ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cochin Airport: ಬ್ರೆಜಿಲಿಯನ್‌ ದಂಪತಿ ಹೊಟ್ಟೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಕೊಕೇನ್ ಮಾತ್ರೆ

ಕೋಟ್ಯಂತರ ರೂಪಾಯಿ ಮೌಲ್ಯದ ಕೊಕೇನ್ ಮಾತ್ರೆಗಳನ್ನು (cocaine polls) ನುಂಗಿ ಕಳ್ಳ ಸಾಗಾಣೆ ಮಾಡಲು ಯತ್ನಿಸಿದ ಬ್ರೆಜಿಲಿಯನ್ ದಂಪತಿಯನ್ನು (brazilian couple) ಕೊಚ್ಚಿ ವಿಮಾನ ನಿಲ್ದಾಣದಲ್ಲಿ (Cochin airport) ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಈ ದಂಪತಿಯ ಹೊಟ್ಟೆಯಲ್ಲಿ ಬರೋಬ್ಬರಿ 163 ಕೊಕೇನ್ ಮಾತ್ರೆಗಳು ಸಿಕ್ಕಿದ್ದು, ಇದರ ಒಟ್ಟು ಮೌಲ್ಯ 16 ಕೋಟಿ ರೂ. ಆಗಿದೆ.

ಬ್ರೆಜಿಲಿಯನ್‌ ದಂಪತಿ ಹೊಟ್ಟೆಯಲ್ಲಿ ಕೊಕೇನ್ ಮಾತ್ರೆ

ಕೊಚ್ಚಿ: ಕೋಟ್ಯಂತರ ರೂಪಾಯಿ ಮೌಲ್ಯದ ಕೊಕೇನ್ ಮಾತ್ರೆಗಳನ್ನು (cocaine polls) ನುಂಗಿ ಕಳ್ಳ ಸಾಗಾಣೆ ಮಾಡಲು ಯತ್ನಿಸಿದ ಬ್ರೆಜಿಲಿಯನ್ ದಂಪತಿಯನ್ನು (brazilian couple) ಕೊಚ್ಚಿ ವಿಮಾನ ನಿಲ್ದಾಣದಲ್ಲಿ (Cochin airport) ಕಂದಾಯ ಗುಪ್ತಚರ ನಿರ್ದೇಶನಾಲಯ (DRI)ದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಈ ದಂಪತಿಯ ಹೊಟ್ಟೆಯಲ್ಲಿ ಬರೋಬ್ಬರಿ 163 ಕೊಕೇನ್ ಮಾತ್ರೆಗಳು ಸಿಕ್ಕಿದ್ದು, ಇದರ ಒಟ್ಟು ಮೌಲ್ಯ 16 ಕೋಟಿ ರೂ. ಆಗಿದೆ. ಲಗೇಜ್ ತಪಾಸಣೆ ವೇಳೆ ಏನು ಸಿಗದ ಕಾರಣ ದಂಪತಿಯ ದೇಹವನ್ನು ಸ್ಕ್ಯಾನ್ ಮಾಡಲಾಗಿದ್ದು, ಇದರಿಂದ ಅವರು ಮಾದಕ ವಸ್ತುಗಳನ್ನು ನುಂಗಿದ್ದಾರೆ ಎಂಬುದು ಬಹಿರಂಗವಾಯಿತು.

ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಪ್ರಮುಖ ಮಾದಕ ವಸ್ತು ಪತ್ತೆ ಪ್ರಕರಣದಲ್ಲಿ ಬ್ರೆಜಿಲಿಯನ್ ದಂಪತಿ ಲ್ಯೂಕಸ್ ಮತ್ತು ಬ್ರೂನಾ ಎಂಬವರನ್ನು ಡಿಆರ್ ಐ ಅಧಿಕಾರಿಗಳು ಬಂಧಿಸಿದ್ದಾರೆ. ಈ ದಂಪತಿ 163 ಕೊಕೇನ್ ಮಾತ್ರೆಗಳನ್ನು ನುಂಗಿ ಕಳ್ಳಸಾಗಣೆ ಮಾಡಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ. ಅವರ ಹೊಟ್ಟೆಯಿಂದ ಒಟ್ಟು 1.67 ಕೆಜಿ ಮಾದಕ ವಸ್ತು ಪತ್ತೆಯಾಗಿದ್ದು, ಇದರ ಮೌಲ್ಯ 16 ಕೋಟಿ ರೂ.ಗಳು.

ಖಚಿತ ಮಾಹಿತಿ ಮೇರೆಗೆ ಬ್ರೆಜಿಲಿಯನ್ ದಂಪತಿ ಲ್ಯೂಕಸ್ ಮತ್ತು ಬ್ರೂನಾ ಅವರ ಲಗೇಜ್ ಗಳನ್ನು ತೀವ್ರವಾಗಿ ಪರಿಶೀಲನೆ ನಡೆಸಲಾಯಿತು. ಈ ವೇಳೆ ಯಾವುದೇ ಮಾದಕ ದ್ರವ್ಯ ಸಿಗದೇ ಇದ್ದುದರಿಂದ ಅವರಿಬ್ಬರ ದೇಹದ ಸ್ಕ್ಯಾನ್‌ ಮಾಡಲಾಯಿತು. ಇದರಿಂದ ದಂಪತಿ ಮಾದಕವಸ್ತು ಕ್ಯಾಪ್ಸುಲ್‌ಗಳನ್ನು ನುಂಗಿರುವುದು ಬಹಿತಂಗವಾಗಿದೆ ಕೂಡಲೇ ಅವರಿಬ್ಬರನ್ನು ಬಂಧಿಸಿದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಅಂಗಮಾಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಅವರ ಕಸ್ಟಡಿಗೆ ಅನುಮತಿ ಪಡೆದರು.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ ಕೇಸ್‌: ವರದಿ ಬಹಿರಂಗಪಡಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಬಳಿಕ ದಂಪತಿಯನ್ನು ಅಂಗಮಾಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರ ಹೊಟ್ಟೆಯಲ್ಲಿದ್ದ ಹಲವಾರು ಕೊಕೇನ್ ಕ್ಯಾಪ್ಸುಲ್‌ಗಳು ಹೊರ ತೆಗೆಯಲಾಗಿದೆ. ಇದಕ್ಕಾಗಿ ವೈದ್ಯರು ಸುಮಾರು ಮೂರು ದಿನಗಳನ್ನು ತೆಗೆದುಕೊಂಡರು. ಒಂದು ವೇಳೆ ಯಾವುದೇ ಕ್ಯಾಪ್ಸುಲ್ ಹೊಟ್ಟೆಯಲ್ಲಿ ಮುರಿದಿದ್ದರೆ ಅವರ ಸಾವು ಖಚಿತವಾಗಿರುತ್ತಿತ್ತು ಎಂದು ವೈದ್ಯರು ಹೇಳಿದ್ದಾರೆ.

ಕೊಚ್ಚಿಯಿಂದ ತಿರುವನಂತಪುರಂಗೆ ಪ್ರಯಾಣಿಸಲು ಯೋಜನೆ ಹಾಕಿಕೊಂಡಿದ್ದ ಲ್ಯೂಕಸ್ ಮತ್ತು ಬ್ರೂನಾ ತಿರುವನಂತಪುರಂನ ಹೊಟೇಲ್ ನಲ್ಲಿ ಕೊಠಡಿ ಕಾಯ್ದಿರಿಸಿದ್ದರು. ಸದ್ಯಕ್ಕೆ ಪೊಲೀಸರ ವಶದಲ್ಲಿರುವ ಅವರ ಮೊಬೈಲ್ ಸೇರಿದಂತೆ ಕೆಲವು ವಸ್ತುಗಳನ್ನು ತನಿಖೆಗಾಗಿ ವಶಕ್ಕೆ ಪಡೆದಿದ್ದಾರೆ.