Cannes 2025: ಕೇನ್ಸ್ ಫಿಲ್ಮ್ ಫೆಸ್ಟಿವಲ್ಗೆ ಬಾಲಿವುಡ್ ನಟಿ ಶ್ರೀದೇವಿ ಪುತ್ರಿ ಜಾಹ್ನವಿ ಗ್ರ್ಯಾಂಡ್ ಎಂಟ್ರಿ; ಅಮ್ಮನಿಗೆ ಹೋಲಿಸಿದ ನೆಟ್ಟಿಗರು
ಫ್ರಾನ್ಸ್ನಲ್ಲಿ ನಡೆಯುತ್ತಿರುವ 78ನೇ ಅಂತಾರಾಷ್ಟ್ರೀಯ ಕೇನ್ಸ್ ಫಿಲ್ಮ್ ಫೆಸ್ಟಿವಲ್ಗೆ ಮೇ 13ರಂದು ಚಾಲನೆ ಸಿಕ್ಕಿದೆ. ಈ ಕಾರ್ಯಕ್ರಮಕ್ಕೆ ಬಾಲಿವುಡ್, ಹಾಲಿವುಡ್ನ ಅನೇಕ ತಾರೆಯರು ಆಗಮಿಸಿ ಹೊಸ ಮೆರುಗು ನೀಡುತ್ತಿದ್ದಾರೆ. ನಟಿ ಶ್ರೀದೇವಿ ಅವರ ಪುತ್ರಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್ ಕೂಡ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಮಿಂಚಿದ್ದಾರೆ. ʼಹೋಮ್ ಬೌಂಡ್ʼ ಸಿನಿಮಾ ತಂಡದೊಂದಿಗೆ ಅವರು ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗಿಯಾಗಿದ್ದು, ಅವರ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

Cannes 2025


ಜಾಹ್ನವಿ ಕಪೂರ್ ಅವರು ಕೇನ್ಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ರಿನ್ಸೆನ್ ಲುಕ್ನಿಂದ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ʼಹೋಮ್ ಬೌಂಡ್ʼ ಚಿತ್ರದ ಸಹನಟರಾದ ಇಶಾನ್ ಖಟ್ಟರ್ ಮತ್ತು ವಿಶಾಲ್ ಜೆಥ್ವಾ, ನಿರ್ದೇಶಕ ನೀರಜ್ ಘಯ್ವಾನ್ ಮತ್ತು ನಿರ್ಮಾಪಕ ಕರಣ್ ಜೋಹರ್ ಕೂಡ ರೆಡ್ ಕಾರ್ಪೆಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ʼಹೋಮ್ ಬೌಂಡ್ʼ ಸಿನಿಮಾ ತಂಡವು ಜತೆಯಾಗಿ ಫೋಟೊಕ್ಕೆ ಪೋಸ್ ನೀಡಿದ್ದು, ಸದ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಜಾಹ್ನವಿ ತನ್ನ ಬೃಹತ್ ಗೌನ್ ಧರಿಸಿ ರೆಡ್ ಕಾರ್ಪೆಟ್ ಮೇಲೆ ಮಿಂಚಿದ್ದಾರೆ. ಅವರ ಸಹನಟ ಇಶಾನ್ ಮತ್ತು ನಿರ್ದೇಶಕ ನೀರಜ್ ನಟಿ ಜಾಹ್ನವಿಗೆ ಕ್ಯಾಮೆರಾಗಳಿಗೆ ಸಲೀಸಾಗಿ ಪೋಸ್ ನೀಡಲು ಉಡುಪನ್ನು ನಿರ್ವಹಿಸಲು ಸಹಾಯ ಮಾಡುತ್ತಿರುವ ಫೋಟೊ ಕೂಡ ನೆಟ್ಟಿಗರ ಗಮನ ಸೆಳೆದಿದೆ.

ನಟಿ ಜಾಹ್ನವಿ ತೊಟ್ಟ ಗೌನ್ ಅನ್ನು ತರುಣ್ ತಹಿಲಿಯಾನಿ ವಿನ್ಯಾಸಗೊಳಿಸಿದ್ದು ಕಸ್ಟಮ್-ಮೇಡ್ ಪಿಂಕ್ ಔಟ್ಫಿಟ್ನಲ್ಲಿ ಜಾಹ್ನವಿ ಸ್ಟನಿಂಗ್ ಲುಕ್ನಿಂದ ಕಂಗೊಳಿಸಿದ್ದಾರೆ. ನಟಿ ಜಾಹ್ನವಿ ಬೇಬಿ ಪಿಂಕ್ ಗೌನ್ಗೆ ಹೊಂದುವಂತ ಮ್ಯಾಚಿಂಗ್ ಮುತ್ತಿನ ಮಣಿಗಳ ಆಭರಣ ತೊಟ್ಟಿದ್ದು, ಈ ಕಾಂಬಿನೇಶನ್ನಿಂದ ಮತ್ತಷ್ಟು ಮೆರುಗು ಹೆಚ್ಚಿದೆ.

ರಾಜಕುಮಾರಿಯಂತೆ ಕಾಣುತ್ತಿದ್ದ ಜಾಹ್ನವಿಯ ಲುಕ್ ಕಂಡು ಹಲವರು ಫಿದಾ ಆಗಿದ್ದಾರೆ. ಶ್ರೀದೇವಿಯಂತೆ ಕಾಣುವುದಾಗಿ ನೆಟ್ಟಿಗರೊಬ್ಬರು ಫೋಟೊಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ನಟಿ ಜಾಹ್ನವಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.

ನೀರಜ್ ಘಯ್ವಾನ್ ನಿರ್ದೇಶನದ ʼಹೋಮ್ ಬೌಂಡ್ʼ ಚಿತ್ರದಲ್ಲಿ ಜಾಹ್ನವಿ, ಇಶಾನ್ ಮತ್ತು ವಿಶಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕೇನ್ಸ್ನಲ್ಲಿ ಅನ್ ಸೆರ್ಟೈನ್ ರಿಗಾರ್ಡ್ ವಿಭಾಗದಲ್ಲಿ ಪ್ರಥಮ ಪ್ರದರ್ಶನಗೊಂಡಿದೆ. ಈ ಚಿತ್ರಕ್ಕೆ ಮರಿಜ್ಕೆ ಡಿ ಸೋಜಾ ಮತ್ತು ಮೆಲಿಟಾ ಟೋಸ್ಕನ್ ಡು ಪ್ಲಾಂಟಿಯರ್ ಸಹ-ನಿರ್ಮಾಪಕರು.