ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಯಾವ ಬಿಲದೊಳಗೆ ಅಡಗಿದ್ರೂ ನುಗ್ಗಿ ಹೊಡೆಯುತ್ತೇವೆ; ಮೋದಿ ಗರ್ಜನೆ- ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಯುತ್ತಾ?

Pahalgam terror attack:ಪಹಲ್ಗಾಮ್‌ ಉಗ್ರರ ದಾಳಿ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ಮೊದಲ ಬಾರಿಗೆ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಬಿಹಾರದ ಮಧುಭಾನಿಯಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಉಗ್ರರ ಹೇಯ ಕೃತ್ಯವನ್ನು ಖಂಡಿದ್ದಾರೆ. ಅಲ್ಲದೇ ದುರಂತದಲ್ಲಿ ಮಡಿದವರಿಗೆ ಸಂತಾಪ ಸೂಚಿಸಿದ್ದಾರೆ.

ಪಾಕ್‌ ವಿರುದ್ಧ ಮೋದಿ ಗರ್ಜನೆ;ಮತ್ತೊಂದು ಸರ್ಜಿಕಲ್‌ ಸ್ಟ್ರೈಕ್‌ ನಡೆಯುತ್ತಾ?

Profile Rakshita Karkera Apr 24, 2025 12:53 PM

ಪಟನಾ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ರಣ ಭೀಕರ ಉಗ್ರರ ದಾಳಿ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ(PM Narendra Modi) ಬಿಹಾರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ(Pahalgam terror attack) ಮೃತಪಟ್ಟವರಿಗೆ ಗೌರವಾರ್ಥ ಸಲ್ಲಿಸುವ ಸಲುವಾಗಿ ಒಂದು ನಿಮಿಷ ಮೌನ ಆಚರಿಸುವಂತೆ ಜನರಿಗೆ ಮನವಿ ಮಾಡಿದ ಪ್ರಧಾನಿ, "ಈ ದುಃಖದ ಕ್ಷಣದಲ್ಲಿ ನಾವೆಲ್ಲರೂ ಒಟ್ಟಾಗಿ ನಿಲ್ಲಬೇಕಿದೆ. ರಾಜಕೀಯವಾಗಿ ಏನನ್ನೂ ಮಾತನಾಡದೇ ಇರೋಣ ಎಂದಿದ್ದಾರೆ.



ಈ ಹೇಯ ಕೃತ್ಯ ಎಸಗಿದದ ಉಗ್ರರು ಮತ್ತು ಅವರನ್ನು ಬೆಂಬಲಿಸುವವರನ್ನು ಹುಡುಕಿ ಹುಡಕಿ ಕೊಲ್ಲಲಾಗುತ್ತದೆ. ಈ ಶಪತ ಎಂದೂ ಮುರಿಯಲ್ಲ. ಉಗ್ರರ ಬೆನ್ನು ಮೂಳೆಯನ್ನೇ ಮುರಿಯುತ್ತೇವೆ. ಇದು ಪ್ರವಾಸಿಗರ ಮೇಲೆ ಮಾತ್ರ ಆಗಿರುವ ದಾಳಿರುವ ದಾಳಿಯಲ್ಲ. ಕೋಟ್ಯಂತರ ಭಾರತೀಯರ ಆತ್ಮಗಳ ಮೇಲೆ ಆಗಿರುವ ದಾಳಿ. ಅಮಾಯಕರನ್ನು ಉಗ್ರರು ಕೊಂದಿದ್ದಾರೆ. ಊಹಿಸಲೂ ಸಾಧ್ಯವಾಗದಂತಹ ರೀತಿಯಲ್ಲಿ ತಿರುಗೇಟು ನೀಡುತ್ತೇವೆ. ಭಾರತವನ್ನು ಹೆದರಿರಲೂ ಯಾರಿಂದಲೂ ಸಾ‍ಧ್ಯವಿಲ್ಲ ಎಂದು ಉಗ್ರರಿಗೆ ನೇರ ಎಚ್ಚರಿಕೆ ನೀಡಿದ್ದಾರೆ.

ಉಗ್ರರ ಅಡಗುತಾಣಗಳನ್ನು ಹುಡುಕಿ ಮಟ್ಟಹಾಕುತ್ತೇವೆ. ಯಾವ ಬಿಲದೊಳಗೆ ಅಡಗಿದ್ರೂ ಹುಡುಕಿ ಮಟ್ಟ ಹಾಕುತ್ತೇವೆ. ದಾಳಿ ಹಿಂದೆ ಇರುವವರನ್ನು ಸುಮ್ಮನೆ ಬಿಡು ಮಾತೇ ಇಲ್ಲ. ಘಟನೆಯಿಂದ ಕೋಟಿ ಕೋಟಿ ಭಾರತೀಯರಿಗೆ ಆಘಾತವುಂಟಾಗಿದೆ. ಕಾಶ್ಮೀರ ದಾಳಿಗೆ ತಕ್ಕ ಪ್ರತ್ಯುತ್ತರ ಕೊಟ್ಟೇ ಕೊಡ್ತೇವೆ. ಉಗ್ರರನ್ನು ಬುಡ ಸಮೇತ ಕಿತ್ತು ಹಾಕ್ತೇವೆ ಎಂದು ಬಹಿರಂಗ ಎಚ್ಚರಿಕೆ ಕೊಟ್ಟಿದ್ದಾರೆ.