ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ranbir Kapoor: ರಣಬೀರ್ ಕಪೂರ್ ನ್ಯೂ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ! ವಿಡಿಯೊ ನೋಡಿ

ನಟ ರಣಬೀರ್ ಕಪೂರ್ ಅವರು ಇತ್ತೀಚೆಗಷ್ಟೆ ಮುಂಬೈಗೆ ತೆರಳಿದ್ದು ಅಲ್ಲಿನ ಪ್ರವಾಸದ ವೇಳೆ ಕ್ಲೀನ್ ಶೇವ್ ಮಾಡಿಸಿಕೊಂಡು ನ್ಯೂ ಲುಕ್ ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸ್ಲಿಮ್ ಪರ್ಸ್ ನ್ಯಾಲಿಟಿಗೆ ಹೊಂದುವಂತೆ ನಟ ರಣಬೀರ್ ಕಪೂರ್ ಅವರು ಕ್ಲೀನ್ ಶೇವ್ ಮಾಡಿಸಿಕೊಂಡಿದ್ದ ಕೆಲವು ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇವರ ಈ ವಿಭಿನ್ನ ಲುಕ್ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ರಣಬೀರ್ ಕಪೂರ್ ನ್ಯೂ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ!

Profile Pushpa Kumari Jun 6, 2025 4:38 PM

ನವದೆಹಲಿ: ಬ್ರಹ್ಮಾಸ್ತ್ರ, ಸಂಜು, ಅನಿಮಲ್ ಸಿನಿಮಾ ಖ್ಯಾತಿಯ ನಟ ರಣಬೀರ್ ಕಪೂರ್ (Ranbir Kapoor) ಅವರು ತಮ್ಮ ವಿಶೇಷ ಅಭಿನಯದ ಮೂಲಕವೇ ಜನ ಮನಗೆದ್ದಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಬಹಳ ಆ್ಯಕ್ಟಿವ್ ಆಗಿರುವ ಇವರಿಗೆ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಕೂಡ ಇದೆ. ನಟ ರಣಬೀರ್ ಕಪೂರ್ ಅವರು ಇತ್ತೀಚೆಗಷ್ಟೆ ಮುಂಬೈಗೆ ತೆರಳಿದ್ದು ಅಲ್ಲಿನ ಪ್ರವಾಸದ ವೇಳೆ ಕ್ಲೀನ್ ಶೇವ್ ಮಾಡಿಸಿಕೊಂಡು ನ್ಯೂ ಲುಕ್‌ನಲ್ಲಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸ್ಲಿಮ್ ಪರ್ಸ್ ನ್ಯಾಲಿಟಿಗೆ ಹೊಂದುವಂತೆ ನಟ ರಣಬೀರ್ ಕಪೂರ್ ಅವರು ಕ್ಲೀನ್ ಶೇವ್ ಮಾಡಿಸಿಕೊಂಡಿದ್ದ ಕೆಲವು ಫೋಟೋ ಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಇವರ ಈ ವಿಭಿನ್ನ ಲುಕ್ ಕಂಡು ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.

ನಟ ರಣಬೀರ್ ಕಪೂರ್ ಅವರು ಇತ್ತೀಚೆಗಷ್ಟೆ ಅನಿಮಲ್ ಸಿನಿಮಾಕ್ಕಾಗಿ ಬಾಡಿ ಟ್ರಾನ್ಫರೆಂಟ್ ಮಾಡಿಸಿಕೊಂಡಿದ್ದರು. ಚಿತ್ರದಲ್ಲಿ ಶಾಲಾ ಹುಡುಗನಾಗಿ , ಯುವಕನಾಗಿ, ವಯಸ್ಕನಾಗಿ ವಿವಿಧ ಹಂತಗಳಲ್ಲಿ ಕಥೆಗೆ ಅನುಗುಣವಾಗಿ ದೇಹವನ್ನು ಕೂಡ ಮಾರ್ಪಾಡುಗೊಳಿಸಿ ಸ್ಲಿಮ್ ಆಗಿದ್ದರು. ಆದರೆ ಈಗ ಅವರು ಅನಿಮಲ್ ಸಿನಿಮಾ ಲುಕ್ ಗಿಂತಲೂ ಬಹಳ ಭಿನ್ನವಾಗಿ ಕಂಡಿದ್ದಾರೆ. ರೆಡ್ ಕಲರ್ ಶರ್ಟ್ , ಡೆನಿಮ್ ಪ್ಯಾಂಟ್ ಹಾಗೂ ಬ್ಲೂ ಕ್ಯಾಪ್ ನಲ್ಲಿ ನಟ ರಣಬೀರ್ ಬಹಳ ಸ್ಲಿಮ್ ಆಗಿ ವಿಡಿಯೋದಲ್ಲಿ ಕಂಡಿದ್ದಾರೆ.

ರಣಬೀರ್ ಕಪೂರ್ ನ್ಯೂ ಲುಕ್‌ ವಿಡಿಯೊ ಇಲ್ಲಿದೆ

ವೈರಲ್ ಆದ ವಿಡಿಯೋದಲ್ಲಿ ನಟ ರಣಬೀರ್ ಕಪೂರ್ ಅವರು ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳು ಅವರನ್ನು ಸ್ವಾಗತಿಸಿ ಫೋಟೊಕ್ಕಾಗಿ ಮನವಿ ಮಾಡಿದ್ದಾರೆ. ನಟ ರಣಬೀರ್ ಫೋಟೊ ತೆಗೆಸಿಕೊಳ್ಳುತ್ತಲೇ ತಾನು ಧರಿಸಿದ್ದ ಕ್ಯಾಪ್ ಅನ್ನು ಅಭಿಮಾನಿಯೊಬ್ಬರಿಗೆ ನೀಡಿ ಅಲ್ಲಿಂದ ಕಾರ್ ಹತ್ತಿ ಹೊರಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿದೆ.

ನಟ ರಣಬೀರ್ ಅವರ ಹೊಸ ಲುಕ್ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದೆ. ವಿಡಿಯೋ ಕಂಡ ನೆಟ್ಟಿಗರು ಈ ಬಗ್ಗೆ ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ರಣಬೀರ್ ಕಪೂರ್ ಅವರ ವಯಸ್ಸು 40 ದಾಟಿದರೂ ಇನ್ನು ಟೀನೆಜ್ ಯುವಕನಂತೆ ಕಾಣುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ರಣಬೀರ್ ಅವರ ಪರ್ಫೆಕ್ಟ್ ಲುಕ್ ಎಂದು ಮತ್ತೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ.

ಇದನ್ನು ಓದಿ: Thug Life Movie: ಕಮಲ್‌ ಹಾಸನ್‌ ನಟನೆಯ ʻಥಗ್‌ ಲೈಫ್‌ʼ ಫ್ಲಾಪ್‌? ಮಣಿರತ್ನಂ ಮ್ಯಾಜಿಕ್‌ ಮಾಯ ಆಗಿದ್ಯಾ?

ರಣಬೀರ್ ಕಪೂರ್ 2007 ರಲ್ಲಿ ಸಾವರಿಯಾ ಸಿನಿಮಾದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದವರು. ಬರ್ಫಿ, ಯೇ ಜವಾನಿ ಹೈ ದೀವಾನಿ, ತಮಾಷಾ ಸೇರಿದಂತೆ ಹಲವು ಸಿನಿಮಾಗಳು ತೆರೆಕಂಡು ತಮ್ಮದೇ ಆದ ವಿಶಿಷ್ಟ ಅಭಿನಯದ ಮೂಲಕ ಜನರ ಮನ ಗೆದ್ದಿದ್ದಾರೆ. ಸದ್ಯ ಇವರು ನಿತೇಶ್ ತಿವಾರಿ ಅವರ ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಣಬೀರ್ ರಾಮನ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದರೆ, ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ. ರಾವಣನಾಗಿ ಯಶ್ ಸೇರಿದಂತೆ ಅನೇಕ ತಾರಾಗಣವಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ರವಿ ದುಬೆ ಮತ್ತು ಲಾರಾ ದತ್ತ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಮೊದಲ ಭಾಗವು 2026 ರ ದೀಪಾವಳಿಗೆ ಮತ್ತು ಎರಡನೇ ಭಾಗವು 2027 ರಲ್ಲಿ ಬಿಡುಗಡೆಯಾಗಲಿದೆ.