ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Meerut murder case: ಪತಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ಮುಸ್ಕಾನ್‌ ಈಗ ಗರ್ಭಿಣಿ! ವೈದ್ಯರು ಹೇಳಿದ್ದೇನು?

ಪತಿಯನ್ನು ಕೊಂದ ಆರೋಪದ ಮೇಲೆ ಪ್ರಿಯಕರನೊಂದಿಗೆ ಜೈಲಿನಲ್ಲಿರುವ ಮುಸ್ಕಾನ್ ರಸ್ತೋಗಿ, ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಗರ್ಭಿಣಿಯಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ಅವರು ಮುಸ್ಕಾನ್ ಪ್ರಾಥಮಿಕ ಪರೀಕ್ಷೆಗೆ ಒಳಗಾಗಿದ್ದಾಳೆ ಎಂದು ದೃಢಪಡಿಸಿದ್ದಾರೆ.

ಪತಿ ಕೊಲೆ ಆರೋಪದಲ್ಲಿ ಜೈಲಿನಲ್ಲಿರುವ ಮುಸ್ಕಾನ್‌ ಈಗ ಗರ್ಭಿಣಿ!

Profile Vishakha Bhat Apr 8, 2025 8:52 AM

ಲಖನೌ: ಪತಿಯನ್ನು ಕೊಂದ ಆರೋಪದ ಮೇಲೆ ಪ್ರಿಯಕರನೊಂದಿಗೆ ಜೈಲಿನಲ್ಲಿರುವ ಮುಸ್ಕಾನ್ ರಸ್ತೋಗಿ, ಗರ್ಭಿಣಿಯಾಗಿದ್ದಾಳೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ಪರೀಕ್ಷೆಯಲ್ಲಿ ಗರ್ಭಿಣಿಯಾಗಿರುವುದು (Meerut murder case) ಕಂಡುಬಂದಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಹಿರಿಯ ಜೈಲು ಸೂಪರಿಂಟೆಂಡೆಂಟ್ ವಿರೇಶ್ ರಾಜ್ ಶರ್ಮಾ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಮಹಿಳಾ ಕೈದಿಗಳು ನಿಯಮಿತವಾಗಿ ಆರೋಗ್ಯ ತಪಾಸಣೆ ಮತ್ತು ಗರ್ಭಧಾರಣೆಯ ಪರೀಕ್ಷೆಗಳಿಗೆ ಒಳಗಾಗುತ್ತಾರೆ. ಮುಸ್ಕಾನ್‌ನನ್ನೂ ಕೂಡ ತಪಾಸಣೆ ನಡೆಸಿದಾಗ ಆಕೆ ಗರ್ಭಿಣಿ ಎಂದು ತಿಳಿದು ಬಂದಿದೆ ಎಂದು ಅವರು ಹೇಳಿದರು.

ಮುಖ್ಯ ವೈದ್ಯಾಧಿಕಾರಿ ಡಾ. ಅಶೋಕ್ ಕಟಾರಿಯಾ ಅವರು ಮುಸ್ಕಾನ್ ಪ್ರಾಥಮಿಕ ಪರೀಕ್ಷೆಗೆ ಒಳಗಾಗಿದ್ದಾಳೆ ಎಂದು ದೃಢಪಡಿಸಿದ್ದಾರೆ. ಆಕೆಯನ್ನು ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದರು. ಮುಸ್ಕನ್ ರಸ್ತೋಗಿ (27) ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ (25) 29 ವರ್ಷದ ಸೌರಭ್ ರಜಪೂತ್ ಅವರನ್ನು ಕೊಂದ ಆರೋಪದ ಮೇಲೆ ಜೈಲಿನಲ್ಲಿದ್ದಾರೆ.

ಏನಿದು ಪ್ರಕರಣ?

ಕಳೆದ ತಿಂಗಳು ಮೀರತ್‌ನಲ್ಲಿ ಮರ್ಚೆಂಟ್‌ ನೇವಿ ಅಧಿಕಾರಿ ಸೌರಭ್‌ ರಜಪೂತ್‌ ಅವರನ್ನು ಅವರ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಕೊಂಡು ಡ್ರಮ್‌ನಲ್ಲಿ ಹಾಕಿ ಸಿಮೆಂಟ್‌ನಿಂದ ಮುಚ್ಚಿದ್ದರು. ಮುಸ್ಕಾನ್ ಮತ್ತು ಸೌರಭ್ 2016 ರಲ್ಲಿ ಪ್ರೇಮ ವಿವಾಹವಾಗಿದ್ದರು ಮತ್ತು ಕಳೆದ ಮೂರು ವರ್ಷಗಳಿಂದ ತಮ್ಮ ಐದು ವರ್ಷದ ಮಗಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಸೌರಭ್ ಲಂಡನ್‌ನಲ್ಲಿದ್ದಾಗ ಮುಸ್ಕಾನ್ ಮತ್ತು ಸಾಹಿಲ್ ನಡುವೆ ಪ್ರೇಮ ಬೆಳೆದಿತ್ತು.

ಈ ಸುದ್ದಿಯನ್ನೂ ಓದಿ: Merchant navy officer murder: ಹತ್ಯೆಗೂ ಮುನ್ನ ಮಗಳ ಹುಟ್ಟುಹಬ್ಬದಂದು ಪತಿ ಕೈ ಹಿಡಿದು ಮಸ್ತ್‌ ಸ್ಟೆಪ್‌ ಹಾಕಿದ್ದ ಮುಸ್ಕಾನ್‌ ; ವಿಡಿಯೋ ವೈರಲ್‌

ಸೌರಭ್ ಇತ್ತೀಚೆಗೆ ಲಂಡನ್‌ನಿಂದ ಮೀರತ್‌ಗೆ ಮರಳಿದ್ದರು. ಆಗ ಪತ್ನಿ ಆತನನ್ನು ತನ್ನ ಗೆಳೆಯನೊಟ್ಟಿಗೆ ಸೇರಿ ಕೊಲೆ ಮಾಡಿದ್ದಳು. ಮಾರ್ಚ್ 4 ರಂದು ಕೊಲೆ ನಡೆದಿದ್ದರೂ, ಸೌರಭ್ ನಾಪತ್ತೆಯಾದ ವರದಿಯಾದ ನಂತರವೇ ಕೊಲೆ ಬೆಳಕಿಗೆ ಬಂದಿತು. ಸೌರಭ್ ಕುಟುಂಬವು ಹಲವಾರು ದಿನಗಳವರೆಗೆ ಅವರನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಾಗ ಪೊಲೀಸರಿಗೆ ದೂರು ನೀಡಿತು. ವಿಚಾರಣೆಯ ನಂತರ, ಮುಸ್ಕಾನ್ ಮತ್ತು ಸಾಹಿಲ್ ಇಬ್ಬರೂ ಕೊಲೆಯನ್ನು ಒಪ್ಪಿಕೊಂಡರು. ಮುಸ್ಕಾನ್ ಮತ್ತು ಸಾಹಿಲ್ ಇಬ್ಬರೂ ಮೀರತ್‌ನ ಚೌಧರಿ ಚರಣ್ ಸಿಂಗ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.