Bhagya Lakshmi Serial: ಫೇಲ್ ಆಯ್ತು ಭಾಗ್ಯಾ-ಕುಸುಮಾ ಪ್ಲ್ಯಾನ್: ಶ್ರೇಷ್ಠಾ ಕೈಹಿಡಿದು ಮನೆ ತೊರೆದ ತಾಂಡವ್
ಸಿಟ್ಟುಮಾಡಿಕೊಂಡ ತಾಂಡವ್, ಇನ್ಮುಂದೆ ಈ ಮನೆ, ಮನೆಯವರು ಯಾರೂ ನನ್ಗೆ ಬೇಡ. ಇವತ್ತಿಂದ ನನ್ಗೂ- ಈ ಮನೆಗೂ ಯಾವುದೇ ಸಂಬಂಧವಿಲ್ಲ.. ನಡಿ ಎಂದು ಶ್ರೇಷ್ಠಾ ಕೈಹಿಡಿದು ಮನೆಯ ಹೊಸ್ತಿಲು ದಾಟಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ ಧಾರಾವಾಹಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ. ಶ್ರೇಷ್ಠಾಳನ್ನು ತಾಂಡವ್ ಮನೆಗೆ ಕರೆದುಕೊಂಡು ಬಂದ ಬಳಿಕ ವೀಕ್ಷಕರಿಗೆ ಇಷ್ಟವಾಗುವಂತೆ ಎಪಿಸೋಡ್ಗಳು ಬರುತ್ತಿದೆ. ಇಷ್ಟು ದಿನ ಶ್ರೇಷ್ಠಾಳಿಗೆ ಬುದ್ದಿ ಕಲಿಸುವ ಕೆಲಸ ಮಾಡುತ್ತದ್ದ ಭಾಗ್ಯಾ ಹಾಗೂ ತಾಂಡವ್ ಅಮ್ಮ ಕುಸುಮಾಳಿಗೆ ಈಗ ಸಂಕಷ್ಟ ಎದುರಾಗಿದೆ. ತಾಂಡವ್ ಹಾಗೂ ಶ್ರೇಷ್ಠಾ ಮನೆಮಂದಿ ವಿರುದ್ಧ ತಿರುಗಿ ನಿಂತಿದ್ದಾರೆ. ಮಗನನ್ನು ಸರಿಮಾಡಲು ಹೊರಟ ಕುಸುಮಾಗೆ ಆಘಾತ ಉಂಟಾಗಿದೆ.
ನಾನು ಇಲ್ಲಿಗೆ ಸೋಲಲು ಬಂದಿಲ್ಲ. ಗೆಲ್ಲಲು ಬಂದಿರುವುದು, ಗೆದ್ದು ತೋರಿಸುತ್ತೇನೆ ಎಂದು ಎಲ್ಲರ ಮುಂದೆ ಮತ್ತೆ ಸವಾಲು ಹಾಕಿದ ಶ್ರೇಷ್ಠಾ ನಾನು ಭಾಗ್ಯಾಳನ್ನು ಅನುಸರಿಸಿದರೆ ಆಗುವುದಿಲ್ಲ, ಇನ್ಮುಂದೆ ಶ್ರೇಷ್ಠಾ ಆಗಿಯೇ ಎಲ್ಲರಿಗೂ ಬುದ್ಧಿ ಕಲಿಸುತ್ತೇನೆ ಎಂಬ ನಿರ್ಧಾರವನ್ನು ಗಟ್ಟಿಯಾಗಿ ತೆಗೆದುಕೊಂಡಿದ್ದಾಳೆ.
ಸದ್ಯ ಆಫೀಸಿಗೆ ಹೋಗುತ್ತಿರುವ ಶ್ರೇಷ್ಠಾ, ಮನೆ ಕೆಲಸ ಮಾಡಲು ಕೆಲಸದವಳನ್ನು ಗೊತ್ತು ಮಾಡಿರುವುದು ಗೊತ್ತೇ ಇದೆ. ಆದರೆ, ಆಕೆಯ ವರ್ತನೆಗೆ ಮನೆಮಂದಿ ಸುಸ್ತಾಗಿದ್ದಾರೆ. ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಕುಸುಮಾ ಬಾಯಿಗೆ ಬಂದಂತೆ ಮಾತನಾಡುವ ಕೆಲಸದವಳಿಗೆ ಕಪಾಳಮೋಕ್ಷ ಮಾಡುತ್ತಾಳೆ. ಅದೇ ಸಿಟ್ಟಿಗೆ ಕೆಲಸದವಳು ಕುಸುಮಾಳನ್ನು ತಳ್ಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಬಂದು ಬೀಳುತ್ತಿದ್ದ ಅತ್ತೆಯನ್ನು ಹಿಡಿದುಕೊಳ್ಳುತ್ತಾಳೆ. ನನಗೆ ಆರ್ಡರ್ ಮಾಡುವ ಹಕ್ಕು ಇರೋದು ಈ ಮನೆ ಸೊಸೆ ಶ್ರೇಷ್ಠಾಗೆ ಮಾತ್ರ ಎಂದು ಕೆಲಸದವಳು ಹೇಳುತ್ತಾಳೆ.
ಈ ಎಲ್ಲ ವಿಚಾರ ತಿಳಿದು ಶ್ರೇಷ್ಠಾ ಹಾಗೂ ತಾಂಡವ್ ಮನೆಗೆ ಬರುತ್ತಾರೆ. ಇಲ್ಲಿ ದೊಡ್ಡ ಹೈ-ಡ್ರಾಮವೇ ನಡೆಯುತ್ತದೆ. ಮನೆಯ ಅವಾಂತರ ಕಂಡು ಶ್ರೇಷ್ಠಾ ಹಾಗೂ ತಾಂಡವ್ ದೊಡ್ಡ ನಿರ್ಧಾರಕ್ಕೆ ಬರುತ್ತಾರೆ. ಇಬ್ಬರೂ ಲಗೇಜ್ ಬ್ಯಾಗ್ ಪ್ಯಾಕ್ ಮಾಡಿಕೊಂಡು ಮನೆಬಿಟ್ಟು ಹೋಗಲು ಮುಂದಾಗುತ್ತಾರೆ. ನಾನು ಶ್ರೇಷ್ಠಾ ಈ ಮನೆ ಬಿಟ್ಟು ಹೋಗ್ತಾ ಇದ್ದೇವೆ ಎಂದು ತಾಂಡವ್ ಕುಸುಮಾ ಜೊತೆ ಹೇಳಿದ್ದಾನೆ.
ನಿಮ್ಗಳ ಕಾಟ ತಡೆಯೋಕೆ ಆಗಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ. ಅಮ್ಮ-ಮಗನ ನಡುವೆ ಜಗಳ ನಡೆದು ಕೊನೆಯಲ್ಲಿ ತಾಂಡವ್, ಈ ಮನೆಯಲ್ಲಿ ನಾನು ಇರಬೇಕಾ ಅಥವಾ ಭಾಗ್ಯಾ ಇರಬೇಕಾ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರ ಕೊಡಲಾಗದೆ ಕುಸುಮಾ ತಡವಡಿಸುತ್ತಾಳೆ. ಆಗ ತಾಂಡವ್ ಅಪ್ಪ ಬಂದು, ಏನೇ ಆದ್ರು ನಾವು ಭಾಗ್ಯಾನ ಬಿಟ್ಟುಕೊಡೋ ಮಾತೇ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ.
ಇದನ್ನು ಕೇಳಿ ಮತ್ತಷ್ಟು ಸಿಟ್ಟುಮಾಡಿಕೊಂಡ ತಾಂಡವ್, ಇನ್ಮುಂದೆ ಈ ಮನೆ, ಮನೆಯವರು ಯಾರೂ ನನ್ಗೆ ಬೇಡ. ಇವತ್ತಿಂದ ನನ್ಗೂ- ಈ ಮನೆಗೂ ಯಾವುದೇ ಸಂಬಂಧವಿಲ್ಲ.. ನಡಿ ಎಂದು ಶ್ರೇಷ್ಠಾ ಕೈಹಿಡಿದು ಮನೆಯ ಹೊಸ್ತಿಲು ದಾಟಿದ್ದಾರೆ. ಈ ಮೂಲಕ ಮಗನನ್ನು ಸರಿಮಾಡಬೇಕು.. ಶ್ರೇಷ್ಠಾಗೆ ಬುದ್ದಿ ಕಲಿಸಬೇಕು ಎಂದು ಭಾಗ್ಯಾ-ಕುಸುಮಾ ಮಾಡಿದ್ದ ಪ್ಲ್ಯಾನ್ ಎಲ್ಲ ನೀರಲ್ಲಿ ಹೋಮ ಮಾಡಿದಂತಾಗಿದೆ. ಸದ್ಯ ಭಾಗ್ಯಾ-ಕುಸುಮಾ ಮುಂದಿನ ನಡೆ ಏನು?, ತಾಂಡವ್-ಶ್ರೇಷ್ಠಾ ಎಲ್ಲಿಗೆ ಹೋಗುತ್ತಾರೆ? ಎಂಬುದು ಕುತೂಹಲ ಕೆರಳಿಸಿದೆ.