ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲಿಂಕ್ಡ್‌ ಇನ್‌ ನ 2025ರ ಭಾರತದ ಟಾಪ್ ಮಿಡ್‌ ಸೈಜ್ ಕಂಪನಿಗಳ ಪಟ್ಟಿಯಲ್ಲಿ ಮೊದಲ ಮೂರು ಸ್ಥಾನ ಪಡೆದ ಖೇತಾನ್ & ಕೋ, ಮೇಕ್‌ಮೈಟ್ರಿಪ್, ಮತ್ತು ಶಾರ್ದೂಲ್ ಅಮರ್‌ಚಂದ್ ಮಂಗಲದಾಸ್

ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್ ಇಂದು 2025ರ ಭಾರತದ ಟಾಪ್ ಮಿಡ್‌ ಸೈಜ್ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ 5,000 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಮತ್ತು ಭಾರತದಲ್ಲಿ ಕನಿಷ್ಠ 250 ಉದ್ಯೋಗಿಗಳನ್ನು ಹೊಂದಿ ರುವ ಅಗ್ರ 15 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ. ಈ ಕಂಪನಿಗಳಲ್ಲಿ ವೃತ್ತಿಪರರು ತಾವು ವೃತ್ತಿ ಕ್ಷೇತ್ರದಲ್ಲಿ ಬೆಳೆಯಬಹುದು ಎಂಬುದನ್ನು ಈ ಪಟ್ಟಿ ಸೂಚಿಸುತ್ತಿದೆ

ಲಿಂಕ್ಡ್‌ ಇನ್ ನಿಂದ ಭಾರತದ ಟಾಪ್ ಮಿಡ್‌ ಸೈಜ್ ಕಂಪನಿಗಳ ಪಟ್ಟಿ ಬಿಡುಗಡೆ

Profile Ashok Nayak Apr 16, 2025 12:04 PM

● ಈ ಲಿಸ್ಟ್ ನ ಟಾಪ್ 15 ರಲ್ಲಿ 10 ಸ್ಥಾನಗಳನ್ನು ಕಾನೂನು, ತಂತ್ರಜ್ಞಾನ, ಹೆಲ್ತ್ ಕೇರ್ ಕ್ಷೇತ್ರದ ಕಂಪನಿಗಳು ಪಡೆದಿವೆ ● 15 ಮಿಡ್‌ ಸೈಜ್ ಕಂಪನಿಗಳಲ್ಲಿ 14 ಕಂಪನಿಗಳು ಮುಂಬೈ (4), ದೆಹಲಿ- ಎನ್ ಸಿ ಆರ್ (4), ಹೈದರಾಬಾದ್ (3), ಮತ್ತು ಬೆಂಗಳೂರು (3) ನಲ್ಲಿ ನೆಲೆಗೊಂಡಿವೆ.

ವಿಶ್ವದ ಅತಿದೊಡ್ಡ ವೃತ್ತಿಪರ ಜಾಲವಾದ ಲಿಂಕ್ಡ್‌ ಇನ್ ಇಂದು 2025ರ ಭಾರತದ ಟಾಪ್ ಮಿಡ್‌ ಸೈಜ್ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಜಾಗತಿಕ ಮಟ್ಟದಲ್ಲಿ 5,000 ಕ್ಕಿಂತ ಕಡಿಮೆ ಉದ್ಯೋಗಿಗಳನ್ನು ಹೊಂದಿರುವ ಮತ್ತು ಭಾರತದಲ್ಲಿ ಕನಿಷ್ಠ 250 ಉದ್ಯೋಗಿ ಗಳನ್ನು ಹೊಂದಿರುವ ಅಗ್ರ 15 ಕಂಪನಿಗಳನ್ನು ಪಟ್ಟಿ ಮಾಡಲಾಗಿದೆ. ಈ ಕಂಪನಿಗಳಲ್ಲಿ ವೃತ್ತಿ ಪರರು ತಾವು ವೃತ್ತಿ ಕ್ಷೇತ್ರದಲ್ಲಿ ಬೆಳೆಯಬಹುದು ಎಂಬುದನ್ನು ಈ ಪಟ್ಟಿ ಸೂಚಿಸುತ್ತಿದೆ.

ಲಿಂಕ್ಡ್ ಇನ್ ನಲ್ಲಿನ ಲಕ್ಷಾಂತರ ಉದ್ಯೋಗಿಗಳ ಚಟುವಟಿಕೆಯ ಆಧಾರದ ಮೇಲೆ ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಈ ಪಟ್ಟಿಯು ಬೇಡಿಕೆಯಲ್ಲಿರುವ ಕೌಶಲ್ಯಗಳು, ಟಾಪ್ ಲೊಕೇಷನ್ ಗಳು, ಮತ್ತು ಈ ಕಂಪನಿಗಳ ಪ್ರಮುಖ ಉದ್ಯೋಗ ಕಾರ್ಯಗಳ ಕುರಿತು ಮಾಹಿತಿ ನೀಡುತ್ತದೆ ಮತ್ತು ಉದ್ಯೋಗಾಕಾಂಕ್ಷಿಗಳಿಗೆ ತಮ್ಮ ಮುಂದಿನ ದಾರಿಯನ್ನಿ ನಿರ್ಧರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: 40% Commission: 40% ಕಮಿಷನ್ ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಲು ಸಚಿವ ಸಂಪುಟ ತೀರ್ಮಾನ

ಅಭಿವೃದ್ಧಿ ಹೊಂದುವ ಸಾಮರ್ಥ್ಯ, ಕೌಶಲ್ಯ ಅಭಿವೃದ್ಧಿ, ಬಾಹ್ಯ ಅವಕಾಶ ಮತ್ತು ಕಂಪನಿಯ ಆಕರ್ಷಣೆ ಈ ಎಂಟು ಅಂಶಗಳ ಆಧಾರದಲ್ಲಿ ಸಿದ್ಧಗೊಂಡಿರುವ ಲಿಂಕ್ಡ್ ಇನ್ ನ ಈ ಪಟ್ಟಿಯು ಪ್ರತಿಭೆಗಳಲ್ಲಿ ಹೂಡಿಕೆ ಮಾಡುವ ಮತ್ತು ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ನೇಮಕಾತಿ ಮಾಡಿಕೊಳ್ಳುತ್ತಿರುವ ಸಂಸ್ಥೆಗಳ ಕುರಿತು ಮಾಹಿತಿ ನೀಡಿವೆ. ಖೇತಾನ್ & ಕೋ (#1) ಈ ವರ್ಷದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಇದರ ನಂತರದ ಸ್ಥಾನವನ್ನು ಮೇಕ್‌ಮೈಟ್ರಿಪ್ (#2) ಪಡೆದುಕೊಂಡಿದೆ.

ಶಾರ್ದೂಲ್ ಅಮರ್‌ಚಂದ್ ಮಂಗಲದಾಸ್ & ಕೋ (#3) ಮೂರನೇ ಸ್ಥಾನದಲ್ಲಿದೆ. ಕಾನ್ ಸ್ಟಿಟ್ಯೂ ಷನಲ್ ಲಾ, ಟ್ರಾವೆಲ್ ಮ್ಯಾನೇಜ್ ಮೆಂಟ್ ಮತ್ತು ರೆವೆನ್ಯೂ ಅನಾಲಿಸಿಸ್ ಕೌಶಲ್ಯಗಳಿಗೆ ಬೇಡಿಕೆ ಹೆಚ್ಚಿರುವುದನ್ನು ಈ ಪಟ್ಟಿ ತೋರಿಸಿದ್ದು, ವಕೀಲ, ಲೀಗಲ್ ಅಸೋಸಿಯೇಟ್, ಅಕೌಂಟ್ ಮ್ಯಾನೇ ಜರ್, ಮತ್ತು ಬಿಸಿನೆಸ್ ಡೆವಲಪ್ ಮೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಭಾರಿ ನೇಮಕಾತಿ ನಡೆಯು ತ್ತಿದೆ. ಮುಂಬೈ, ಗುರುಗ್ರಾಮ, ಮತ್ತು ದೆಹಲಿ- ಎನ್ ಸಿ ಆರ್ ಕೇಂದ್ರಿತವಾಗಿರುವ ಕಂಪನಿ ಗಳು ಹೆಚ್ಚಿನ ನೇಮಕಾತಿ ಮಾಡಿಕೊಳ್ಳುತ್ತಿವೆ.

ಲಿಂಕ್ಡ್‌ ಇನ್ ಕರಿಯರ್ ಎಕ್ಸ್ ಪರ್ಟ್ ಮತ್ತು ಇಂಡಿಯಾ ಸೀನಿಯರ್ ಮ್ಯಾನೇಜಿಂಗ್ ಎಡಿಟರ್ ನಿರಾಜಿತಾ ಬ್ಯಾನರ್ಜಿ ಅವರು, “ಈ ವರ್ಷದ ಪಟ್ಟಿಯು ಸಣ್ಣ ತಂಡಗಳಿರುವ, ಕೈಗೆಟಕುವ ಹುದ್ದೆ ಗಳಿರುವ ಮತ್ತು ನೇರ ವ್ಯಾಪಾರ ಪರಿಣಾಮವನ್ನು ಸೃಷ್ಟಿಸುವ ಅವಕಾಶಗಳು ಹೇರಳವಾಗಿರುವ ಕಂಪನಿಗಳಲ್ಲಿ ಇರುವ ಬೆಳವಣಿಗೆಯ ಅವಕಾಶಗಳನ್ನು ಎತ್ತಿ ತೋರಿಸುತ್ತದೆ.

15 ಕಂಪನಿಗಳಲ್ಲಿ 14 ಕಂಪನಿಗಳು ಮುಂಬೈ, ದೆಹಲಿ- ಎನ್ ಸಿ ಆರ್, ಬೆಂಗಳೂರು, ಮತ್ತು ಹೈದರಾ ಬಾದ್‌ ನಲ್ಲಿ ಕೇಂದ್ರ ಕಚೇರಿಗಳನ್ನು ಹೊಂದಿವೆ. ಮುಂಬೈ ಮತ್ತು ದೆಹಲಿ- ಎನ್ ಸಿ ಆರ್ ನ ಕಾನೂನು ಸಂಸ್ಥೆಗಳು ಕಾನೂನು ಪ್ರತಿಭೆಗಳನ್ನು ನೇಮಕ ಮಾಡುತ್ತಿವೆ, ಬೆಂಗಳೂರು ಕಂಪನಿಗಳು ಸಾಫ್ಟ್‌ ವೇರ್ ಟೆಸ್ಟಿಂಗ್ ಮತ್ತು ಎಐ ಅಪ್ಲಿಕೇಶನ್ ಹುದ್ದೆಗಳಿಗೆ, ಮತ್ತು ಹೈದರಾಬಾದ್ ಕಂಪನಿಗಳು ಫಾರ್ಮಾ, ಸೆಮಿಕಂಡಕ್ಟರ್, ಮತ್ತು ಮೀಡಿಯಾ ಕಾರ್ಯಾಚರಣೆಗಳಿಗೆ ವೃತ್ತಿಪರರ ನೇಮಕಾತಿ ಮಾಡುತ್ತಿವೆ. ವಿವಿಧ ಕ್ಷೇತ್ರಗಳ ಜ್ಞಾನ, ತಾಂತ್ರಿಕ ಪರಿಣತಿ, ಮತ್ತು ಉತ್ತಮ ಸಂವಹನ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಹೊಂದಿರುವ ವೃತ್ತಿಪರರು ಈ ಮಿಡ್‌ ಸೈಜ್ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ವಿಚಾರದಲ್ಲಿ ಮುಂಚೂಣಿಯಲ್ಲಿ ಇರುತ್ತಾರೆ” ಎಂದು ಹೇಳಿದರು.

ಈ ಪಟ್ಟಿಯ ಪ್ರಕಾರ ಮಿಡ್‌ ಸೈಜ್ ಕಂಪನಿಗಳು ಔಷಧ ಸಂಶೋಧನೆ, ಆರೋಗ್ಯ ತಂತ್ರಜ್ಞಾನ, ಮತ್ತು ಕನ್ಸ್ಯೂಮರ್ ರಿಟೇಲ್ ಬಿಸಿನೆಸ್ ನಂತಹ ಕ್ಷೇತ್ರ ನಿರ್ದಿಷ್ಟ ವಿಭಾಗಗಳಲ್ಲಿ ವೃತ್ತಿಪರ ಅವಕಾಶಗಳನ್ನು ಒದಗಿಸುತ್ತಿವೆ. ಅರಗನ್ ಲೈಫ್ ಸೈನ್ಸಸ್ (#4) ಕಂಪನಿಯು ಜೆನೆಟಿಕ್ ಇಂಜಿನಿಯ ರಿಂಗ್ ಮತ್ತು ಫಾರ್ಮಾಸ್ಯೂಟಿಕಲ್ ತಯಾರಿಕೆ ಕೌಶಲ್ಯಗಳನ್ನು ಹೊಂದಿರುವ ವೃತ್ತಿಪರರನ್ನು ನೇಮಕ ಮಾಡುತ್ತಿದೆ. ಟ್ರೈಕಾಗ್ ಹೆಲ್ತ್ (#7) ಕಂಪನಿಯು ಬಯೋಮೆಡಿಕಲ್ ಇಂಜಿನಿಯರಿಂಗ್ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪರಿಣತಿಯಿರುವ ವೃತ್ತಿಪರರಿಗೆ ಆದ್ಯತೆ ನೀಡುತ್ತಿದೆ.

ನೈಕಾ (#5) ಸಂಸ್ಥೆಯು ರಿಟೇಲ್, ಕಾಸ್ಮೆಟಾಲಜಿ, ಮತ್ತು ಕಾನ್ಸೆಪ್ಚುವಲ್ ಆರ್ಟ್‌ ನಲ್ಲಿ ಅವಕಾಶ ಗಳನ್ನು ಒದಗಿಸುತ್ತಿದ್ದು, ಬ್ಯೂಟಿ ಅಡ್ವೈಸರ್, ಬ್ರಾಂಡ್ ಮ್ಯಾನೇಜರ್, ಮತ್ತು ಶಾಪ್ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಮಾಡುತ್ತಿವೆ. ಲಿಂಕ್ಡ್‌ ಇನ್ ಪಟ್ಟಿಯ ಪ್ರಕಾರ ಸಾಸ್ಕೆನ್ ಟೆಕ್ನಾಲಜೀಸ್ (#9) ಮತ್ತು ಮಾಸ್‌ಚಿಪ್ (#13) ಕಂಪನಿಗಳು ಇಂಜಿನಿಯರಿಂಗ್ ಮತ್ತು ವಿನ್ಯಾಸ ಕ್ಷೇತ್ರದ ವತ್ತಿಪರರರಿಗೆ ಅವಕಾಶಗಳನ್ನು ಒದಗಿಸುತ್ತಿವೆ. ಈ ಕಂಪನಿಗಳು ಡಿಸೈನ್ ಇಂಜಿನಿಯರ್, ಎಂಬೆಡೆಡ್ ಸಾಫ್ಟ್‌ ವೇರ್ ಇಂಜಿನಿಯರ್, ಮತ್ತು ಸಿಸ್ಟಮ್ ಇಂಜಿನಿಯರ್‌ಗಳನ್ನು ನೇಮಕ ಮಾಡುತ್ತಿವೆ, ಜೊತೆಗೆ ಸಿಗ್ನಲ್ ಪ್ರೊಸೆಸಿಂಗ್, ಎಲೆಕ್ಟ್ರಾನಿಕ್ ಕಂಟ್ರೋಲ್ ಸಿಸ್ಟಮ್ಸ್, ಮತ್ತು ಮೊಬೈಲ್ ಅಪ್ಲಿಕೇಶನ್ ಡೆವಲಪ್‌ ಮೆಂಟ್ ಕೌಶಲ್ಯಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ.

ಪಟ್ಟಿಯಲ್ಲಿರುವ ಇತರ ಕಂಪನಿಗಳು ಸಾರ್ವಜನಿಕ ಸಂಪರ್ಕ, ಶಿಕ್ಷಣ ತಂತ್ರಜ್ಞಾನ, ಲಾಭರಹಿತ ಸೇವೆಗಳು, ಮತ್ತು ಹೋಮ್ ಸರ್ವೀಸಸ್ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುವ ಕಂಪನಿಗಳಾಗಿವೆ. ಈ ವಿಭಾಗದಲ್ಲಿರುವ ಆಡ್‌ಫ್ಯಾಕ್ಟರ್ಸ್ ಪಿಆರ್ (#8), ಪ್ರದಾನ್ (#10), ಎಕ್ಸೆಲ್‌ ಸಾಫ್ಟ್ ಟೆಕ್ನಾಲಜೀಸ್ (#11), ಮತ್ತು ಅರ್ಬನ್ ಕಂಪನಿ (#12) ಕಂಪನಿಗಳು ಅಕೌಂಟ್ ಎಕ್ಸಿಕ್ಯೂಟಿವ್, ಸಾಫ್ಟ್‌ ವೇರ್ ಇಂಜಿನಿಯರ್, ಡೆವಲಪ್ ಮೆಂಟ್ ಸ್ಪೆಷಲಿಸ್ಟ್, ಮತ್ತು ಬಿಸಿನೆಸ್ ಡೆವಲಪ್ ಮೆಂಟ್ ಅಸೋಸಿ ಯೇಟ್ ಮುಂತಾದ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿವೆ.

ಈ ಕಂಪನಿಗಳು ಕಾರ್ಪೊರೇಟ್ ಸಂವಹನ, ಸಕ್ರಿಯ ಕಲಿಕೆ, ಸಾರ್ವಜನಿಕ ನೀತಿ, ಮತ್ತು ಕಾಸ್ಮೆಟಾ ಲಜಿ ಕೌಶಲ್ಯಗಳನ್ನು ಹೊಂದಿರುವ ಪ್ರತಿಭೆಗಳನ್ನು ನೇಮಕ ಮಾಡುತ್ತಿವೆ.

2025 ರ ಭಾರತದ ಟಾಪ್ ಮಿಡ್‌ ಸೈಜ್ ಕಂಪನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ 15 ಕಂಪನಿಗಳು ಇಲ್ಲಿವೆ: 1.ಖೇತಾನ್ & ಕೋ 2.ಮೇಕ್ ಮೈ ಟ್ರಿಪ್ 3.ಶಾರ್ದೂಲ್ ಅಮರ್ ಚಂದ್ ಮಂಗಲ್ ದಾಸ್ & ಕೋ 4.ಆರ್ಗನ್ ಲೈಫ್ ಸೈನ್ಸಸ್ 5.ನೈಕಾ 6.ಸಿರಿಲ್ ಅಮರ್ ಚಂದ್ ಮಂಗಲ್ ದಾಸ್ 7.ಟ್ರೈಕಾಗ್ ಹೆಲ್ತ್ 8.ಆಡ್ ಫ್ಯಾಕ್ಟರ್ಸ್ ಪಿಆರ್ 9.ಸಾಸ್ಕೆನ್ ಟೆಕ್ನಾಲಜೀಸ್ ಲಿಮಿಟೆಡ್ 10.ಪ್ರೊಫೆಷನಲ್ ಅಸಿ ಸ್ಟೆನ್ಸ್ ಫಾರ್ ಡೆವಲಪ್ಮೆಂಟ್ ಆಕ್ಷನ್ (ಪ್ರದಾನ್) 11.ಎಕ್ಸೆಲ್ ಸಾಫ್ಟ್ ಟೆಕ್ನಾಲಜೀಸ್ 12.ಅರ್ಬನ್ ಕಂಪನಿ 13.ಮಾಸ್ ಚಿಪ್® 14.ಮೀಡಿಯಾ ಮಿಂಟ್ 15.