ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tahawwur Rana: ತಹವ್ವುರ್ ರಾಣಾ ಭಾರತಕ್ಕೆ ಹಸ್ತಾಂತರ; ಮೇಜರ್‌ ಸಂದೀಪ್‌ ಉಣ್ಣಿಕೃಷ್ಣನ್‌ ತಂದೆ ಹೇಳಿದ್ದೇನು?

ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯ ಸಮಯದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾದ ರಾಷ್ಟ್ರೀಯ ಭದ್ರತಾ ಪಡೆ ಕಮಾಂಡೋ ಮೇಜರ್ ಸಂದೀಪ್ ಉಣ್ಣಿಕೃಷ್ಣನ್‌ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜತಾಂತ್ರಿಕ ಯಶಸ್ಸಲ್ಲ, ಬದಲಿಗೆ ಸಾರ್ವಜನಿಕರ ಬಲಿಯ ಸೇಡು ಎಂದು ಹೇಳಿದ್ದಾರೆ.

ರಾಣಾ ಭಾರತಕ್ಕೆ ಹಸ್ತಾಂತರ;  ಸಂದೀಪ್‌ ಉಣ್ಣಿಕೃಷ್ಣನ್‌ ತಂದೆ ಹೇಳಿದ್ದೇನು?

Profile Vishakha Bhat Apr 10, 2025 5:25 PM

ನವದೆಹಲಿ: ಮುಂಬೈನಲ್ಲಿ 26/11 ಭಯೋತ್ಪಾದಕ ದಾಳಿಯ (Tahawwur Rana) ಸಮಯದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡುವಾಗ ಹುತಾತ್ಮರಾದ ರಾಷ್ಟ್ರೀಯ ಭದ್ರತಾ ಪಡೆ ಕಮಾಂಡೋ ಮೇಜರ್ ಸಂದೀಪ್ ಉಣ್ಣಿಕೃಷ್ಣನ್‌ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜತಾಂತ್ರಿಕ ಯಶಸ್ಸಲ್ಲ, ಬದಲಿಗೆ ಸಾರ್ವಜನಿಕರ ಬಲಿಯ ಸೇಡು ಎಂದು ಹೇಳಿದ್ದಾರೆ. 2008 ರ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಯನ್ನು ಸಹ ಮರಳಿ ತರಬೇಕಾಗಿದೆ ಎಂದು ಹೇಳಿದರು. ಐತಿಹಾಸಿಕ ತಾಜ್ ಮಹಲ್ ಹೋಟೆಲ್ ಮೇಲೆ ದಾಳಿ ನಡೆದ ನಂತರ ಮೂವತ್ತೊಂದು ವರ್ಷದ ಮೇಜರ್ ಉಣ್ಣೀಕೃಷ್ಣನ್‌ 10 ಕಮಾಂಡೋಗಳ ತಂಡವನ್ನು ಮುನ್ನಡೆಸಿದ್ದರು.

ಮೇಜರ್ ಉಣ್ಣೀಕೃಷ್ಣನ್‌ ಹಾಗೂ ಅವರ ತಂಡ ಹೋಟೆಲ್‌ನಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರಿಂದ ಭಾರೀ ಗುಂಡಿನ ದಾಳಿಗೆ ಒಳಗಾಯಿತು. ಮೇಜರ್ ಉಣ್ಣೀಕೃಷ್ಣನ್‌ ಕೂಡ ತನ್ನ ಗಾಯಗೊಂಡ ಸಹೋದ್ಯೋಗಿಗಳನ್ನು ಸ್ಥಳಾಂತರಿಸಿ ಏಕಾಂಗಿಯಾಗಿ ಹೋರಾಡಿದ್ದರು. ಆದರೆ ಕಾರ್ಯಾಚರಣೆಯ ಸಮಯದಲ್ಲಿ ಹುತಾತ್ಮರಾಗಿದ್ದರು. ಈ ಧೈರ್ಯಶಾಲಿ ಅಧಿಕಾರಿಗೆ ಭಾರತದ ಅತ್ಯುನ್ನತ ಶಾಂತಿಕಾಲದ ಮಿಲಿಟರಿ ಪ್ರಶಸ್ತಿಯಾದ ಅಶೋಕ ಚಕ್ರವನ್ನು ನೀಡಲಾಯಿತು. "ಮೇಜರ್ ಸಂದೀಪ್ ಉಣ್ಣೀಕೃಷ್ಣನ್‌ ಅವರು ಸೌಹಾರ್ದತೆ ಮತ್ತು ಅತ್ಯುನ್ನತ ಕ್ರಮದ ನಾಯಕತ್ವದ ಜೊತೆಗೆ ಅತ್ಯಂತ ಎದ್ದುಕಾಣುವ ಧೈರ್ಯವನ್ನು ಪ್ರದರ್ಶಿಸಿದರು ಮತ್ತು ರಾಷ್ಟ್ರಕ್ಕಾಗಿ ಸರ್ವೋಚ್ಚ ತ್ಯಾಗವನ್ನು ಮಾಡಿದರು" ಎಂದು ಪ್ರಶಸ್ತಿ ಪತ್ರದಲ್ಲಿ ಬರೆಯಲಾಗಿದೆ.

ಅವರ ತಂದೆ ತಮ್ಮ ಮಗನ ಬಲಿದಾನದ ಕುರಿತು ಮಾತನಾಡಿದ್ದಾರೆ. ರಾಣಾ ಹಸ್ತಾಂತರವು ನಿಮಗೆ ಸ್ವಲ್ಪ ತೃಪ್ತಿಯನ್ನು ತರುತ್ತದೆಯೇ ಎಂದು ಕೇಳಿದಾಗ, "ಖಂಡಿತ ಇದು ಒಂದು ಯಶಸ್ಸು. ಸಾರ್ವಜನಿಕರಿಗೆ, ಇದು ಕೇವಲ ರಾಜತಾಂತ್ರಿಕ ಯಶಸ್ಸಲ್ಲ, ಬದಲಾಗಿ ಸೇಡು ತೀರಿಸಿಕೊಳ್ಳುವ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ. ನನ್ನ ಮಗ ಬಲುಪಶುವಲ್ಲ. ಆತ ಆತನ ಕರ್ತವ್ಯ ನಿಭಾಯಿಸಲು ಜೀವ ಕೊಟ್ಟಿದ್ದಾನೆ. ಆದರೆ ಹೊಟೆಲ್‌ನಲ್ಲಿದ್ದ ಜನಗಳು ಅಮಾಯಕರು ಅವರ ಪ್ರಾಣ ಹೋಗಿದೆ ಎಂದು ಅವರು ಹೇಳಿದ್ದಾರೆ. ನಾವು ಕೋಲ್ಮನ್ ಹೆಡ್ಲಿಯನ್ನು ಭಾರತಕ್ಕೆ ಕರೆತರಬೇಕು ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ: Tahawwur Rana: 17 ವರ್ಷಗಳ ಶ್ರಮಕ್ಕೆ ಕೊನೆಗೂ ಫಲ; ಭಾರತಕ್ಕೆ ಬಂದಿಳಿದ ತಹಾವ್ವುರ್‌ ರಾಣಾ

ರಾಣಾನನ್ನು ಈಗಾಗಲೇ ಭಾರತಕ್ಕೆ ಕರೆತರಲಾಗಿದೆ. ರಾಣಾ ಹೊತ್ತ ವಿಮಾನವು ಇಂದು ಮಧ್ಯಾಹ್ನ 2:50 ರ ಸುಮಾರಿಗೆ ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ರಾಣಾನನ್ನು ಈಗ NIA ಔಪಚಾರಿಕವಾಗಿ ಬಂಧಿಸಿದ್ದು, ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಹಾಜರುಪಡಿಸಲಿದೆ.ಏತನ್ಮಧ್ಯೆ, ರಾಣಾನನ್ನು ಹೆಚ್ಚಿನ ಭದ್ರತೆಯ ಜೈಲು ವಾರ್ಡ್‌ನಲ್ಲಿ ಇರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಮತ್ತು ನ್ಯಾಯಾಲಯದ ಆದೇಶಗಳಿಗಾಗಿ ಕಾಯುತ್ತಿದ್ದೇವೆ ಎಂದು ತಿಹಾರ್ ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ, ಕೇಂದ್ರವು ವಕೀಲ ನರೇಂದರ್ ಮಾನ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪ್ರಕರಣದ RC-04/2009/NIA/DLI (ಮುಂಬೈ ದಾಳಿಗಳು) ಪ್ರಕರಣದ ವಿಚಾರಣೆ ಮತ್ತು ಇತರ ವಿಷಯಗಳಿಗೆ ಮೂರು ವರ್ಷಗಳ ಕಾಲ ವಿಶೇಷ ಸಾರ್ವಜನಿಕ ಅಭಿಯೋಜಕರನ್ನಾಗಿ ನೇಮಿಸಿದೆ.