SBI Recruitment: ಸ್ಟೇಟ್ ಬ್ಯಾಂಕ್‌ನಲ್ಲಿ ಕ್ಲರ್ಕ್ ಹುದ್ದೆ ಖಾಲಿ! ಅರ್ಜಿ ಸಲ್ಲಿಕೆಗೆ ಜ.7 ಕೊನೆಯ ದಿನ
SBI Recruitment: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗುಡ್ ನ್ಯೂಸ್ ಒಂದನ್ನು ನೀಡಿದೆ. ಎಸ್ ಬಿಐ ಪ್ರಸಕ್ತ ಸಾಲಿನ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ (SBI Recruitment) ಅಧಿಸೂಚನೆ ಹೊರಡಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
Pushpa Kumari
January 5, 2025
ನವದೆಹಲಿ: ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗುಡ್ ನ್ಯೂಸ್ ನೀಡಿದೆ. ಎಸ್ ಬಿಐ ಪ್ರಸಕ್ತ ಸಾಲಿನ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ (SBI Recruitment) ಅಧಿಸೂಚನೆ ಹೊರಡಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಒಟ್ಟು 13,735 ಹುದ್ದೆಗಳನ್ನು ಎಸ್ಬಿಐ ಭರ್ತಿ ಮಾಡಲು ನಿರ್ಧರಿಸಿದ್ದು ಕಸ್ಟಮರ್ ಸಪೋರ್ಟ್ ಮತ್ತು ಸೇಲ್ಸ್ ವಿಭಾಗದಲ್ಲಿ ಕ್ಲೆರಿಕಲ್ ಕೇಡರ್‌ನ ಜೂನಿಯರ್ ಅಸೋಸಿಯೇಟ್ಸ್ ಹುದ್ದೆಗಳು ಖಾಲಿ ಇರಲಿದ್ದು ಅರ್ಜಿ ಸಲ್ಲಿಸಲು ಜನವರಿ 07 ಕೊನೆ ದಿನವಾಗಿದೆ. ದೇಶದ್ಯಾಂತ ಒಟ್ಟು 13,735 ಹುದ್ದೆಗಳು ಇರಲಿದ್ದು ಕೇಂದ್ರಾಡಳಿತ ಪ್ರದೇಶ ಲಡಾಖ್ನಲ್ಲಿ 50 ಹುದ್ದೆ, ಕರ್ನಾಟಕದಲ್ಲಿ 203 ಹುದ್ದೆಗಳು ಖಾಲಿ ಇರಲಿದೆ.
ಶೈಕ್ಷಣಿಕ ಅರ್ಹತೆ ಏನು?
ಯಾವುದೇ ವಿಭಾಗದಲ್ಲಿ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಮಾನ ವಿದ್ಯಾರ್ಹತೆ ಅಥವಾ ಅಂತಿಮ ಸೆಮಿಸ್ಟರ್ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದು
ಅಭ್ಯರ್ಥಿಗಳು ಏಪ್ರಿಲ್ 1, 2024 ರಂತೆ 20 ರಿಂದ 28 ವರ್ಷ ವಯಸ್ಸಿನವರಾಗಿರಬೇಕು. ಅರ್ಜಿ ಹಾಕುವ ಅಭ್ಯರ್ಥಿಗಳ ಹುಟ್ಟಿದ ದಿನಾಂಕವು ಏಪ್ರಿಲ್ 2, 1996 ಮತ್ತು ಏಪ್ರಿಲ್ 1, 2004 ರ ನಡುವೆ ಇರಬೇಕು.
ಆಯ್ಕೆ ಪ್ರಕ್ರಿಯೆಗೆ ಮೊದಲು ಪೂರ್ವಭಾವಿ ಪರೀಕ್ಷೆನಂತರ ಮುಖ್ಯ ಪರೀಕ್ಷೆ ಹಾಗೂ ಭಾಷಾ ಪ್ರಾವೀಣ್ಯತೆ ಪರೀಕ್ಷೆ ಎಂದು 3 ಹಂತದಲ್ಲಿ ಪರೀಕ್ಷೆ ನಡೆಯಲಿದೆ.
ಅರ್ಜಿ ಶುಲ್ಕ
ಅರ್ಜಿ ಸಲ್ಲಿಕೆಗೆ ಸಾಮಾನ್ಯ/OBC/EWS ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ರೂ 750 ಮೊತ್ತ ಸಲ್ಲಿಸಬೇಕು. SC/ST ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ಪಾವತಿ ವಿನಾಯಿತಿ ನೀಡಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ಮೊದಲಿಗೆ ಐಬಿಪಿಎಸ್ ವೆಬ್ ಪೋರ್ಟಲ್ https://ibpsonline.ibps.in ಇಲ್ಲಿಗೆ ಭೇಟಿ ನೀಡಿ Click here For New Registration' ಈ ಆಪ್ಚನ್ ಮೇಲೆ ಕ್ಲಿಕ್ ಮಾಡಿ. ಬಳಿಕ ಇಲ್ಲಿ ರಿಜಿಸ್ಟ್ರೇಷನ್ ಪ್ರಕ್ರಿಯೆಗೆ ಕೇಳಲಾದ ದಾಖಲೆ ಮಾಹಿತಿ ನೀಡಿ ನಂತರ ಮತ್ತೆ ಲಾಗಿನ್ ಆಗಿ ಅರ್ಜಿ ಸಲ್ಲಿಸಿ.
ಈ ಸುದ್ದಿಯನ್ನೂ ಓದಿ:Arodhya Rama Mandir: ಅಯೋಧ್ಯೆ ರಾಮಮಂದಿರ ಈಗ ಉತ್ತರ ಪ್ರದೇಶದ ನಂ 1 ಪ್ರವಾಸಿ ತಾಣ!