Viral Video: 'ಹೆಂಡತಿಯನ್ನು ಎಷ್ಟು ಹೊತ್ತು ನೋಡುತ್ತೀರಿ' ಎಂದ L&T ಅಧ್ಯಕ್ಷರ ಹೇಳಿಕೆಯ ರೀಲ್ ವೈರಲ್

Viral Video: ಎಲ್ ಆ್ಯಂಡ್‌ ಟಿ ಕಂಪನಿಯ ಅಧ್ಯಕ್ಷ ಎಸ್.ಎನ್.ಸುಬ್ರಮಣ್ಯನ್ ಅವರು ಇತ್ತೀಚೆಗೆ ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕೆಲಸವನ್ನು ಮಾಡಬೇಕು ಹಾಗೂ "ನಿಮ್ಮ ಹೆಂಡತಿಯನ್ನು ಎಷ್ಟು ಸಮಯದವರೆಗೆ ದಿಟ್ಟಿಸಿ ನೋಡುತ್ತೀರಿ?" ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಟೀಕಿಸಿದ ಅನೇಕರ ಮೀಮ್‍ಗಳು ಮತ್ತು ಜೋಕ್‍ಗಳು ವೈರಲ್‌ ಆಗಿವೆ. ಇದೀಗ ಜಾನಿ ಎಂಬುವವರು ಎಲ್ ಆ್ಯಂಡ್‌ ಟಿ ಅಧ್ಯಕ್ಷರ ವಿವಾದಾತ್ಮಕ ಹೇಳಿಕೆಯನ್ನು ಬಳಸಿಕೊಂಡು ಬಹಳ ಅದ್ಭುತವಾಗಿ ರೀಲ್ ಮಾಡಿದ್ದಾರೆ.

L&T Chairman SN Subrahmanyan
Profile pavithra January 17, 2025

Source : Free press jounal

ನವದೆಹಲಿ, ಜ. 17, 2025: ಎಲ್ ಆ್ಯಂಡ್‌ ಟಿ ಅಧ್ಯಕ್ಷ ಎಸ್.ಎನ್.ಸುಬ್ರಮಣ್ಯನ್ ಅವರು ಇತ್ತೀಚೆಗೆ ಉದ್ಯೋಗಿಗಳು ವಾರಕ್ಕೆ 90 ಗಂಟೆಗಳ ಕೆಲಸವನ್ನು ಮಾಡುವಂತೆ ನೀಡಿದ್ದ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇದರೊಂದಿಗೆ "ನಿಮ್ಮ ಹೆಂಡತಿಯನ್ನು ಎಷ್ಟು ಸಮಯದವರೆಗೆ ದಿಟ್ಟಿಸಿ ನೋಡುತ್ತೀರಿ?" ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಜನರ ಗಮನ ಸೆಳೆದಿದ್ದು, ಉದ್ಯಮಿಗಳಿಂದ ಹಿಡಿದು ನೆಟ್ಟಿಗರವರೆಗೆ ಅನೇಕರು ಸುಬ್ರಮಣ್ಯನ್ ಅವರನ್ನು ಟೀಕಿಸಿದ್ದರು. ಅವರ ಈ ಹೇಳಿಕೆಯ ಬಗ್ಗೆ ಅನೇಕರು ಮೀಮ್‍ಗಳು ಮತ್ತು ಜೋಕ್‍ಗಳನ್ನು ರಚಿಸಿದ್ದು, ಟ್ರೋಲ್‌ಗೆ ಒಳಗಾಗುತ್ತಿದೆ. ಅದೇರೀತಿ ಇತ್ತೀಚೆಗೆ ಜಾನಿ ಎಂಬ ನೆಟ್ಟಿಗರೊಬ್ಬರು ಎಲ್ ಆ್ಯಂಡ್‌ ಟಿ ಅಧ್ಯಕ್ಷರ ಈ ವಿವಾದಾತ್ಮಕ ಹೇಳಿಕೆಯನ್ನು ಬಳಸಿಕೊಂಡು ಬಹಳ ಅದ್ಭುತವಾಗಿ ರೀಲ್ ಮಾಡುವ ಮೂಲಕ ʼಕಲಾತ್ಮಕʼವಾಗಿ ಟೀಕಿಸಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ಜಾನಿ ಉದ್ಯೋಗಕ್ಕಾಗಿ ಇಂಟರ್‌ವ್ಯೂನಲ್ಲಿ ಭಾಗವಹಿಸಿದ್ದು, ಅವರು ಅರ್ಜಿ ಸಲ್ಲಿಸುತ್ತಿದ್ದ ಕಂಪನಿ ಎಲ್ & ಟಿ ಬದಲು ʼಲೆಮನ್ ಟೀ ಪ್ರೈವೇಟ್ ಲಿಮಿಟೆಡ್ʼ. ಸಹಜವಾಗಿ ಈ ಕಂಪನಿಯ ಹೆಸರನ್ನು ಅವರು ತಮಾಷೆಯಾಗಿ ಬಳಸಿಕೊಂಡಿದ್ದಾರೆ.

ಅವರು ತಮ್ಮ ಲ್ಯಾಪ್‌ಟಾಪ್‌ ಪರದೆಯ ಮೇಲಿನ ವಿವರಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಲೆಮನ್ ಟೀ ಎಂದು ಕರೆಯಲ್ಪಡುವ ಸಂಸ್ಥೆಯಲ್ಲಿ ತಮ್ಮ ಉದ್ಯೋಗ ಸಂದರ್ಶನದ ಸಮಯದಲ್ಲಿ ಬಹಳ ಕ್ಲಿಷ್ಟಕರವಾದ ಪ್ರಶ್ನೆಯನ್ನು ಕೇಳಿರುವುದಾಗಿ ತೋರಿಸಿದ್ದಾರೆ.

ಅವರನ್ನು ಗೊಂದಲಕ್ಕೀಡು ಮಾಡಿದ ಸಂದರ್ಶನದ ಪ್ರಶ್ನೆಯು ಅಧ್ಯಕ್ಷರ ಇತ್ತೀಚಿನ ಹೇಳಿಕೆಯ ಸುತ್ತ ಸುತ್ತುತ್ತದೆ. "ನೀವು ನಿಮ್ಮ ಹೆಂಡತಿಯನ್ನು ದಿಟ್ಟಿಸಿ ನೋಡುತ್ತೀರಾ?" ಎಂದು ಅರ್ಜಿಯಲ್ಲಿ ಅಭ್ಯರ್ಥಿಯನ್ನು ಕೇಳಲಾಗಿತ್ತು. ಇದಕ್ಕೆ ಜಾನಿಯವರ ಪ್ರತಿಕ್ರಿಯೆ ಹೇಗಿತ್ತು ಅಂದರೆ, ಮದುವೆಯಾಗಿದೆ ಎಂದು ಹೇಳಿದ್ದೆ ತಪ್ಪಾಯ್ತು ಅನ್ನುವ ಹಾಗೇ ಮುಖಭಾವ ಮಾಡಿದ್ದಾರೆ. ಕೊನೆಗೆ "ವಿವಾಹಿತ" ಅನ್ನು ಆಯ್ಕೆ ಮಾಡುವ ಬದಲು, ಅವರು "ಇಲ್ಲ" ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ್ದಾರೆ. ಅವರು ಮದುವೆಯಾಗಿಲ್ಲ ಮತ್ತು ಹೆಂಡತಿ ಇಲ್ಲ ಎಂದು ಹೇಳಿದರೂ ಅವರ ಸಮಸ್ಯೆ ಇನ್ನೂ ಮುಗಿಯಲಿಲ್ಲ. ಮದುವೆಯಾಗಿಲ್ಲ ಎಂದು ಹೇಳುವ ಮೂಲಕ ಪ್ರಶ್ನೆಯನ್ನು ತಿರಸ್ಕರಿಸಿದರೂ ಮತ್ತೆ ಪುನಃ ಮದುವೆಯಾದ ನಂತರ ಹೆಂಡತಿಯನ್ನು ದಿಟ್ಟಿಸಿ ನೋಡುತ್ತೀಯಾ ಎಂಬ ಪ್ರಶ್ನೆ ಫಾರ್ಮ್‍ನಲ್ಲಿ ಕಾಣಿಸಿಕೊಂಡಿತು.

ಈ ಸುದ್ದಿಯನ್ನೂ ಓದಿ:Anand Mahindra: ನನ್ನ ಹೆಂಡ್ತಿ ಸುಂದರವಾಗಿದ್ದಾಳೆ, 90 ಗಂಟೆ ಏಕೆ ಕೆಲಸ ಮಾಡ್ಬೇಕು? L&T ಮುಖ್ಯಸ್ಥರಿಗೆ ಆನಂದ್‌ ಮಹೀಂದ್ರ ಟಾಂಗ್‌

ಈ ಫನ್ನಿ ವಿಡಿಯೊವನ್ನು ಜಾನಿ ಜನವರಿ 13ರಂದು ಅಪ್‌ಲೋಡ್‌ ಮಾಡಿದ್ದಾರೆ ಮತ್ತು ಇದು ಈಗಾಗಲೇ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಇದು ಇಲ್ಲಿಯವರೆಗೆ ಸೋಶಿಯಲ್ ಮೀಡಿಯಾ ಪ್ಲಾಟ್‍ಫಾರ್ಮ್‍ನಲ್ಲಿ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು ಸಾವಿರಾರು ಲೈಕ್‍ಗಳನ್ನು ಗಳಿಸಿದೆ. ಕಾಮೆಂಟ್‍ಗಳ ವಿಭಾಗವು ನಗೆಯ ಎಮೋಜಿಗಳಿಂದ ತುಂಬಿದೆ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ