು ಹೆಚ್ಚಿನ ಫೈಬರ್ ಅಂಶವನ್ನು ಒಳಗೊಂಡಿರುತ್ತದೆ. ಉತ್ಕರ್ಷಣ ನಿರೋಧಕ ಶಕ್ತಿ ಇದರಲ್ಲಿ ಇರಲಿದ್ದು ಈ ಸೂಪ್ ಸೇವನೆ ಬಹಳಷ್ಟು ಆರೋಗ್ಯಕರವಾಗಿಸುತ್ತದೆ.
ಹೀಗೆ ಸೂಪ್ ತಯಾರಿಸಿ
ಮೊದಲಿಗೆ ಹಸಿರು ಬಟಾಣಿ ಬೀಜಗಳನ್ನು ಸ್ವಚ್ಛಗೊಳಿಸಿ ಅದರ ಸಿಪ್ಪೆಗಳನ್ನು ಸುಮಾರು ಅರ್ಧ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ. ಬಳಿಕ ಕುಕ್ಕರ್‌ನಲ್ಲಿ, ನೆನೆಸಿದ ಸಿಪ್ಪೆ, ಹಸಿರು ಬಟಾಣಿ, ಸ್ವಲ್ಪ ಬೆಣ್ಣೆ, ಮತ್ತು ನೀರನ್ನು ಸೇರಿಸಿ ಬಟಾಣಿಯ ಸಿಪ್ಪೆ ಮೃದುವಾಗುವವರೆಗೆ ಬೇಯಿಸಿದ ಮಿಶ್ರಣಕ್ಕೆ ರುಚಿಗೆ ಬೇಕಾಗುವಷ್ಟು ಉಪ್ಪು ಮತ್ತು ಕಾಳು ಮೆಣಸು ಸೇರಿಸಿ ಮತ್ತೆ ನಿಧಾನವಾಗಿ ಬೇಯಿಸಿ ಮಿಕ್ಸ್ ಮಾಡಿ. ಅಂತಿಮವಾಗಿ, ಅದಕ್ಕೆ ನಿಂಬೆರಸ ಅಥವಾ ಆಮ್ಚೂರ್ ಪುಡಿಯನ್ನು ಆ್ಯಡ್ ಮಾಡಿ ಬಿಸಿ ಬಿಸಿಯಾಗಿ ಸೂಪ್ ಸವಿಯಬಹುದು.
View this post on Instagram A post shared by Aruna Vijay (@aruna_vijay_masterchef)
ಉಪಯೋಗ ಏನು?
ಹಸಿರು ಬಟಾಣಿ ಅಥವಾ ಅದರ ಸಿಪ್ಪೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಪೊಟ್ಯಾ ಸಿಯಮ್ ಅಂಶ ಹೊಂದಿರಲಿದ್ದು ರಕ್ತದೊತ್ತಡವನ್ನುನಿಯಂತ್ರಿಸಲು ಸಹಾಯ ಮಾಡುತ್ತದೆ.
ಚಳಿಗಾಲದಲ್ಲಿ ಈ ಬಿಸಿ ಬಿಸಿ ಸೂಪ್ ಮಾಡಿ ಕುಡಿಯುವುದರಿಂದ ಕೆಮ್ಮು, ಜ್ವರ ಕಡಿಮೆಯಾಗಲಿದೆ.
ಬಟಾಣಿ ಸಿಪ್ಪೆಯಲ್ಲಿ ಪೊಟ್ಯಾಸಿಯಮ್, ವಿಟಮಿನ್ಸ್ ತಾಮ್ರದಂತಹ ಅಂಶಗಳು ಇರಲಿದ್ದು ಇದು ಜೀರ್ಣಕ್ರಿಯೆ ಮತ್ತು ಕಣ್ಣಿನ ದೃಷ್ಟಿಗೆ ಬಹಳ ಒಳಿತು.
ಬಟಾಣಿ ಸಿಪ್ಪೆಯಿಂದ ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ವಿಟಮಿನ್ 'ಸಿʼ ಅಂಶ ಇದೆ.
ಈ ಸುದ್ದಿಯನ್ನೂ ಓದಿ:Golden Milk Benefits: ಗೋಲ್ಡನ್ ಮಿಲ್ಕ್ ಎಂದರೇನು? ಇದನ್ನು ಕುಡಿದರೆ ಆಗುವ ಪ್ರಯೋಜನಗಳೇನು?