Health Tips: ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಗ್ರೀನ್ ಟೀ ರಾಮಬಾಣ
Health Tips: ಗ್ರೀನ್ ಟೀಯನ್ನು ಸೇವಿಸುವ ಮೂಲಕ ಅಥವಾ ಅದನ್ನು ತಲೆಗೆ ಲೇಪಿಸಿಕೊಳ್ಳುವ ಮೂಲಕ ಕೂದಲು ಉದುರುವಿಕೆ ತಡೆಗಟ್ಟಬಹುದು. ಗ್ರೀನ್ ಟೀ ಆರೋಗ್ಯಕರ ಕೂದಲು ಪಡೆಯಲು ತುಂಬಾನೇ ಉಪಯೋಗಕಾರಿ ಯಾಗಿದ್ದು ಇದರಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ.
Pushpa Kumari
January 10, 2025
ನವದೆಹಲಿ: ಸುಂದರವಾದ ಮತ್ತು ಆರೋಗ್ಯಕರ ಕೂದಲನ್ನು ಪಡೆಯಬೇಕೆಂಬ ಆಸೆ ಬಹಳಷ್ಟು ಮಹಿಳೆಯರಲ್ಲಿ ಇರುತ್ತದೆ. ಇದಕ್ಕಾಗಿ ದುಬಾರಿ ಬೆಲೆಯ ಎಣ್ಣೆ, ಶ್ಯಾಂಪೂ, ಕಂಡೀಷನರ್ ಖರೀದಿ ಮಾಡಿ ಕೂದಲಿನ ಆರೈಕೆಗಾಗಿ ಪಣ ತೊಡುವುದು ಉಂಟು. ಇಂದು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗೆ ಜನ ಒಳಗಾಗುವುದು ಇದೆ. ಆದರೆ ನೀವು ಗ್ರೀನ್ ಟೀ ಕುಡಿಯುವುದರಿಂದ ಅಥವಾ ಕೂದಲಿಗೆ (Green Tea for Hair) ಬಳಸುವುದರಿಂದ ನೀವು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಬಹುದು(Health Tips).
ಗ್ರೀನ್ ಟೀಯನ್ನು ಸೇವಿಸುವ ಮೂಲಕ ಅಥವಾ ಅದನ್ನು ತಲೆಗೆ ಲೇಪಿಸಿಕೊಳ್ಳುವ ಮೂಲಕ ಕೂದಲು ಉದುರುವಿಕೆ ತಡೆಗಟ್ಟಬಹುದು. ಗ್ರೀನ್ ಟೀ ಆರೋಗ್ಯಕರ ಕೂದಲು ಪಡೆಯಲು ತುಂಬಾನೇ ಉಪಯೋಗಕಾರಿಯಾಗಿದ್ದು ಇದರಲ್ಲಿ ಉತ್ಕರ್ಷಣ ನಿರೋಧಕಗಳು ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ.
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತೆ:
ಗ್ರೀನ್ ಟೀ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಇದರಲ್ಲಿ ಎಪಿಗಲ್ಲೊಕಾಟೆಚಿನ್ ಗ್ಯಾಲೇಟ್ (ಇಜಿಸಿಜಿ) ಎನ್ನುವ ಅಂಶ ಇರಲಿದ್ದು ಕೂದಲು ಉದ್ದವಾಗಿ ಮತ್ತು ದಪ್ಪವಾಗಿ ಬೆಳೆಯಲು ಇದು ಸಹಾಯ ಮಾಡಲಿದೆ. ಇದರಲ್ಲಿ ವಿಟಮಿನ್ ಬಿ ಮತ್ತು ಸಿ ಮತ್ತು ಅಮೈನೋ ಆಮ್ಲದ ಪೋಷಕಾಂಶಗಳು ಇರಲಿದ್ದು ನಿಮ್ಮ ಕೂದಲು ಶೈನ್ ಆಗುವಂತೆ ಮಾಡಲಿದೆ.
ತಲೆ ಹೊಟ್ಟು ನಿವಾರಣೆ ಮಾಡಲಿದೆ:
ಗ್ರೀನ್ ಟೀ ತಲೆಹೊಟ್ಟು ಮತ್ತು ಕೂದಲು ಉದುರುವಿಕೆಗೆ ಪರಿಹಾರ ನೀಡಲಿದೆ. ಹಸಿರು ಚಹಾವು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು ನಿಮ್ಮ ಕೂದಲಿನಲ್ಲಿ ಡಸ್ಟ್ ಇದ್ದಲ್ಲಿ ನಿವಾರಿಸಿ ಕೂದಲು ಹಾನಿ ಯಾಗದಂತೆ ರಕ್ಷಿಸಲು ಸಹಾಯ ಮಾಡಲಿದೆ. ಈ ಚಹಾವು ಕ್ಯಾಟೆಚಿನ್‌ಗಳನ್ನು ಹೊಂದಿರಲಿದ್ದು ಇದು ತಲೆಹೊಟ್ಟು ಸಮಸ್ಯೆಯನ್ನು ಹೋಗಲಾಡಿಸುತ್ತದೆ
ಹೊಳಪು ನೀಡಲಿದೆ:
ಗ್ರೀನ್ ಟೀ ನಿಮ್ಮ ಕೂದಲಿಗೆ ಹೊಳಪನ್ನು ನೀಡಲಿದೆ. ಇದರಲ್ಲಿ ವಿಟಮಿನ್ ಬಿ ಇರಲಿದ್ದು ಇದು ಕೂದಲನ್ನು ತೇವಗೊಳಿಸುವ ಜೊತೆಗೆ ನಿಮ್ಮ ಕೂದಲಿಗೆ ಹೊಳಪು ನೀಡಲಿದೆ. ಇದು ಕೂದಲು ಒಡೆಯುವುದನ್ನು ತಡೆಯುತ್ತದೆ.
ಕೂದಲು ಉದುರುವಿಕೆ ತಡೆಯಲಿದೆ:
ಗ್ರೀನ್ ಟೀ ಸೇವನೆಯಿಂದ ನಿಮ್ಮ ಕೂದಲು ಉದುರುವುದನ್ನು ತಡೆಯಬಹುದು. ಇದರಲ್ಲಿ ರಕ್ತಕಣಗಳು ಸುಧಾರಿಸಿಕೊಂಡು ರಕ್ತ ಸಂಚಲನ ಸರಿಯಾದ ಪ್ರಮಾಣದಲ್ಲಿ ಪ್ರೇರೇಪಿಸಿ ರಕ್ತ ಸಂಚಲನದಿಂದ ಕೂದಲು ಉದುರುವುದು ಕಡಿಮೆಗೊಳ್ಳುತ್ತದೆ.
ತಾಜಾ ಅನುಭವ ನೀಡಲಿದೆ:
ಈ ಗ್ರೀನ್ ಟೀ ತಾಜಾ ಅನುಭವ ನೀಡುವ ಜೊತೆಗೆ ನಿಮ್ಮ ಕೂದಲಿನ ಆರೈಕೆಗೆ ಬಹಳ ಉತ್ತಮ. ಕೂದಲಿಗೆ ಗ್ರೀನ್ ಟೀ ನಿಯಮಿತ ಬಳಕೆಯು ತಾಜಾತನದ ಅನುಭವ ನೀಡಲಿದೆ. ನಿಮಗೆ ಉರಿಯೂತದ ಲಕ್ಷಣ ಇದ್ದರೆ ನೆತ್ತಿಯ ಕಿರಿಕಿರಿ ಅನುಭವಿಸುತ್ತಿದ್ದರೆ ಗ್ರೀನ್ ಟೀ ಉತ್ತಮ ಆಯ್ಕೆ.
ಈ ರೀತಿ ಬಳಸಿ:
ಗ್ರೀನ್ ಟೀಯಿಂದ ಕೂದಲನ್ನು ತೊಳೆಯಿರಿ: ಒಂದು ಕಪ್ ಗ್ರೀನ್ ಟೀಯನ್ನು ಕುದಿಸಿ ತಣ್ಣಗಾದ ನಂತರ ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಹಾಕಿ ನಿಧಾನವಾಗಿ ಮಸಾಜ್ ಮಾಡಿ ನಂತರ ಕೂದಲು ತೊಳೆಯಿರಿ.
ಗ್ರೀನ್ ಟೀ ಹೇರ್ ಮಾಸ್ಕ್: ಗ್ರೀನ್ ಟೀ ಪುಡಿಗೆ ಮೊಸರು ಮತ್ತು ಜೇನು ತುಪ್ಪದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಹಚ್ಚಿಕೊಳ್ಳಿ. ನಿಮ್ಮ ಕೂದಲನ್ನು 30 ನಿಮಿಷಗಳ ಕಾಲ ಬಿಟ್ಟ ನಂತರ ಕೂದಲು ತೊಳೆಯಿರಿ
ಈ ಹೇರ್ ಪ್ಯಾಕ್ ಮಾಡಿ;
ಒಂದು ಚಮಚ ಆಲಿವ್ ಎಣ್ಣೆಗೆ ಮೊಟ್ಟೆಯ ಹಳದಿ ಲೋಳೆ ಮತ್ತು ಎರಡು ಚಮಚ ಗ್ರೀನ್ ಟೀ ಸೇರಿಸಿ. ಸರಿಯಾಗಿ ಬೆರೆಸಿ ಪೇಸ್ಟ್ ತಯಾರಿಸಿ ಕೂದಲಿಗೆ ಹಚ್ಚಿ ಬಳಿಕ ಶಾಂಪೂವಿನಿಂದ ಕೂದಲನ್ನು ತೊಳೆಯಿರಿ.
ಈ ಸುದ್ದಿಯನ್ನೂ ಓದಿ:BBK 11: ಟಿಆರ್ಪಿಯಲ್ಲಿ ಬಿಗ್ ಬಾಸ್ಗೆ ಬಿಗ್ ಶಾಕ್: ದಾಖಲೆ ಸೃಷ್ಟಿಸಿದ ‘ಸರಿಗಮಪ’