Viral News: ವಿಮಾನದಲ್ಲಿ ಪ್ರಜ್ಞೆ ಕಳೆದುಕೊಂಡ ವೃದ್ಧೆಯ ಜೀವ ಉಳಿಸಿದ ಇಂಡಿಗೊ ಸಿಬ್ಬಂದಿ; 'ಸೂಪರ್ ವುಮನ್' ಎಂದು ಹೊಗಳಿದ ನೆಟ್ಟಿಗರು
ಜನವರಿ 12 ರಂದು ಪುಣೆಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 70 ವರ್ಷದ ಪ್ರಯಾಣಿಕರೊಬ್ಬರು ಪ್ರಜ್ಞೆ ಕಳೆದುಕೊಂಡಿದ್ದಾರೆ. ವಿಮಾನದ ಸಿಬ್ಬಂದಿಯೊಬ್ಬರು ಅವರ ಜೀವ ಉಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸುದ್ದಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ನವದೆಹಲಿ: ಇಂಡಿಗೊ ವಿಮಾನ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಿರುತ್ತದೆ. ಇದೀಗ ಜನವರಿ 12 ರಂದು ಪುಣೆಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ಇಂಡಿಗೊ ವಿಮಾನದಲ್ಲಿ ಸಂಕಷ್ಟದಲ್ಲಿದ್ದ ವೃದ್ಧ ಪ್ರಯಾಣಿಕರೊಬ್ಬರ ಜೀವ ಉಳಿಸಿದ್ದಕ್ಕಾಗಿ ಕ್ಯಾಬಿನ್ ಸಿಬ್ಬಂದಿಯೊಬ್ಬರು ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸಿಬ್ಬಂದಿಯ ಅಸಾಧಾರಣ ಧೈರ್ಯ ಮತ್ತು ಸಹಾನುಭೂತಿಯನ್ನು ಜನ ಹಾಡಿಹೊಗಳಿದ್ದಾರೆ. ಸ್ಪಾಟ್ಲೈಟ್ ಸ್ಕೌಟ್ಸ್ ಮತ್ತು ಒರಿಯನ್ ಹಾಸ್ಟೆಲ್ಸ್‍ನ ಸಹ ಸಂಸ್ಥಾಪಕ ಸಂಚಿತ್ ಮಹಾಜನ್ ಈ ಘಟನೆಯನ್ನು ಲಿಂಕ್ಡ್ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ಆಗಿದ್ದೇನು?
70 ವಯಸ್ಸಿನ ವೃದ್ಧೆಯೊಬ್ಬರು ವಿಮಾನದಲ್ಲಿ ಪ್ರಜ್ಞೆ ಕಳೆದುಕೊಂಡಿದ್ದಾರೆ. ತಕ್ಷಣ ಅವರಿಗೆ ಸಹಾಯವನ್ನು ಒದಗಿಸಲು ಯಾವುದೇ ವೈದ್ಯಕೀಯ ವೃತ್ತಿಪರರು ವಿಮಾನದಲ್ಲಿ ಇಲ್ಲದ ಕಾರಣ ಪರಿಸ್ಥಿತಿ ಉದ್ವಿಗ್ನವಾಗಿತ್ತು. ಆದರೆ ಕ್ಯಾಬಿನ್ ಸಿಬ್ಬಂದಿಯೊಬ್ಬರ ಜಾಣ್ಮೆಯಿಂದ ವೃದ್ಧೆಯ ಜೀವ ಉಳಿದಿದೆಯಂತೆ. ಅನಾಮಧೇಯ ಸಿಬ್ಬಂದಿ ವೃದ್ಧ ಮಹಿಳೆಗೆ ಬಾಯಿಯ ಮೂಲಕ ಕೃತಕ ಆಮ್ಲಜನಕವನ್ನು ನೀಡಿ ಅವರನ್ನು ಉಳಿಸಲು 30-40 ನಿಮಿಷಗಳ ಕಾಲ ದಣಿವರಿಯದೆ ಪ್ರಯತ್ನ ಮಾಡಿದ್ದಾರೆ. ಕೊನೆಗೂ ಅವರ ಪ್ರಯತ್ನಕ್ಕೆ ಫಲ ನೀಡುವಂತೆ ವೃದ್ಧ ಮಹಿಳೆಗೆ ಪ್ರಜ್ಞೆ ಮರಳಿ ಬಂದಿದೆಯಂತೆ.
ವಿಮಾನ ಇಳಿಯುವ ಮೊದಲು, ಮಹಾಜನ್ ವೈಯಕ್ತಿಕವಾಗಿ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿ, ಅವರನ್ನು "ನಿಜವಾದ ಹೀರೋ" ಎಂದು ಕರೆದಿದ್ದಾರೆ ಮತ್ತು ಸಹಾನುಭೂತಿ ಮತ್ತು ಸಮರ್ಥ ತಂಡವನ್ನು ಹೊಂದಿದ್ದಕ್ಕಾಗಿ ಇಂಡಿಗೊವನ್ನು ಹೊಗಳಿದ್ದಾರೆ. ಸಿಬ್ಬಂದಿಯ ಪ್ರಯತ್ನಗಳನ್ನು ಅಧಿಕೃತವಾಗಿ ಗುರುತಿಸುವಂತೆ ಅವರು ವಿಮಾನಯಾನ ಸಂಸ್ಥೆಯನ್ನು ಒತ್ತಾಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಇಂಡಿಗೋ ವಿಮಾನದಲ್ಲಿ ʼಟೀ ಸರ್ವ್ʼ ಮಾಡಿದ ಪ್ರಯಾಣಿಕರು; ವೈರಲ್ ಆಯ್ತುಈ ವಿಡಿಯೊ
ಮಹಾಜನ್ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಇಂಡಿಗೊ, ಅವರ ಮೆಚ್ಚುಗೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿತು ಮತ್ತು ಸಿಬ್ಬಂದಿಯ ಸಮರ್ಪಣೆಯನ್ನು ಗೌರವಿಸುವುದಾಗಿ ತಿಳಿಸಿತು. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದಂತೆ, ಲಿಂಕ್ಡ್ಇನ್ ಬಳಕೆದಾರ ಅಪೂರ್ವ್ ಸಿಂಗ್ ಅವರು "ಸೂಪರ್ ವುಮನ್" ಅನ್ನು ಕೋಲ್ಕತ್ತಾ ಮೂಲದ ಸಿಬ್ಬಂದಿ ಸದಸ್ಯೆ ಖುಷ್ಬು ಸಿಂಗ್ ಎಂದು ಗುರುತಿಸಿದ್ದಾರೆ. ಲಿಂಕ್ಡ್ಇನ್‍ನಲ್ಲಿ ಇಲ್ಲದ ಸಿಂಗ್, ತನ್ನ ಸ್ನೇಹಿತರ ಮೂಲಕ ಈ ಮೆಚ್ಚುಗೆಯ ಸಂದೇಶಗಳನ್ನು ಸ್ವೀಕರಿಸಿದ್ದಾರೆ.