ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tamil Nadu cop: ಅತ್ಯಾಚಾರ ಸಂತ್ರಸ್ತೆ ಜೊತೆ ಅಸಭ್ಯವಾಗಿ ವರ್ತಿಸಿದ್ದ ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌; ಡಿಐಜಿಯಿಂದ ಖಡಕ್‌ ಎಚ್ಚರಿಕೆ

ಅತ್ಯಾಚಾರ ದೂರನ್ನು ನೀಡಲು ಹೋದ ಮಹಿಳೆಯ ಬಳಿ ಅಸಭ್ಯವಾಗಿ ಮಾತನಾಡಿದ್ದ ತಿರುಚ್ಚಿಯ ಮಹಿಳಾ ಪೊಲೀಸ್ ಠಾಣೆ (AWPS)ಯ ತಮಿಳುನಾಡಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ವರುಣ್ ಕುಮಾರ್ ಅವರು ಅತ್ಯಾಚಾರ ಸಂತ್ರಸ್ತೆಯ ಜೊತೆ ಅಸಭ್ಯವಾಗಿ ಮಾತನಾಡಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ.

ಮಹಿಳಾ ಠಾಣೆ ಇನ್ಸ್‌ಪೆಕ್ಟರ್‌ಗೆ ಕ್ಲಾಸ್‌ ತೆಗೆದುಕೊಂಡ ಡಿಐಜಿ

Profile Vishakha Bhat Apr 10, 2025 5:06 PM

ಚೆನ್ನೈ: ಅತ್ಯಾಚಾರ ದೂರನ್ನು ನೀಡಲು ಹೋದ ಮಹಿಳೆಯ ಬಳಿ ಅಸಭ್ಯವಾಗಿ ಮಾತನಾಡಿದ್ದ ತಿರುಚ್ಚಿಯ ಮಹಿಳಾ ಪೊಲೀಸ್ ಠಾಣೆ (AWPS)ಯ ತಮಿಳುನಾಡಿನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ವರುಣ್ ಕುಮಾರ್ ಅವರು ಜಿಲ್ಲಾ ಎಸ್‌ಪಿ ಕಚೇರಿ ನಿಯಂತ್ರಣ ಕೊಠಡಿ ಮತ್ತು ಎಡಬ್ಲ್ಯೂಪಿಎಸ್‌ನ ಇನ್ಸ್‌ಪೆಕ್ಟರ್ ಅವರನ್ನು ಓಪನ್ ಮೈಕ್ ಮೂಲಕ ಸಂಪರ್ಕಿಸಿ ಮಹಿಳಾ ಠಾಣೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಪೊಲೀಸ್ ಉಪ ಮಹಾನಿರೀಕ್ಷಕ (ಡಿಐಜಿ) ವರುಣ್ ಕುಮಾರ್ ಅವರು ಅತ್ಯಾಚಾರ ಸಂತ್ರಸ್ತೆಯ ಜೊತೆ ಅಸಭ್ಯವಾಗಿ ಮಾತನಾಡಿದ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ್ದಾರೆ. ಮಹಿಳಾ ಪೊಲೀಸ್ ಠಾಣೆಯನ್ನು ರಚಿಸಲು ಕಾರಣವೇನು? ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ ಎಂದರೆ ಮತ್ತೇನು ನೀವು ಕೆಲಸ ಮಾಡುತ್ತೀರಿ ಎಂದು ಠಾಣೆಯ ಸಬ್-ಇನ್ಸ್‌ಪೆಕ್ಟರ್ ಸುಮತಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ನಂತರ ಡಿಐಜಿ ಅವರು ಸಂತ್ರಸ್ತೆಯ ಆಡಿಯೋ ಕ್ಲಿಪ್‌ ಅನ್ನು ತೋರಿಸಿದ್ದಾರೆ. ಅದರಲ್ಲಿ ಸಂತ್ರಸ್ತೆ ಠಾಣೆಗೆ ಬರಬಹುದೇ ಎಂದು ನಯವಾಗಿ ಕೇಳುತ್ತಾರೆ, ಆದರೆ ಅಧಿಕಾರಿ ಅವಳನ್ನು ಅಸಭ್ಯವಾಗಿ ಗದರಿಸುತ್ತಾಳೆ.

ಹೇಗೆ ಮಾತನಾಡಿದ್ದಾಳೆ ನೋಡಿ" ಎಂದು ಡಿಐಜಿ ವರುಣ್ ಹೇಳಿದರು, ಆ ಅಧಿಕಾರಿಯನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಹೇಳಿದ್ದಾರೆ. ಪೊಲೀಸ್‌ ಅಧಿಕಾರಿ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಆಗ ಮತ್ತಷ್ಟು ಸಿಟ್ಟಿಗೆದ್ದ ಡಿಐಜಿ ನಿಮಗೆ ನಾಚಿಕೆಯಾಗುವುದಿಲ್ಲವೇ? ಇದು ತಪ್ಪು ಎಂದು ಒಪ್ಪಿಕೊಳ್ಳಲು ಸಾಧ್ಯವಾಗದಿದ್ದರೆ ನೀವು ಯಾವ ರೀತಿಯ ಇನ್ಸ್‌ಪೆಕ್ಟರ್?" ಎಂದು ಕೇಳಿದರು. ಇನ್ಸ್‌ಪೆಕ್ಟರ್ ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ. ಆದರೆ ಡಿಐಜಿ ವರುಣ್‌ ಅಧಿಕಾರಿಗೆ ಖಡಕ್‌ ಎಚ್ಚರಿಕೆ ನೀಡಿ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ. ಡಿಜಿಐ ಅವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ: Viral Video: ಸಂಗೀತಗಾರನನ್ನು ನಡು ರಸ್ತೆಯಲ್ಲಿ ತಡೆದ ಟ್ರಾಫಿಕ್ ಪೊಲೀಸ್‌; ಮುಂದೆ ಆಗಿದ್ದೇ ಬೇರೆ

ಪ್ರತ್ಯೇಕ ಘಟನೆಯಲ್ಲಿ ಇತ್ತೀಚೆಗೆ ಹಾಸನದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಲೋಕ್ ಕುಮಾರ್ ಅವರು ಹಾಸನ ಶಾಂತಿಗ್ರಾಮದಲ್ಲಿರುವ ಪೊಲೀಸ್ ತರಬೇತಿ ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನೂತನ ಶಿಬಿರಾರ್ಥಿಗಳು ಮತ್ತು ತರಬೇತಿ ಅಧಿಕಾರಿಗಳಿಗೆ ಅವರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರು ಕಾರ್ಯಕ್ರಮದ ಮಧ್ಯೆಯೇ ಪೊಲೀಸ್ ಮಾರ್ಚ್ ಡ್ರಿಲ್ ಪರೀಕ್ಷಿಸಿದರು. ಆದರೆ, ಶಿಬಿರಾರ್ಥಿಗಳ ಡ್ರಿಲ್ ಪ್ರದರ್ಶನ ಸರಿಯಾಗಿಲ್ಲದಿರುವುದನ್ನು ಗಮನಿಸಿದ ಅವರು, 'ಮೂರು ತಿಂಗಳ ತರಬೇತಿ ಆಗಿದ್ದರೂ ಒಂದು ಅಟೆನ್ಷನ್ ಕೂಡ ಸರಿಯಾಗಿ ಮಾಡಲು ಬರುತ್ತಿಲ್ಲ. ನಿಮ್ಮ ಮೇಲೆ ಕ್ರಮ ಆಗಬೇಕು' ಎಂದು ಹರಿಹಾಯ್ದರು. ಈ ವೇಳೆ ತಾವೇ ಖುದ್ದು ಡ್ರಿಲ್ ಕಾಷನ್ ಕೊಡಿಸಿ, ಡೆಮೋ ಮಾಡಿ ತೋರಿಸಿದರು. ಇದೇ ವೇಳೆ 'ಸರಿಯಾಗಿ ತರಬೇತಿ ಪಡೆಯದಿದ್ದರೆ ಇವರಿಗೆ ಔಟ್ ಪಾಸ್ ಕೊಡಬೇಡಿ' ಎಂದು ಸಿಬ್ಬಂದಿಗೆ ಆದೇಶ ನೀಡಿದ್ದಾರೆ.