ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುತ್ತಿದ್ದ ಕಾರಿನ ಡಿಕ್ಕಿಯಲ್ಲಿ ನೇತಾಡುತ್ತಿದ್ದ ಕೈ; ಏನಿದು ಈ ವಿಡಿಯೊದ ರಹಸ್ಯ?

ಮುಂಬೈಯ ವಾಶಿ, ಸನ್ಪದಾ ರೈಲು ನಿಲ್ದಾಣದ ನಡುವೆ ತೆರಳುತ್ತಿದ್ದ ಕಾರಿನ ಡಿಕ್ಕಿಯಿಂದ ವ್ಯಕ್ತಿಯೊಬ್ಬನ ಕೈ ನೇತಾಡಿದೆ. ಈ ವಿಡಿಯೊ ನೋಡಿ ಸ್ಥಳೀಯರು ಆಘಾತಕ್ಕೊಳಗಾಗಿದ್ದಾರೆ. ಬೈಕ್ ಸವಾರನೊಬ್ಬ ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದ್ದಿ, ವಿಡಿಯೊ ವೈರಲ್‌ ಆಗಿದೆ. ಸದು ಪೊಲೀಸರು ಈ ಪ್ರಕರಣವನ್ನು ಬೇಧಿಸಿದ್ದಾರೆ.

ಚಲಿಸುತ್ತಿದ್ದ ಕಾರಿನಲ್ಲಿ ಡಿಕ್ಕಿಯಿಂದ ಹೊರಬಂತು ಕೈ; ಇಲ್ಲಿದೆ ವಿಡಿಯೊ

Hand Hanging From Car

Profile Pushpa Kumari Apr 16, 2025 8:23 PM

ಮುಂಬೈ: ಕಾರಿನ ಡಿಕ್ಕಿಯಲ್ಲಿ ಕೈಯೊಂದು ನೇತಾಡುತ್ತಿದ್ದ ಆಘಾತಕಾರಿ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ (Viral Video). ಮುಂಬೈಯ ವಾಶಿ, ಸನ್ಪದಾ ರೈಲು ನಿಲ್ದಾಣದ ನಡುವೆ ತೆರಳುತ್ತಿದ್ದ ಕಾರಿನಲ್ಲಿ ಈ ವಿಚಿತ್ರ ಘಟನೆ ‌ನಡೆದಿದ್ದು ವಿಡಿಯೊ ನೋಡಿದ ನೆಟ್ಟಿಗರು ಶಾಕ್ ಅಗಿದ್ದಾರೆ. ಇನ್ನೋವಾ ಕಾರಿನ ಡಿಕ್ಕಿಯಿಂದ ವ್ಯಕ್ತಿಯೊಬ್ಬನ ಕೈ ಹೊರಚಾಚಿಕೊಂಡಿರುವ ದೃಶ್ಯವನ್ನು ಹಿಂದೆ ಸಾಗುತ್ತಿದ್ದ ಬೈಕ್ ಸವಾರರೊಬ್ಬರು ಚಿತ್ರೀಕರಿಸಿ ಸೋಶಿಯಲ್‌ ಮೀಡಿಯಾದಲ್ಲಿ ಹರಿಯ ಬಿಟ್ಟಿದ್ದಾರೆ. ಸದ್ಯ ಈ ದೃಶ್ಯ ಭಯ ಉಂಟುಮಾಡಿದೆ. ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ತನಿಖೆ ನಡೆಸಿ ವಿಚಾರಣೆ ಮಾಡಿದ್ದಾರೆ.

ಮುಂಬೈ ನಿವಾಸಿಗಳಾದ ಮೂವರು ಯುವಕರು ಮದುವೆಯಲ್ಲಿ ಪಾಲ್ಗೊಳ್ಳಲು ನವಿ ಮುಂಬೈಗೆ ಬಂದಿದ್ದರು. ಈ ಸಂದರ್ಭ ತಮ್ಮ ಲ್ಯಾಪ್‌ಟಾಪ್ ಬ್ರ್ಯಾಂಡ್‌ನ ಪ್ರಚಾರಕ್ಕೆ ಈ ರೀತಿ ರೀಲ್ಸ್ ಮಾಡುತ್ತಿದ್ದರು ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ. ವೈರಲ್ ಆಗಿರುವ ವಿಡಿಯೊದಲ್ಲಿ ನವಿ ಮುಂಬೈಯ ಸನ್ಪಾಡಾ ಮತ್ತು ವಾಶಿ ರೈಲು ನಿಲ್ದಾಣಗಳ ನಡುವಿನ ಸರ್ವಿಸ್ ರಸ್ತೆಯಲ್ಲಿ ಚಲಿಸುತ್ತಿರುವ ಇನ್ನೋವಾ ಕಾರಿನಿಂದ ವ್ಯಕ್ತಿಯ ಕೈ ನೇತಾಡುತ್ತಿರುವುದು ಕಂಡುಬಂದಿದೆ‌‌. ನಂತರ ಒಬ್ಬ ಬೈಕ್ ಸವಾರನು ಕಾರನ್ನು ನಿಲ್ಲಿಸಿ ಡಿಕ್ಕಿಯನ್ನು ತೆರೆಯಲು ಕೇಳುತ್ತಾನೆ. ಡಿಕ್ಕಿ ತೆರೆದ ತಕ್ಷಣ, ಒಳಗೆ ಕುಳಿತಿದ್ದ ಯುವಕ, ನಿಮಗೆ ಭಯವಾಗಿದೆಯೇ? ಆದರೆ ನಾನು ಸತ್ತಿಲ್ಲ, ಬದುಕಿದ್ದೇನೆ. ಈಗ ನಮ್ಮ ಲ್ಯಾಪ್‌ಟಾಪ್‌ಗಳಲ್ಲಿ ನಿಮಗೆ ಸಿಗುವ ಉತ್ತಮ ವೈಶಿಷ್ಟ್ಯಗಳ ಬಗ್ಗೆ ಕೇಳಿ ಎಂದು ಲ್ಯಾಪ್‌ಟಾಪ್‌ ಖರೀದಿ ಮಾಡುವ ಬಗ್ಗೆ ಕೇಳಿಕೊಳ್ಳುತ್ತಾನೆ.



ಇದನ್ನು ಓದಿ:Viral News: ಇಂಟರ್‌ವ್ಯೂಗೆ 25 ನಿಮಿಷ ಬೇಗ ಬಂದು ಕೆಲಸ ಕಳೆದುಕೊಂಡ ಅಭ್ಯರ್ಥಿ; ಮಾಲೀಕ ನೀಡಿದ ಕಾರಣವೇನು ನೋಡಿ

ಈ ದೃಶ್ಯವು ಸಾರ್ವಜನಿಕರನ್ನು ಭಯಭೀತರನ್ನಾಗಿಸಿದ್ದು ಪೊಲೀಸರು ತಕ್ಷಣವೇ‌ ಕಾರ್ಯಪ್ರವೃತ್ತರಾಗಿ ಯುವಕರನ್ನು ವಿಚಾರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಯುವಕರು ಲ್ಯಾಪ್‌ಟ್ಯಾಪ್ ಪ್ರಚಾರಕ್ಕಾಗಿ ಈ ರೀತಿ ಮಾಡಿರುವುದಾಗಿ ತಿಳಿದು ಬಂದಿದ್ದು ಯುವಕರಿಗೆ ಈ ರೀತಿಯ ರೀಲ್ಸ್ ಮಾಡದಿರುವಂತೆ ಎಚ್ಚರಿಕೆ ನೀಡಲಾಗಿದೆ. ಈಗಾಗಲೇ ಈ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ತನಿಖೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅಜಯ್ ಲ್ಯಾಂಡ್ಗೆ ತಿಳಿಸಿದ್ದಾರೆ.

ಈ ವಿಡಿಯೊ ಇದೀಗ ಬಹಳಷ್ಟು ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರರೊಬ್ಬರು ಪ್ರಮೋಷನ್‌ಗಾಗಿ ಈ ರೀತಿ ರೀಲ್ಸ್ ಮಾಡುವುದು ತಪ್ಪು, ಇವರಿಗೆ ಸರಿಯಾದ ಶಿಕ್ಷೆಯಾಗಬೇಕೆಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿಯ ಅಪಾಯಕಾರಿ ಸಾಹಸ ಮಾಡದಂತೆ ಪೊಲೀಸರು ಕಟ್ಟುನಿಟ್ಟಾದ ಕ್ರಮ ಜಾರಿಗೆ ತರಬೇಕೆಂದು ತಿಳಿಸಿದ್ದಾರೆ.