Viral Video: ಸಂಗೀತಗಾರನನ್ನು ನಡು ರಸ್ತೆಯಲ್ಲಿ ತಡೆದ ಟ್ರಾಫಿಕ್ ಪೊಲೀಸ್; ಮುಂದೆ ಆಗಿದ್ದೇ ಬೇರೆ
ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ಕರ್ನಾಟಕ ಸಂಗೀತಗಾರನನ್ನು ಟ್ರಾಫಿಕ್ ಇನ್ಸ್‌ಪೆಕ್ಟರ್ ರಸ್ತೆಯಲ್ಲಿ ತಡೆದಿದ್ದಾನೆ. ಆದರೆ ಅವನಿಗೆ ದಂಡ ವಿಧಿಸುವ ಬದಲು ಇನ್ಸ್‌ಪೆಕ್ಟರ್ ಅವನ ಜತೆ ಸೇರಿ ರಸ್ತೆ ಬದಿಯಲ್ಲಿ ಸಂಗೀತ ಕಛೇರಿ ನಡೆಸಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವಿಚಿತ್ರ ಘಟನೆಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದೊಂದು ಹೃದಯಸ್ಪರ್ಶಿ ವಿಡಿಯೊವೊಂದು ಸಖತ್ ಸದ್ದು ಮಾಡುತ್ತಿದೆ. ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದ ಸಂಗೀತಗಾರನನ್ನು ಟ್ರಾಫಿಕ್ ಇನ್ಸ್‌ಪೆಕ್ಟರ್ ನಡು ರಸ್ತೆಯಲ್ಲಿ ತಡೆದಿದ್ದಾನೆ. ಆದರೆ ಅವನಿಗೆ ದಂಡ ವಿಧಿಸುವ ಬದಲು ಟ್ರಾಫಿಕ್ ಇನ್ಸ್‌ಪೆಕ್ಟರ್ ಮಾಡಿದ ಕೆಲಸ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನ ಸೆಳೆದು ವೈರಲ್ (Viral Video) ಆಗಿದೆ. ಇನ್ಸ್‌ಪೆಕ್ಟರ್ ಅವನಿಗೆ ದಂಡ ವಿಧಿಸುವ ಬದಲು, ಸಂಗೀತಗಾರನೊಂದಿಗೆ ರಸ್ತೆಬದಿಯಲ್ಲಿ ಸಂಗೀತ ಕಛೇರಿ ನಡೆಸಿದ್ದಾನೆ.
ವೈರಲ್ ವಿಡಿಯೊದಲ್ಲಿ ಟ್ರಾಫಿಕ್ ಇನ್ಸ್‌ಪೆಕ್ಟರ್ ಹೆಲ್ಮೆಟ್ ಇಲ್ಲದೆ ಸವಾರಿ ಮಾಡುತ್ತಿದ್ದವನನ್ನು ತಡೆದು ನಿಲ್ಲಿಸಿದ್ದಾನೆ. ನಂತರ ಸಂಗೀತಗಾರನು ಭಾವಪೂರ್ಣವಾಗಿ ಹಾಡು ಹಾಡಿದ್ರೆ, ಇನ್ಸ್‌ಪೆಕ್ಟರ್ ಅವನ ಮೃದಂಗ ನುಡಿಸಿದ್ದಾನೆ.ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
A Carnatic Musician was Caught by a Traffic Inspector for not wearing Helmet in Kerala. As Inspector himself was a Mrindangam Artist, he made the moment for us.. Cheers 👏😀🩷❤️ pic.twitter.com/mKh0nPeH3M
— Ramu GSV (@gsv_ramu) April 8, 2025
ಈ ವಿಡಿಯೊ ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೊಗೆ ಎರಡು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು ಲೈಕ್ಸ್ ಬಂದಿದೆ. ಹೆಚ್ಚಿನ ನೆಟ್ಟಿಗರು ಟ್ರಾಫಿಕ್ ಇನ್ಸ್‌ಪೆಕ್ಟರ್ ಮತ್ತು ಸಂಗೀತಗಾರನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇತರರು ಇನ್ಸ್‌ಪೆಕ್ಟರ್ ಚಲನ್ ನೀಡಿದ್ದಾರೆಯೇ ಅಥವಾ ಇಲ್ಲವೇ ಎಂದು ಕೇಳಿದ್ದಾರೆ.
"ವ್ಹಾವ್. ಸಂಗೀತವು ಜನರನ್ನು ಯಾವಾಗಲೂ ಒಟ್ಟುಗೂಡಿಸುತ್ತದೆ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಈ ಪೋಸ್ಟ್ ನಿಜವಾಗಿಯೂ ಈ ದಿನವನ್ನು ಉತ್ತಮವಾಗಿ ಮಾಡಿತು" ಎಂದು ಇನ್ನೊಬ್ಬರು ಹೇಳಿದ್ದಾರೆ. ಒಬ್ಬರು, "ಪೊಲೀಸರು ದಂಡವನ್ನು ಲಲಿತಕಲೆಗಳಾಗಿ ಪರಿವರ್ತಿಸಿದ್ದಾರೆ" ಎಂದಿದ್ದಾರೆ. "ಪ್ರದರ್ಶನದ ನಂತರ ಇನ್ಸ್‌ಪೆಕ್ಟರ್ ಸಾಬ್ ಚಲನ್ ನೀಡಿರಬಹುದು" ಎಂದು ಇನ್ನೊಬ್ಬರು ಬರೆದಿದ್ದಾರೆ.
ಮತ್ತೊಬ್ಬರು, “ಈ ಘಟನೆ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ" ಎಂದಿದ್ದಾರೆ. “ಮನುಷ್ಯನಿಗೆ ಪ್ರದರ್ಶನ ನೀಡಲು ಸರಿಯಾದ ವೇದಿಕೆ ಬೇಕು. ಬಹುಶಃ ಕೆಲವು ದೊಡ್ಡ ದೇವಾಲಯಗಳು ಅಂತಹ ಭಕ್ತಿಗೀತೆಗಳನ್ನು ಹಾಡಲು ಅವರಿಗೆ ಅವಕಾಶ ನೀಡಬಹುದು" ಎಂದು ಒಬ್ಬರು ಸಲಹೆ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಇದು ಅಂತಿಂಥಾ ಐಸ್‌ಕ್ರೀಂ ಅಲ್ಲ... ಚಿನ್ನ ಲೇಪಿತ 'ಅಂಬಾನಿ ಐಸ್ ಕ್ರೀಂ! ವಿಡಿಯೊ ಇದೆ
ಈ ಹಿಂದೆ ತೆಲಂಗಾಣದ ರಾಚಕೊಂಡದಲ್ಲಿ ರಸ್ತೆಯಲ್ಲಿ ಮದ್ಯಪಾನ ಮತ್ತು ಧೂಮಪಾನ ಮಾಡಿ ಜೋರಾಗಿ ಸಂಗೀತ ನುಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮತ್ತು ಬೆಳಿಗ್ಗೆ ವಾಕಿಂಗ್ ಮಾಡುವವರ ಗುಂಪಿನ ನಡುವೆ ತೀವ್ರ ಜಗಳ ಸಂಭವಿಸಿತ್ತು. ಇಡೀ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹೆದ್ದಾರಿಯಲ್ಲಿ ಧೂಮಪಾನ ಮತ್ತು ಬಿಯರ್ ಕುಡಿದಿದ್ದಕ್ಕಾಗಿ ಪುರುಷರು ದಂಪತಿಯನ್ನು ಗದರಿಸಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಹಾಗೆ ಮಾಡುವುದು ಸೂಕ್ತವಲ್ಲ ಎಂದು ಹೇಳಿದ್ದಕ್ಕೆ ಕೋಪಗೊಂಡ ಸಂಗೀತ ಕಛೇರಿ ನಡೆಸಿದವರು ಜಗಳಕ್ಕೆ ಇಳಿದಿದ್ದರು.