Job Guide: ಇಂಡಿಯನ್ ಮರ್ಚೆಂಟ್ ನೇವಿಯಲ್ಲಿದೆ 1,800 ಹುದ್ದೆ; 10, 12ನೇ ತರಗತಿ ವಿದ್ಯಾರ್ಹತೆ ಹೊಂದಿದವರು ಅರ್ಜಿ ಸಲ್ಲಿಸಿ
Job Guide: ಇಂಡಿಯನ್ ಮರ್ಚೆಂಟ್ ನೇವಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಕುಕ್, ಡಕ್ ರೇಟಿಂಗ್ ಸೇರಿ ಒಟ್ಟು ಬರೋಬ್ಬರಿ 1,800 ಹುದ್ದೆಗಳಿವೆ. 10ನೇ ತರಗತಿ, 12ನೇ ತರಗತಿ ಮತ್ತು ಐಟಿಐ ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಫೆ. 10.
Ramesh B
January 11, 2025
ಬೆಂಗಳೂರು: ಇಂಡಿಯನ್ ಮರ್ಚೆಂಟ್ ನೇವಿ (Indian Merchant Navy) ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ (Indian Merchant Navy Recruitment 2025). ಕುಕ್, ಡಕ್ ರೇಟಿಂಗ್ ಸೇರಿ ಒಟ್ಟು ಬರೋಬ್ಬರಿ 1,800 ಹುದ್ದೆಗಳಿವೆ. 10ನೇ ತರಗತಿ, 12ನೇ ತರಗತಿ ಮತ್ತು ಐಟಿಐ ವಿದ್ಯಾರ್ಹತೆ ಹೊಂದಿರುವ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಫೆ. 10 (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಡೆಕ್ ರೇಟಿಂಗ್ - 399 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿಎಂಜಿನ್ ರೇಟಿಂಗ್ - 201 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿಸೀಮ್ಯಾನ್ - 196 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿಎಲೆಕ್ಟ್ರಿಷಿಯನ್ - 290 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐವೆಲ್ಡರ್/ಹೆಲ್ಪರ್ - 60 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ, ಐಟಿಐಮೆಸ್ ಬಾಯ್ - 188 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿಕುಕ್ - 466 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ
ವಯೋಮಿತಿ ಮತ್ತು ಅರ್ಜಿ ಶುಲ್ಕ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 17.5 ವರ್ಷ ಮತ್ತು ಗರಿಷ್ಠ 27 ವರ್ಷ. ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ಆನ್‌ಲೈನ್ ಮೂಲಕ 100 ರೂ. ಪಾವತಿಸಬೇಕು. ಆಯ್ಕೆ ವಿಧಾನಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ 100 ಅಂಕಗಳನ್ನು ಒಳಗೊಂಡಿದ್ದು, ಇದರಲ್ಲಿ ಜನರಲ್ ಅವೆರ್‌ನೆಸ್, ಸೈನ್ಸ್, ಇಂಗ್ಲಿಷ್, ಅಪ್ಟಿಡ್ಯೂಡ್ ಮತ್ತು ರೀಸನಿಂಗ್ ಪ್ರಶ್ನೆಗಳು ಇರಲಿದೆ. ಗಮನಿಸಿ ತಪ್ಪು ಉತ್ತರಕ್ಕೆ 0.25 ಅಂಕ ಇರಲಿದ್ದು, ಎಚ್ಚರಿಕೆಯಿಂದ ಪರೀಕ್ಷೆ ಬರೆಯುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಬೆಂಗಳೂರು, ಮೈಸೂರಿನಲ್ಲಿ ಪರೀಕ್ಷಾ ಕೇಂದ್ರವಿದೆ. ಲಿಖಿತ ಪರೀಕ್ಷೆ ಮಾರ್ಚ್‌ನಲ್ಲಿ ನಡೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ 38,000 ರೂ. - 90,000 ರೂ. ಮಾಸಿಕ ವೇತನ ದೊರೆಯಲಿದೆ ಎಂದು ಅಧಿಸೂಚನೆ ತಿಳಿಸಿದೆ.
Indian Merchant Navy Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ(https://admission.sealanemaritime.in/campus/applicationform/2d48767b-f1d3-418a-9ca7-5ec848781322)
ಹೆಸರು ನೋಂದಾಯಿಸಿ.
ಎಚ್ಚರಿಕೆಯಿಂದ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
ಅಗತ್ಯ ಡಾಕ್ಯುಮೆಂಟ್, ಸರಿಯಾದ ಅಳತೆಯಲ್ಲಿ ಫೋಟೊ ಅಪ್‌ಲೋಡ್ ಮಾಡಿ.
ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ.
ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ವಿಳಾಸ indianmerchantnavy.comಗೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: Job Guide: ರಕ್ಷಣಾ ಸಚಿವಾಲಯದಲ್ಲಿದೆ 113 ಹುದ್ದೆ; 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ