ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharma KeerthiRaj: ಹಾಟ್ ಬೆಡಗಿ ಅಪ್ಸರೆ ಜೊತೆ ಪೊಲೀಸ್ ಲುಕ್​ನಲ್ಲಿ ಮಿಂಚಿದ ಧರ್ಮ

ಧರ್ಮ ಅವರ ಹೊಸ ಚಿತ್ರದ ಹೆಸರು ಬ್ಲಡ್ ರೋಸಸ್ ಎಂದು. ಈ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲೂ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ.

ಹಾಟ್ ಬೆಡಗಿ ಅಪ್ಸರೆ ಜೊತೆ ಪೊಲೀಸ್ ಲುಕ್​ನಲ್ಲಿ ಮಿಂಚಿದ ಧರ್ಮ

Dharma and Apsara Rani

Profile Vinay Bhat Apr 5, 2025 6:32 PM

ಬಿಗ್ ಬಾಸ್ ಕನ್ನಡ ಸೀಸನ್ 11 ಧರ್ಮ ಕೀರ್ತಿರಾಜ್​ಗೆ (Dharma Keerthiraj) ದೊಡ್ಡ ಬ್ರೇಕ್ ಕೊಟ್ಟಿದೆ. ಎಂಟನೇ ವಾರಕ್ಕೆ ಎಲಿಮಿನೇಟ್ ಆದರೂ ಇವರೀಗ ಸಿನಿಮಾ ಇಂಡಸ್ಟ್ರಿಯಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ. ಹೊಸ ಚಿತ್ರಗಳ ಆಫರ್ ಹುಡುಕಿಕೊಂಡು ಬರುತ್ತಿದೆ. ಆದರೆ, ಈವರೆಗೆ ಧರ್ಮಾ ಅವರು ತಮ್ಮ ಮುಂಬರುವ ಸಿನಿಮಾ ಕುರಿತು ಯಾವುದೇ ಹೊಸ ಅಪ್ಡೇಟ್ ಕೊಟ್ಟಿರಲಿಲ್ಲ. ಇದೀಗ ಸದ್ದಿಲ್ಲದೆ ಧರ್ಮ ಕೀರ್ತಿರಾಜ್‌ ಟಾಲಿವುಡ್​ಗೆ ಗ್ರ್ಯಾಂಡ್ ಆಗಿ ಕಾಲಿಟ್ಟಿದ್ದಾರೆ. ಧರ್ಮ ಕೀರ್ತಿರಾಜ್‌ ನಟನೆಯ ಮೊದಲ ತೆಲುಗು ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಇದರ ಫೋಟೋಗಳು ವೈರಲ್ ಆಗುತ್ತಿವೆ.

ಧರ್ಮ ಅವರ ಹೊಸ ಚಿತ್ರದ ಹೆಸರು ಬ್ಲಡ್ ರೋಸಸ್ ಎಂದು. ಈ ಕ್ರೈಮ್ ಥ್ರಿಲ್ಲರ್ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರು ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ನಡೆದಿದೆ. ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲೂ ಈ ಸಿನಿಮಾದ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಧರ್ಮಗೆ ಅಪ್ಸರ ರಾಣಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಟಾಲಿವುಡ್‌ನ ಬೋಲ್ಡ್ ಬ್ಯೂಟಿ ಅಪ್ಸರ ರಾಣಿ ಹಲವು ಹಾಟ್ ಪಾತ್ರಗಳನ್ನು ಮಾಡಿ ಸುದ್ದಿಯಾಗಿದ್ದರು.

ನಟ ಧರ್ಮಗೆ ಈವರೆಗೂ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಗೆಲುವೇನೂ ಸಿಕ್ಕಿಲ್ಲ. ಈಗ ಟಾಲಿವುಡ್‌ನಲ್ಲಿ ಅಪ್ಸರ ರಾಣಿ ಜೊತೆ ಬ್ಲಡ್ ರೋಸಸ್ ಮೂಲಕ ಅವರು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಈ ಸಿನಿಮಾ ಯಾವಾಗ ಬಿಡುಗಡೆ ಆಗಲಿದೆ ಎಂಬುದನ್ನು ಚಿತ್ರರಂಗ ಬಹಿರಂಗಗೊಳಿಸಿಲ್ಲ. ಆದರೆ ತೆಲುಗಿನ ಜೊತೆ ಕನ್ನಡದಲ್ಲೂ ಬ್ಲಡ್ ರೋಸಸ್ ರಿಲೀಸ್ ಆಗಿದೆ. ಸದ್ಯ ಧರ್ಮ ಹಾಗೂ ಅಪ್ಸರೆ ಪೊಲೀಸ್ ಡ್ರೆಸ್​ನಲ್ಲಿ ಪೋಸ್ ಕೊಟ್ಟಿರುವ ಫೋಟೋ ಎಲ್ಲೆಡೆ ಹರಿದಾಡುತ್ತಿದೆ.

ಬ್ಲಡ್ ರೋಸಸ್ ಸಿನಿಮಾವನ್ನು ಟಿಬಿಆರ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಹರೀಶ್ ಕೆ ನಿರ್ಮಾಣ ಮಾಡಿದ್ದು, ಎಂ ಗುರುರಾಜನ್ ಅವರು ನಿರ್ದೇಶನ ಮಾಡಿದ್ದಾರೆ. ಶ್ರೀಲು, ಸುಮನ್, ಟಾರ್ಜನ್, ಘರ್ಷಣ ಶ್ರೀನಿವಾಸ್, ಜಗದೀಶ್ವರಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಶಿವಕುಮಾರ್ ಛಾಯಾಗ್ರಹಣ ಇರುವ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳು ಭರದಿಂದ ಸಾಗಿವೆ.

ಕನ್ನಡ ಚಿತ್ರರಂಗದ ಪ್ರಸಿದ್ಧ ಖಳನಟ ಕೀರ್ತಿರಾಜ್ ಮಗನಾದ ಧರ್ಮ ಕೀರ್ತಿರಾಜ್ ನವಗ್ರಹ ಸಿನಿಮಾ ಮೂಲಕ ಗಮನ ಸೆಳೆದರು. ನಂತರ ಒಲವೇ ವಿಸ್ಮಯ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಹೊರಹೊಮ್ಮಿದರು. ಬಳಿಕ ಹಲವಾರು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವು ಹಿಟ್ ಆಗಲಿಲ್ಲ. ಈಗ ಬಿಗ್ ಬಾಸ್​ಗೆ ಹೋಗಿ ಬಂದ ಬಳಿಕ ಹೊಸ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು, ಯಶಸ್ಸು ಸಿಗುತ್ತ ಎಂಬುದು ಕಾದುನೋಡಬೇಕಿದೆ.

Bhagya Lakshmi Serial: ಸೈಕಲ್​ಗೆ ತಾನೇ ಪಂಚರ್ ಹಾಕಿ ಸರಿಯಾದ ಸಮಯಕ್ಕೆ ಊಟ ತಲುಪಿಸಿದ ಭಾಗ್ಯ