Operation Sindoor: ಪೂಂಚ್‌ನಲ್ಲಿ ಗುಂಡಿನ ದಾಳಿಗೆ 12 ವರ್ಷದ ಅವಳಿ ಮಕ್ಕಳು ಸಾವು- ಬರ್ತ್‌ಡೇ ಮರುದಿನವೇ ಘೋರ ದುರಂತ
India-Pak Tensions: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ಕಳೆದ ವಾರ ಮಾರ್ಟರ್ ಶೆಲ್ (Mortar shell) ಒಂದು ಮನೆಗೆ ತಗುಲಿ, 12 ವರ್ಷದ ಅವಳಿ(Twins) ಮಕ್ಕಳಾದ ಝೋಯಾ ಮತ್ತು ಅಯಾನ್ ಖಾನ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ಸೇನೆಯ ತೀವ್ರ ಗುಂಡಿನ ದಾಳಿಯಿಂದ ಈ ಘಟನೆ ನಡೆದಿದೆ.


ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪೂಂಚ್ (Poonch) ಜಿಲ್ಲೆಯಲ್ಲಿ ಕಳೆದ ವಾರ ಮಾರ್ಟರ್ ಶೆಲ್ (Mortar shell) ಒಂದು ಮನೆಗೆ ತಗುಲಿ, 12 ವರ್ಷದ ಅವಳಿ(Twins) ಮಕ್ಕಳಾದ ಝೋಯಾ ಮತ್ತು ಅಯಾನ್ ಖಾನ್ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಸಹ ಪ್ರಾಣ ಕಳೆದುಕೊಂಡಿದ್ದಾರೆ. ಪಾಕಿಸ್ತಾನ ಸೇನೆಯ ತೀವ್ರ ಗುಂಡಿನ ದಾಳಿಯಿಂದ ಈ ಘಟನೆ ನಡೆದಿದೆ. ಕಳೆದ ತಿಂಗಳು ತಮ್ಮ 12ನೇ ಹುಟ್ಟುಹಬ್ಬವನ್ನು ಆಚರಿಸಿದ್ದ ಝೋಯಾ ಮತ್ತು ಅಯಾನ್ ಮೇ 7 ರಂದು ಕೆಲವೇ ನಿಮಿಷಗಳ ಅಂತರದಲ್ಲಿ ಮೃತಪಟ್ಟಿದ್ದಾರೆ. ಉತ್ತಮ ಶಿಕ್ಷಣದ ಅವಕಾಶಕ್ಕಾಗಿ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಈ ಕುಟುಂಬ ಪೂಂಚ್‌ಗೆ ಸ್ಥಳಾಂತರಗೊಂಡಿತ್ತು.
ಅವರ ತಂದೆ, 48 ವರ್ಷದ ರಮೀಝ್ ಖಾನ್, ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಜಮ್ಮುವಿನ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ತನ್ನ ಮಕ್ಕಳ ಸಾವಿನ ವಿಷಯವನ್ನು ತಂದೆಗೆ ತಿಳಿಸಿಲ್ಲ ಎಂದು ಸಂಬಂಧಿಕರು ಹೇಳಿದ್ದಾರೆ. ರಮೀಝ್ ಖಾನ್ ಅವರ ಲಿವರ್‌ಗೆ ಹಾನಿಯಾಗಿದ್ದು, ಮಕ್ಕಳ ಸಾವಿನ ಸುದ್ದಿ ತಿಳಿದರೆ ಆಘಾತದಿಂದ ಅವರು ಬದುಕುವ ಸಾಧ್ಯತೆ ಕಡಿಮೆ ಎಂದು ಸಂಬಂಧಿಕರು ಹೇಳಿದ್ದಾರೆ. ಅವರ ತಾಯಿ ಉರ್ಷಾ ಖಾನ್, ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖ ಮತ್ತು ಪತಿಯ ಜೀವನ್ಮರಣ ಹೋರಾಟದ ನಡುವೆ ಮಾನಸಿಕವಾಗಿ ಕುಸಿದುಹೋಗಿದ್ದಾರೆ. ಕುಟುಂಬವು ದುಃಖದಿಂದ ಮಾತನಾಡಲು ಸಾಧ್ಯವಾಗದಿರುವುದರಿಂದ, ಆಪ್ತ ಸಂಬಂಧಿಕರಾದ ಮರಿಯಾ ಮತ್ತು ಸೊಹೈಲ್ ಖಾನ್ ಈ ಭೀಕರ ಘಟನೆಯನ್ನು ವಿವರಿಸಿದ್ದಾರೆ.
ಈ ಸುದ್ದಿಯನ್ನು ಓದಿ : Operation Sindoor: ಮತ್ತೆ ಬಾಲ ಬಿಚ್ಚಿದ ಪಾಕ್; ಜಮ್ಮು ಕಾಶ್ಮೀರದಲ್ಲಿ ಡ್ರೋನ್ ದಾಳಿ, ಭಾರತೀಯ ಸೇನೆ ಹೇಳಿದ್ದೇನು?
"ಝೋಯಾಗೆ ತೀವ್ರ ಗಾಯಗಳಾಗಿದ್ದವು. ಅಯಾನ್‌ನ ಕರುಳು ಹೊರಬಂದಿತ್ತು. ನಮ್ಮ ಸಂಬಂಧಿಯೊಬ್ಬರು ಅವನನ್ನು ಉಳಿಸಲು ಪ್ರಯತ್ನಿಸಿದರು, ಆದರೆ ಇಬ್ಬರೂ ಕೆಲವೇ ನಿಮಿಷಗಳಲ್ಲಿ ಕೊನೆಯುಸಿರೆಳೆದರು," ಎಂದು ಮರಿಯಾ ಹೇಳಿದ್ದಾರೆ. ತಂದೆ ರಮೀಝ್ ಎಂದಿಗೂ ಮಕ್ಕಳನ್ನು ಗದರಿದವನಲ್ಲ ಈ ಸುದ್ದಿ ತಿಳಿದರೆ ಅವರು ಬದುಕೋದಿಲ್ಲ” ಎಂದು ಅವರು ಕಣ್ಣೀರಿಟ್ಟಿದ್ದಾರೆ
ಸಕಾಲಕ್ಕೆ ಚಿಕಿತ್ಸೆ ಸಿಗದಿದ್ದರಿಂದ ಪರಿಸ್ಥಿತಿ ಇನ್ನಷ್ಟು ಗಂಭೀರವಾಯಿತು ಗುಂಡಿನ ದಾಳಿ ಗಂಟೆಗಟ್ಟಲೆ ಮುಂದುವರಿದಿದ್ದರಿಂದ ಆಸ್ಪತ್ರೆಗೆ ತಲುಪಲು ಹಲವು ಗಂಟೆಗಳಾದವು. ಮೊದಲು ರಜೌರಿಗೆ ಹೋಗಿ ನಂತರ ಜಮ್ಮುವಿಗೆ ಬಂದೆವು ಎಂದು ಸೊಹೈಲ್ ಹೇಳಿದರು. ಈಗ ಕುಟುಂಬವು ರಮೀಝ್ ಖಾನ್‌ರನ್ನು ದೆಹಲಿಗೆ ಕರೆದೊಯ್ದು ವಿಶೇಷ ವೈದ್ಯಕೀಯ ತಂಡದಿಂದ ಚಿಕಿತ್ಸೆ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಮೇ 7 ರಿಂದ ಪಾಕಿಸ್ತಾನ ನಡೆಸಿದ ಭಾರೀ ಗುಂಡಿನ ದಾಳಿ ಮತ್ತು ಡ್ರೋನ್ ದಾಳಿಗಳಿಂದ ಐವರು ಭದ್ರತಾ ಸಿಬ್ಬಂದಿ ಸೇರಿದಂತೆ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ