Viral Video: ಮೊಬೈಲ್ ನೋಡ್ತಾ ರಸ್ತೆ ದಾಟಿದ ಯುವಕನಿಗೆ ಪೊಲೀಸ್ ಪೇದೆ ಮಾಡಿದ್ದೇನು?ವಿಡಿಯೊ ನೋಡಿ
ಯುವಕನೊಬ್ಬ ಮೊಬೈಲ್ ನೋಡುತ್ತಾ ರಸ್ತೆ ದಾಟುವಾಗ ಬೈಕ್ನಲ್ಲಿ ಬಂದ ಪೊಲೀಸ್ ಕಾನ್ಸ್ಟೇಬಲ್ ನಡು ರಸ್ತೆಯಲ್ಲಿ ನಿಲ್ಲಿಸಿ ಆ ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ಅಧಿಕಾರಿಯ ವಿರುದ್ಧ ಕಿಡಿಕಾರಿದ್ದಾರೆ.
Source : Free press jounal
ಚೆನ್ನೈ, ಜನವರಿ 15,2025: ಮೊಬೈಲ್ ಅರೆಕ್ಷಣ ಕೂಡ ಈಗ ಯಾರೂ ಬಿಟ್ಟಿರಲಾರರು.ಬೆಡ್ರೂಂನಿಂದ ಹಿಡಿದು ಬಾತ್ರೂಂವರೆಗೂ ಮೊಬೈಲ್ ಹಿಡಿದುಕೊಂಡು ಹೋಗುವವರು ಇದ್ದಾರೆ. ಇತ್ತೀಚೆಗೆ ಯುವಕನೊಬ್ಬ ಮೊಬೈಲ್ ನೋಡುತ್ತಾ ರಸ್ತೆ ದಾಟಿದ್ದಾನೆ. ಆದರೆ ಆ ವೇಳೆ ಬೈಕ್ನಲ್ಲಿ ಬಂದ ಪೊಲೀಸ್ ಕಾನ್ಸ್ಟೇಬಲ್ ಯುವಕನಿಗೆ ಕಪಾಳಮೋಕ್ಷ ಮಾಡಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಪಟ್ಟ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಪೊಲೀಸ್ ಅಧಿಕಾರಿಯ ವಿರುದ್ಧ ಕಿಡಿಕಾರಿದ್ದಾರೆ.
ವರದಿಗಳ ಪ್ರಕಾರ, ತಮಿಳುನಾಡಿನ ಕೊಯಮತ್ತೂರಿನ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದೆ. ವಿಡಿಯೊದಲ್ಲಿರುವ ಪೊಲೀಸ್ ಅಧಿಕಾರಿಯನ್ನು ಕೊಯಮತ್ತೂರಿನ ಕಾವುಂಡಂಪಾಳ್ಯಂ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಜಯಪ್ರಕಾಶ್ ಎಂದು ಗುರುತಿಸಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಈ ವಿಡಿಯೊದಲ್ಲಿ ಯುವಕನೊಬ್ಬ ಮೊಬೈಲ್ ನೋಡುತ್ತಾ ರಸ್ತೆ ದಾಟುತ್ತಿದ್ದಾಗ ಬೈಕ್ನಲ್ಲಿ ಬಂದ ಪೊಲೀಸ್ ಅಧಿಕಾರಿ ನಡು ರಸ್ತೆಯಲ್ಲಿ ನಿಲ್ಲಿಸಿ ಕಪಾಳಮೋಕ್ಷ ಮಾಡಿದ್ದಾರೆ. ಆದರೆ ಬೈಕ್ನಲ್ಲಿ ಹೋಗುತ್ತಿದ್ದ ಪೊಲೀಸ್ ಅಧಿಕಾರಿ ಮಾತ್ರ ಹೆಲ್ಮೆಟ್ ಧರಿಸಿರಲಿಲ್ಲ.ಈ ಬಗ್ಗೆ ನೆಟ್ಟಿಗರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
A head constable attached to Kavundampalayam police station in #Coimbatore was caught on camera slapping a youth, who was crossing a road glued to his cell phone, on Sunday. The policeman did not wear helmet while 'punishing' the youth for crossing the road carelessly.@THChennai pic.twitter.com/lNpmxrCy5B
— Wilson Thomas (@wilson__thomas) January 13, 2025
ಪೊಲೀಸ್ ಅಧಿಕಾರಿಯ ಪೆಟ್ಟು ಸಹಿಸಲಾರದೆ ಯುವಕ ನಡು ರಸ್ತೆಯಲ್ಲಿ ಬಾಗಿ ಕುಳಿತುಕೊಂಡು ತನ್ನ ಕಿವಿಯನ್ನು ಹಿಡಿದುಕೊಂಡಿದ್ದಾನೆ. ಪೆಟ್ಟು ತಿಂದ ಯುವಕನನ್ನು ಮೋಹನ್ ರಾಜ್ ಎಂಬುದಾಗಿ ಗುರುತಿಸಲಾಗಿದ್ದು, ಈತ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾನಂತೆ.
ಈ ಸುದ್ದಿಯನ್ನೂ ಓದಿ:ಬಲು ಅಪರೂಪ ನಮ್ಮ ಜೋಡಿ, ಚುನಾವಣೆಗೆ ನಾವು ರೆಡಿ!
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಸಂಚಾರ ನಿಯಮಗಳನ್ನು ಪಾಲಿಸದೆ ಬೈಕ್ನಲ್ಲಿ ಹೋಗುತ್ತಿದ್ದ ಕಾನ್ಸ್ಟೇಬಲ್ ರಸ್ತೆ ದಾಟಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದ ಕಾರಣ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಕರೆ ನೀಡಿದ್ದಾರೆ.