ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Meerut Case: ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದ ಮುಸ್ಕಾನ್‌ ಈಗ ಗರ್ಭಿಣಿ; ಮಗು ಸೌರಭ್‌ನದ್ದಾದರೆ ಸಾಕುವುದಾಗಿ ಸಹೋದರನ ಹೇಳಿಕೆ

ಉತ್ತರ ಪ್ರದೇಶದ ಮೀರತ್‌ನಲ್ಲಿ ಪ್ರಿಯಕರ ಸಾಹಿಲ್‌ ಶುಕ್ಲಾ ಜತೆ ಸೇರಿ ತನ್ನ ಪತಿ ಸೌರಭ್‌ ರಜಪೂತ್‌ನನ್ನು ಕೊಲೆ ಮಾಡಿದ ಮುಸ್ಕಾನ್‌ ರಸ್ತೋಗಿ ಸದ್ಯ ಕಂಬಿ ಎಣಿಸುತ್ತಿದ್ದಾಳೆ. ಈ ಮಧ್ಯೆ ಆಕೆ ಗರ್ಭಿಣಿ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಮೃತ ಸೌರಭ್‌ನ ಸಹೋದರ ಮಹತ್ವದ ಹೇಳಿಕೆ ನೀಡಿದ್ದು, ಈ ಮಗು ಸೌರಭ್‌ನದ್ದು ಎನ್ನುವುದು ಸಾಬೀತಾರೆ ತಾವು ಸಾಕುವುದಾಗಿ ಘೋಷಿಸಿದ್ದಾರೆ.

ಮಗು ಸೌರಭ್‌ನದ್ದಾದರೆ ಸಾಕುವುದಾಗಿ ಸಹೋದರನ ಹೇಳಿಕೆ

Profile Ramesh B Apr 8, 2025 6:59 PM

ಲಖನೌ: ಉತ್ತರ ಪ್ರದೇಶದ ಮೀರತ್‌ನಲ್ಲಿ ಪ್ರಿಯಕರ ಸಾಹಿಲ್‌ ಶುಕ್ಲಾ (Sahil Shukla) ಜತೆ ಸೇರಿ ತನ್ನ ಪತಿ ಸೌರಭ್‌ ರಜಪೂತ್‌ (Saurabh Rajput)ನನ್ನು ಕೊಲೆ ಮಾಡಿದ ಮುಸ್ಕಾನ್‌ ರಸ್ತೋಗಿ (Muskan Rastogi) ಸದ್ಯ ಕಂಬಿ ಎಣಿಸುತ್ತಿದ್ದಾಳೆ. ಈ ಮಧ್ಯೆ ಆಕೆ ಗರ್ಭಿಣಿ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಇದೀಗ ಮೃತ ಸೌರಭ್‌ನ ಸಹೋದರ ಮಹತ್ವದ ಹೇಳಿಕೆ ನೀಡಿದ್ದು, ಈ ಮಗು ಸೌರಭ್‌ನದ್ದು ಎನ್ನುವುದು ಸಾಬೀತಾರೆ ತಾವು ಸಾಕುವುದಾಗಿ ಘೋಷಿಸಿದ್ದಾರೆ (Meerut Case). ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ಅವರು ಮುಸ್ಕಾನ್‌ನನ್ನು ಸೋಮವಾರ (ಏ. 7) ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದ್ದು, ಈ ವೇಳೆ ಗರ್ಭ ಧರಸಿರುವುದು ಗೊತ್ತಾಗಿದೆ. ಅದಾದ ಒಂದು ದಿನದ ಬಳಿಕ ಸೌರಭ್‌ನ ಸಹೋದರ ಈ ಹೇಳಿಕೆ ನೀಡಿದ್ದಾರೆ.

ಸೌರಭ್‌ ಕೊಲೆ ಪ್ರಕರಣದಲ್ಲಿ ಸದ್ಯ ಮುಸ್ಕಾನ್‌ ಮತ್ತು ಸಾಹಿಲ್‌ ಮೀರತ್‌ ಜಿಲ್ಲಾ ಕಾರಾಗೃಹದ ಪ್ರತ್ಯೇಕ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಅದಾಗ್ಯೂ ಇದುವರೆಗೆ ಮುಸ್ಕಾನ್‌ ಗರ್ಭ ಧರಿಸಿರುವ ಬಗ್ಗೆ ಕುಟುಂಬಸ್ಥರು ಯಾವುದೇ ಹೇಳಿಕೆ ನೀಡಿಲ್ಲ.



ಈ ಸುದ್ದಿಯನ್ನೂ ಓದಿ: Meerut murder case: ಪತಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ಮುಸ್ಕಾನ್‌ ಈಗ ಗರ್ಭಿಣಿ! ವೈದ್ಯರು ಹೇಳಿದ್ದೇನು?

ಸೌರಭ್‌ ಸಹೋದರ ಹೇಳಿದ್ದೇನು?

ಸೌರಭ್‌ ಅವರ ಸಹೋದರ ಬಬ್ಲು ರಜಪೂತ್‌ ಮಾತನಾಡಿ, ಈ ಮಗು ಸೌರಭ್‌ನದ್ದಾಗಿದ್ದರೆ ದತ್ತು ಪಡೆದುಕೊಂದು ಸಾಕಲು ತಾವು ಸಿದ್ಧ ಎಂದು ಹೇಳಿದ್ದಾರೆ ಎಂಬುದಾಗಿ ಸುದ್ದಿಸಂಸ್ಥೆ ಪಿಟಿಐ ವರದಿ ಮಾಡಿದೆ. ಮಾ. 4ರಂದು ಮುಸ್ಕಾನ್‌ ಮತ್ತು ಸಾಹಿಲ್‌ ಇಬ್ಬರು ಸೇರಿ ಸೌರಭ್‌ನನ್ನು ಅತಿ ಕ್ರೂರವಾಗಿ ಕೊಂದು ಮೃತದೇಹವನ್ನು ಸಿಮೆಂಟ್‌ ತುಂಬಿದ ಡ್ರಮ್‌ನಲ್ಲಿ ಅಡಗಿಸಿಟ್ಟಿದ್ದರು. ಸದ್ಯ ಮುಸ್ಕಾನ್‌ ಮತ್ತು ಸಾಹಿಲ್‌ನನ್ನು ಪ್ರತ್ಯೇಕವಾಗಿಟ್ಟಿರುವ ಜೈಲಿನ ಅಧಿಕಾರಿಗಳು ಇಬ್ಬರ ಪರಸ್ಪರ ಭೇಟಿಗೆ ಅವಕಾಶ ನೀಡಿಲ್ಲ.

ಸೋಮವಾರ ಸಾಹಿಲ್‌ನ ಅಜ್ಜಿ ಜೈಲಿಗೆ ಭೇಟಿ ನೀಡಿದ್ದರು. ಆದರೆ ಇದುವರೆಗೆ ಮುಸ್ಕಾನ್‌ನ ಭೇಟಿಗೆ ಆಕೆಯ ಮನೆಯವರು ಯಾರೂ ಬಂದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಸ್ಕಾನ್ ಅವರನ್ನು ಅಲ್ಟ್ರಾಸೌಂಡ್ ಪರೀಕ್ಷೆಗೆ ಒಳಪಡಿಸಿ ಗರ್ಭಧಾರಣೆಯನ್ನು ಖಚಿತ ಪಡಿಸಲಾಗುತ್ತದೆ ಎಂದು ಹಿರಿಯ ಜೈಲು ಅಧೀಕ್ಷಕ ಡಾ.ವೀರೇಶ್ ರಾಜ್ ಶರ್ಮಾ ಹೇಳಿದ್ದಾರೆ. ಇದುವರೆಗೆ ಈ ವಿಚಾರವನ್ನು ಮುಸ್ಕಾನ್‌ ತಿಳಿಸಿಲ್ಲ. ಕೂಲಂಕುಷ ಪರೀಕ್ಷೆಯ ನಂತರ ವೈದ್ಯೆ ಈ ವಿಚಾರವನ್ನು ಮುಸ್ಕಾನ್‌ ಬಳಿ ಬಹಿರಂಗಪಡಿಸುವುದಾಗಿ ಶರ್ಮಾ ಹೇಳಿದ್ದಾರೆ.

ಮಹಿಳಾ ಕೈದಿಗಳಿಗೆ ನಿಯಮಿತವಾಗಿ ನಡೆಸುವ ಆರೋಗ್ಯ ತಪಾಸಣೆ ಮತ್ತು ಗರ್ಭಧಾರಣೆ ಪರೀಕ್ಷೆಯ ವೇಳೆ ಮುಸ್ಕಾನ್‌ ಗರ್ಭ ಧರಿಸಿರುವುದು ಬೆಳಕಿಗೆ ಬಂದಿದೆ. ಈ ತಪಾಸಣೆಯು ಜೈಲಿನ ಸಾಮಾನ್ಯ ಪ್ರಕ್ರಿಯೆಯ ಒಂದು ಭಾಗವಾಗಿದೆ ಎಂದು ಶರ್ಮಾ ಉಲ್ಲೇಖಿಸಿದ್ದಾರೆ. ಜೈಲಿನ ಮೂಲಗಳ ಪ್ರಕಾರ, ಮುಸ್ಕಾನ್ ಜೈಲಿನಲ್ಲಿ ಹೊಲಿಗೆ ಕೆಲಸ ಮಾಡುತ್ತಿದ್ದರೆ, ಸಾಹಿಲ್ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾನೆ. ಇಬ್ಬರನ್ನು ಮಾದಕ ವ್ಯಸನ ಮುಕ್ತ ಕೇಂದ್ರಗಳಲ್ಲಿ ಇರಿಸಲಾಗಿದೆ.

ಅಚ್ಚರಿ ಎಂದರೆ ಮುಸ್ಕಾನ್ ಮತ್ತು ಸೌರಭ್ 2016ರಲ್ಲಿ ಪ್ರೇಮ ವಿವಾಹವಾಗಿದ್ದರು ಮತ್ತು ಕಳೆದ 3 ವರ್ಷಗಳಿಂದ ತಮ್ಮ 5 ವರ್ಷದ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸೌರಭ್ ಲಂಡನ್‌ನಲ್ಲಿದ್ದಾಗ ಮುಸ್ಕಾನ್ ಮತ್ತು ಸಾಹಿಲ್ ನಡುವೆ ಪ್ರೇಮ ಬೆಳೆದಿತ್ತು.