Bhagya Lakshmi Serial: ಸೈಕಲ್ಗೆ ತಾನೇ ಪಂಚರ್ ಹಾಕಿ ಸರಿಯಾದ ಸಮಯಕ್ಕೆ ಊಟ ತಲುಪಿಸಿದ ಭಾಗ್ಯ
ಆರ್ಡರ್ ಕೊಟ್ಟವರು ಭಾಗ್ಯ ಬಂದ ಕೂಡಲೇ ಇರಮ್ಮ.. ಆತುರದಲ್ಲಿ ತಂದು ಕೊಟ್ಟಿದ್ದೀಯಾ.. ಅಡುಗೆ ಹೇಗೆ ಮಾಡಿದ್ದಿಯೊ ಏನೊ.. ಟೇಸ್ಟ್ ನೋಡ್ತೇನೆ ಎಂದು ರುಚಿ ನೋಡಿದ್ದಾರೆ. ಭಾಗ್ಯ ಮಾಡಿರುವ ಅಡುಗೆಯ ರುಚಿ, ಘಮ ನೋಡಿದ ಅವರು, ಆಹಾ.. ಎಂದಿದ್ದಾರೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತನಗೆ ಬಂದ ಕಷ್ಟವನ್ನೆಲ್ಲ ಏಕಾಂಗಿಯಾಗಿ ನಿಂತು ಎದುರಿಸಿದ್ದಾಳೆ. ಯಾರ ಸಹಾಯವೂ ಕೇಳದೆ ತನ್ನ ಕಷ್ಟದ ಜವಾಬ್ದಾರಿಯನ್ನು ತಾನೇ ಹೊತ್ತು ಅದರಿಂದ ಪಾರಾಗುತ್ತಾಳೆ. ಇದು ಊಟದ ಆರ್ಡರ್ ಕೊಡುವ ವಿಚಾರದಲ್ಲೂ ಮುಂದೆವರೆದಿದೆ.. ಭಾಗ್ಯಾಳ ಕೈ ತುತ್ತಿದೆ ಒಂದು ದೊಡ್ಡ ಆರ್ಡರ್ ಬಂದಿದೆ. ಆದರೆ, ಅದನ್ನು ಅವರ ಮನೆಗೆ ತಲುಪಿಸಲು ಭಾಗ್ಯಾ ಹರಸಾಹಸ ಪಡುತ್ತಾಳೆ. ಸೈಕಲ್ ಏರಿ ಆರ್ಡರ್ ತೆಗೆದುಕೊಂಡು ಹೋಗುವಾಗ ಸೈಕಲ್ ಟಯರ್ ಪಂಚರ್ ಆಗಿದೆ. ಬಳಿಕ ತಾನೇ ಸೈಕಲ್ಗೆ ಟಯರ್ಗೆ ಪಂಚರ್ ಹಾಕಿಸಿ ಊಟವನ್ನು ಸರಿಯಾದ ಸಮಯಕ್ಕೆ ತಲುಪಿಸಿದ್ದಾಳೆ.
ಭಾಗ್ಯಗೆ ಯುಗಾದಿ ಹಬ್ಬದ ಅಡುಗೆ ಊಟ ತಲುಪಿಸಲು ಕರೆ ಬರುತ್ತದೆ. ಅವಳು ಎಲ್ಲವನ್ನು ಸಿದ್ಧಪಡಿಸಿಕೊಂಡು ಕಾರಿನಲ್ಲಿ ಲೊಕೇಷನ್ಗೆ ಹೊರಡಲು ಮುಂದಾಗುತ್ತಾಳೆ. ಆದರೆ ಲೊಕೇಷನ್ ಮಧ್ಯೆ ಟ್ರಾಫಿಕ್ ಜಾಮ್ ಇದೆ ಎಂದು ತೋರಿಸುತ್ತದೆ. ಹೀಗಾಗಿ ಭಾಗ್ಯ ಸೈಕಲ್ ಏರುತ್ತಾಳೆ. ಸೈಕಲ್ ಓಡಿಸಿಕೊಂಡೇ ಲೊಕೇಷನ್‌ನತ್ತ ಸಾಗುವಾಗ ಟಯರ್ ಪಂಚರ್ ಆಗುತ್ತದೆ. ಅತ್ತ ಆರ್ಡರ್ ನೀಡಿದವರು ಈಯಮ್ಮ ಇನ್ನೂ ಬಂದಿಲ್ಲವಲ್ಲ ಎಂದು ಕೋಪದಲ್ಲಿರುತ್ತಾರೆ. ಪಂಚರ್ ಹಾಕಲು ಲೇಟ್ ಆಗುತ್ತೆ ಎಂದಾಗ ತಾನೇ ಪಂಚರ್ ಹಾಕಲು ಭಾಗ್ಯ ಮುಂದಾಗುತ್ತಾಳೆ. ಪಂಚರ್ ಹಾಕಿ ಪುನಃ ಸೈಕಲ್ ತುಳಿದು ಭಾಗ್ಯ ಸರಿಯಾದ ಸಮಯಕ್ಕೆ ಆರ್ಡರ್ ಮುಟ್ಟಿಸಿದ್ದಾಳೆ.
ಆದರೆ, ಆರ್ಡರ್ ಕೊಟ್ಟವರು ಭಾಗ್ಯ ಬಂದ ಕೂಡಲೇ ಇರಮ್ಮ.. ಆತುರದಲ್ಲಿ ತಂದು ಕೊಟ್ಟಿದ್ದೀಯಾ.. ಅಡುಗೆ ಹೇಗೆ ಮಾಡಿದ್ದಿಯೊ ಏನೊ.. ಟೇಸ್ಟ್ ನೋಡ್ತೇನೆ ಎಂದು ರುಚಿ ನೋಡಿದ್ದಾರೆ. ಭಾಗ್ಯ ಮಾಡಿರುವ ಅಡುಗೆಯ ರುಚಿ, ಘಮ ನೋಡಿದ ಅವರು, ಆಹಾ.. ಎಂದಿದ್ದಾರೆ, ನಂತರ ಊಟ ತೆಗೆದುಕೊಂಡು, ದುಡ್ಡು ಕೊಟ್ಟಿದ್ದಾರೆ. ಮುಂದೆ ಯಾವುದೇ ಕಾರ್ಯಕ್ರಮ ಇದ್ದರೂ, ಊಟದ ಆರ್ಡರ್ ನೀಡುವುದಾಗಿ ಹೇಳಿದ್ದಾರೆ.
ಇವರ ಮಾತು ಕೇಳಿ ಭಾಗ್ಯಾಗೆ ತುಂಬಾ ಖುಷಿಯಾಗಿದೆ, ಅವರಿಂದ ದುಡ್ಡು ಪಡೆದುಕೊಂಡು, ಊಟ ತಲುಪಿಸಿದ ಗೆಲುವಿನಿಂದ ವಾಪಸ್ ಮನೆಗೆ ಮರಳಿದ್ದಾಳೆ. ಮನೆಯಲ್ಲಿ ಬಂದು ನಡೆದ ಘಟನೆ ವಿವರಿಸಿದ್ದಾಳೆ. ಅಲ್ಲದೆ, ಊಟ ಅವರಿಗೆ ಹಿಡಿಸಿದೆ, ಮುಂದೆಯೂ ಆರ್ಡರ್ ನೀಡುವುದಾಗಿ ಹೇಳಿದ್ದಾರೆ ಎಂದು ಹೇಳಿದ್ದಾಳೆ.
ಅತ್ತ ಶ್ರೇಷ್ಠಾ ತಾಂಡವ್ನನ್ನು ಸಮಾಧಾನ ಪಡಿಸಲು ನಾನಾ ಕಸರತ್ತು ನಡೆಸುತ್ತಿದ್ದಾಳೆ. ತನ್ವಿ ರೆಸಾರ್ಟ್ಗೆ ಹೋಗಲು ಶ್ರೇಷ್ಠಾ ಸೈನ್ ಹಾಕಿದ್ದಕ್ಕೆ ತಾಂಡವ್ ಕೆಂಡಾಮಂಡಲನಾಗಿದ್ದಾನೆ. ಶ್ರೇಷ್ಠಾ ಕೆನ್ನೆಗೂ ಬಾರಿಸಿದ್ದ. ಶ್ರೇಷ್ಠ ತಾಂಡವ ನ ಬಳಿಗೆ ಬಂದು ಸಮಾಧಾನ ಪಡಿಸಲು ಮುಂದಾಗುತ್ತಾಳೆ. ಆದರೆ ತಾಂಡವ್ ಮಾತ್ರ ಅದ್ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ. ಬಹಳ ಜೋರಾಗಿಯೇ ಶ್ರೇಷ್ಠ ಗೆ ಬೈಯಲು ಶುರು ಮಾಡುತ್ತಾನೆ. ಶ್ರೇಷ್ಠ ಗೆ ಏನು ಮಾಡಬೇಕು ತಿಳಿಯದೇ ಕೊನೆಗೆ ತಾಂಡವ್ನ ಕಾಲು ಹಿಡಿದು ಬೇಡುತ್ತಾಳೆ. ನನ್ನನ್ನು ಕ್ಷಮಿಸು ನಾನು ಇನ್ನುಮುಂದೆ ಈ ತಪ್ಪು ಮಾಡುವುದಿಲ್ಲ ಎಂದು ಬೇಡಿಕೊಳ್ಳುತ್ತಾಳೆ.
Rajath Kishan: ಬಾಯ್ಸ್ vs ಗರ್ಲ್ಸ್ ಶೋಗೆ ಬೆಂಕಿಯಂತೆ ಎಂಟ್ರಿಕೊಟ್ಟ ರಜತ್: ವಿನಯ್ ಗೌಡ ಅಬ್ಸೆಂಟ್