Thug Life: ಕಾಲಿವುಡ್ನಲ್ಲಿ ದಾಖಲೆ ಬರೆಯಲು ಸಜ್ಜಾದ ಮಣಿ ರತ್ನಂ-ಕಮಲ್ ಹಾಸನ್ ಜೋಡಿ; ʼಥಗ್ ಲೈಫ್ʼ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಫುಲ್ ಬ್ಯುಸಿ
ಖ್ಯಾತ ನಟ ಕಮಲ್ ಹಾಸನ್ ಮತ್ತು ನಿರ್ದೇಶಕ ಮಣಿರತ್ನಂ ಅವರ ಕಾಂಬಿನೇಶನ್ ಮೂಲಕ ಮೂಡಿ ಬಂದಿರುವ ʼಥಗ್ ಲೈಫ್ʼ ತಮಿಳು ಸಿನಿಮಾವು ರಿಲೀಸ್ಗೂ ಮುನ್ನವೇ ಬಹುನಿರೀಕ್ಷೆ ಹುಟ್ಟಿಸುತ್ತಿದೆ. ಕಾಲಿವುಡ್ ಬಿಗ್ ಬಜೆಟ್ ಸಿನಿಮಾ ʼಥಗ್ ಲೈಫ್ʼನ ಟ್ರೈಲರ್ ಮೇ 17ರಂದು ರಿಲೀಸ್ ಆಗಿದೆ. ಜೂ. 5ರಂದು ಸಿನಿಮಾ ರಿಲೀಸ್ ಆಗಲಿದೆ. ಹೀಗಾಗಿ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಕಮಲ್ ಹಾಸನ್ ಮತ್ತು ಸಿಲಂಬರಸನ್ ಸೇರಿದಂತೆ ಇಡೀ ಚಿತ್ರತಂಡವು ಪ್ರಮೋಷನ್ನಲ್ಲಿ ಫುಲ್ ಬ್ಯುಸಿಯಾಗಿದೆ. ಈ ಕುರಿತಾದ ಕೆಲವು ಫೋಟೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

Thug Life_ Kamal Hassan, Silambarasan


ʼಥಗ್ ಲೈಫ್ʼ ಸಿನಿಮಾದಲ್ಲಿ ಬಹುಭಾಷಾ ನಟ ಕಮಲ್ ಹಾಸನ್, ನಟಿ ತ್ರಿಶಾ ಕೃಷ್ಣನ್, ಸಿಲಂಬರಸನ್, ಜೋಜು ಜಾರ್ಜ್, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಗೌತಮ್ ಕಾರ್ತಿಕ್, ಅಭಿರಾಮಿ ಗೋಪಿಕುಮಾರ್ ಸೇರಿದಂತೆ ಬಹು ತಾರಾಗಣವಿದೆ. ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿರುವ ʼಥಗ್ ಲೈಫ್ʼ ಜೂ. 5ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಹೀಗಾಗಿ ಚಿತ್ರತಂಡವು ಮುಂಬೈಯಲ್ಲಿ ಭರ್ಜರಿಯಾಗಿ ಪ್ರಚಾರ ಕಾರ್ಯ ನಡೆಸುತ್ತಿದೆ.

ಈ ಸಿನಿಮಾದ ಪ್ರಚಾರಕ್ಕಾಗಿ ನಟ ಕಮಲ್ ಹಾಸನ್ ಮುಂಬೈಗೆ ಬಂದಿದ್ದಾರೆ. ಅವರು ಮುಂಬೈಯ ಪ್ರಚಾರ ಕಾರ್ಯ ಮುಗಿಸಿ ಹೊರಬರುತ್ತಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲಿ ನಟ ಕಮಲ್ ಹಾಸನ್ ಕ್ಯಾಶುವಲ್ ಕ್ರೀಮ್ ಕಲರ್ ಬಟ್ಟೆ ಧರಿಸಿದ್ದು ಸ್ಟೈಲ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೊಂದು ಚಿತ್ರದಲ್ಲಿ ನಟ ಸಿಲಂಬರಸ್ ಕೂಡ ಕಪ್ಪು ಬಣ್ಣದ ಸ್ಟೈಲಿಶ್ ವೆಸ್ಟರ್ನ್ ಲುಕ್ನಲ್ಲಿ ಫೋಟೊಗಳಿಗೆ ಪೋಸ್ ನೀಡಿದ್ದನ್ನು ಕಾಣಬಹುದು.

ನಟಿ ತ್ರಿಶಾ ಕೂಡ ಮುಂಬೈಗೆ ಆಗಮಿಸಿದ್ದು ವೈಟ್ ಶರ್ಟ್ ಮತ್ತು ಜೀನ್ಸ್ನಲ್ಲಿ ಹೆಚ್ಚು ಸ್ಟೈಲಿಶ್ ಆಗಿ ಕಂಗೊಳಿಸಿದ್ದಾರೆ. ಇವರ ಫ್ರೀ ಹೇರ್ ಸ್ಟೈಲ್, ಸಿಂಪಲ್ ಮೇಕಪ್ ಹಾಗೂ ಕ್ಯಾಶುವಲ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.

ಇನ್ನೊಂದು ಚಿತ್ರದಲ್ಲಿ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಕೂಡ ಮುಂಬೈಗೆ ಆಗಮಿಸಿದ್ದನ್ನು ಕಾಣಬಹುದು. ಅವರು ಗ್ರೀನ್ ಸೂಟ್ ಧರಿಸಿ ಗ್ರ್ಯಾಂಡ್ ಆಗಿ ಫೋಟೊಕ್ಕೆ ಪೋಸ್ ನೀಡಿದ್ದಾರೆ. ʼಥಗ್ ಲೈಫ್ʼ ಚಿತ್ರವನ್ನು ರಾಜ್ ಕಮಲ್ ಫಿಲ್ಮಸ್ ಇಂಟರ್ನ್ಯಾಷನಲ್, ಮದ್ರಾಸ್ ರಾಲ್ಕೀಸ್ ಮತ್ತು ರೆಡ್ ಜೈಂಟ್ ಮೂವೀಸ್ ನಿರ್ಮಿಸಿವೆ. ಸಿನಿಮಾದ ಪೋಸ್ಟರ್ ಹಾಗೂ ಟೀಸರ್ನಲ್ಲಿ ಕಮಲ್ ಹಿಂದೆಂದೂ ಕಾಣದ ವಿಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಅಪರಾಧ ಪ್ರಪಂಚದ ಸಿಲುಕಿರುವ ಯುವಕನೊಬ್ಬನಿಗೆ ಮಾರ್ಗದರ್ಶನ ನೀಡುವ ದರೋಡೆಕೋರನ ವಿಭಿನ್ನ ಪಾತ್ರದಲ್ಲಿ ನಟ ಕಮಲ್ ಹಾಸನ್ ಕಾಣಿಸಿಕೊಂಡಿದ್ದಾರೆ. ಯುವಕನ ಪಾತ್ರವನ್ನು ಸಿಲಂಬರಸನ್ ನಿರ್ವಹಿಸಿದ್ದಾರೆ. ಈ ಸಿನಿಮಾ ಮಾಸ್ ಆಗಿದ್ದು ಸಖತ್ ಕಿಕ್ ನೀಡಿ ಅಭಿಮಾನಿಗಳನ್ನು ರಂಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 1987ರಲ್ಲಿ ರಿಲೀಸ್ ಆದ ಕ್ಲಾಸಿಕ್ ʼನಾಯಕನ್ʼ ಸಿನಿಮಾದಲ್ಲಿ ನಿರ್ದೇಶಕ ಮಣಿರತ್ನಂ ಮತ್ತು ಕಮಲ್ ಹಾಸನ್ ಜತೆಯಾಗಿ ಕೆಲಸ ಮಾಡಿದ್ದರು. ಇದೀಗ 35 ವರ್ಷಗಳ ಬಳಿಕ ಬಳಿಕ ʼಥಗ್ ಲೈಫ್ʼ ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ.