Bhagya Lakshmi Serial: ಭಾಗ್ಯಾಳಿಗೆ ನರಕ ತೋರಿಸಲು ಹೊರಟ ತಾಂಡವ್-ಶ್ರೇಷ್ಠಾ: ಮನೆಯಲ್ಲಿ ಸೂತಕದ ಛಾಯೆ
ಅತ್ತ ಮಗ ಮನೆ ಬಿಟ್ಟು ಹೋಗಿರುವ ಬೇಜಾರಲ್ಲಿ ಭಾಗ್ಯಾಳ ಅತ್ತೆ ಕುಸುಮಾ ಮಾವಾ ಇದ್ದಾರೆ. ಊಟವನ್ನೂ ಮಾಡದೆ ಕಣ್ಣೀರು ಹಾಕುತ್ತಿದ್ದಾರೆ. ನನ್ನ ಸಮಾಧಾನಕ್ಕಾದರು ಎರಡು ತುತ್ತು ತಿನ್ನಿ ಎಂದು ಭಾಗ್ಯಾ ಒತ್ತಾಯ ಮಾಡಿದರು ಯಾರೂ ಊಟ ಮಾಡಿಲ್ಲ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ( Bhagya Lakshmi Serial ) ಹೊಸ ದಿಕ್ಕಿನತ್ತ ಸಾಗುತ್ತಿದೆ. ಇಷ್ಟು ದಿನ ಶ್ರೇಷ್ಠಾಳಿಗೆ ಬುದ್ದಿ ಕಲಿಸುವ ಕೆಲಸ ಮಾಡುತ್ತದ್ದ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾಳಿಗೆ ಈಗ ಸಂಕಷ್ಟ ಎದುರಾಗಿದೆ. ತಾಂಡವ್ ಹಾಗೂ ಶ್ರೇಷ್ಠಾ ಮನೆಮಂದಿ ವಿರುದ್ಧ ತಿರುಗಿ ನಿಂತಿದ್ದಾರೆ. ಮಗನನ್ನು ಸರಿಮಾಡಲು ಹೊರಟ ಕುಸುಮಾಗೆ ಆಘಾತ ಉಂಟಾಗಿದೆ. ಅಪ್ಪ-ಅಮ್ಮನ ನಡತೆಯಿಂದ ಕೋಪಗೊಂಡಿರುವ ತಾಂಡವ್, ಶ್ರೇಷ್ಠಾ ಜೊತೆ ಮನೆಬಿಟ್ಟು ಹೊರಬಂದಿದ್ದು, ಭಾಗ್ಯಾಳಿಗೆ ನರಕ ತೋರಿಸಲು ಮುಂದಾಗಿದ್ದಾನೆ.
ಮನೆ ಕೆಲಸದವಳು ಮಾಡಿದ ಅವಾಂತರಕ್ಕೆ ಮನೆಯೊಳಗೆ ದೊಡ್ಡ ಹೈ-ಡ್ರಾಮವೇ ನಡೆದಿದೆ. ಈ ಘಟನೆಯಿಂದ ಕೋಪಗೊಂಡ ಶ್ರೇಷ್ಠಾ ಹಾಗೂ ತಾಂಡವ್ ದೊಡ್ಡ ನಿರ್ಧಾರಕ್ಕೆ ಬರುತ್ತಾರೆ. ಇಬ್ಬರೂ ಲಗೇಜ್ ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಬಿಟ್ಟು ಹೋಗಲು ಮುಂದಾಗುತ್ತಾರೆ. ನಾನು ಶ್ರೇಷ್ಠಾ ಈ ಮನೆ ಬಿಟ್ಟು ಹೋಗ್ತಾ ಇದ್ದೇವೆ ಎಂದು ತಾಂಡವ್ ಕುಸುಮಾ ಜೊತೆ ಹೇಳಿದ್ದಾನೆ.
ಈ ಮನೆಯಲ್ಲಿ ನಾನು ಇರಬೇಕಾ ಅಥವಾ ಭಾಗ್ಯಾ ಇರಬೇಕಾ ಎಂದು ತಾಂಡವ್ ಪ್ರಶ್ನೆ ಮಾಡಿದಾಗ ಅಪ್ಪ ಬಂದು, ಏನೇ ಆದ್ರು ನಾವು ಭಾಗ್ಯಾನ ಬಿಟ್ಟುಕೊಡೋ ಮಾತೇ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಇದನ್ನು ಕೇಳಿ ಮತ್ತಷ್ಟು ಸಿಟ್ಟುಮಾಡಿಕೊಂಡ ತಾಂಡವ್, ಇನ್ಮುಂದೆ ಈ ಮನೆ, ಮನೆಯವರು ಯಾರೂ ನನ್ಗೆ ಬೇಡ. ಇವತ್ತಿಂದ ನನ್ಗೂ- ಈ ಮನೆಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಬಳಿಕ ಭಾಗ್ಯ ಹತ್ತಿರ ಬಂದ ತಾಂಡವ್, ಏಯ್ ನೀನು ಮಾಡರೊ ಪಾಪ ನಿನ್ನ ಸುಮ್ನೆ ಬಿಡಲ್ಲ. ಅಪ್ಪ-ಅಮ್ಮ ಮಗನ ಮಧ್ಯೆ ತಂದಿಟ್ಟಿದ್ದಿ ಅಲ್ವಾ ಈ ಪಾಪ ನಿನ್ನ ಸುಮ್ನೆ ಬಿಡುತ್ತೆ ಅಂತ ಅನ್ಕೋಬೇಡ.. ಇನ್ನುಂದೆ ಈ ಮನೆ.. ಮನೆಯವರು ಯಾರೂ ನನಗೆ ಬೇಡ, ನೀನು ಅದೇನ್ ಜವಾಬ್ದಾರಿ ತೆಗೊಳಿತ್ತೀಉ ತೆಗೆದುಕೊ, ನಡಿ ಎಂದು ಶ್ರೇಷ್ಠಾ ಕೈಹಿಡಿದು ಮನೆಯ ಹೊಸ್ತಿಲು ದಾಟಿದ್ದಾನೆ.
ಮನೆಯಿಂದ ಹೊರಬಂದು ಮತ್ತಷ್ಟು ಸಿಟ್ಟಾದ ತಾಂಡವ್, ಈ ಭಾಗ್ಯಾಗೆ ಹೇಗಾದರು ಮಾಡಿ ಬುದ್ದಿ ಕಲಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾನೆ. ಇದಕ್ಕೆ ಶ್ರೇಷ್ಠಾ ಕೂಡ ಸೊಪ್ಪು ಹಾಕಿದ್ದಾಳೆ. ಇಬ್ಬರು ಸೇರಿ ಆ ಭಾಗ್ಯಾಗೆ ಬಿದ್ದಿ ಕಲಿಸೋಣ.. ಅವ್ಳು ನರಕದಲ್ಲಿ ಬದುಕೋದನ್ನು ನೋಡ್ಬೇಕು ಎಂದು ಶ್ರೇಷ್ಠಾ ಹೇಳಿದ್ದಾಳೆ. ಅತ್ತ ತಾಂಡವ್ ಕೂಡ, ಅವ್ಳ ನೆಮ್ಮದಿ ಹಾಳಮಾಡಬೇಕು.. ನನ್ಗೆ ಮಾಡಿರೊ ಅವಮಾನಕ್ಕೆ ಅವಳಿಗೆ ಸರಿಯಾದ ಶಿಕ್ಷೆ ಕೊಡಬೇಕು.. ಅವ್ಳು ಮನೆ ಬಿಟ್ಟು ರೋಡ್ ರೋಡ್ ಅಲಿಬೇಕು ಅಂಥಾ ಸ್ಥಿತಿ ಬರಬೇಕು ಇದೇ ನನ್ನ ಲೈಫ್ನ ಗೋಲ್ ಎಂದು ಹೇಳಿದ್ದಾನೆ.
ಅತ್ತ ಮಗ ಮನೆ ಬಿಟ್ಟು ಹೋಗಿರುವ ಬೇಜಾರಲ್ಲಿ ಭಾಗ್ಯಾಳ ಅತ್ತೆ ಕುಸುಮಾ ಮಾವಾ ಇದ್ದಾರೆ. ಊಟವನ್ನೂ ಮಾಡದೆ ಕಣ್ಣೀರು ಹಾಕುತ್ತಿದ್ದಾರೆ. ನನ್ನ ಸಮಾಧಾನಕ್ಕಾದರು ಎರಡು ತುತ್ತು ತಿನ್ನಿ ಎಂದು ಭಾಗ್ಯಾ ಒತ್ತಾಯ ಮಾಡಿದರು ಯಾರೂ ಊಟ ಮಾಡಿಲ್ಲ. ಸದ್ಯ ಭಾಗ್ಯಾ ಈ ಸಮಸ್ಯೆಯನ್ನು ಹೇಗೆ ಎದಿರಿಸುತ್ತಾಳೆ.. ಅತ್ತೆ-ಮಾವನನ್ನು ಹೇಗೆ ಸಮಾಧಾನ ಪಡಿಸುತ್ತಾಳೆ ಎಂಬುದು ನೋಡಬೇಕಿದೆ.