Tahawwur Rana: ಭಯೋತ್ಪಾದಕರಿಗೆ ಸೆಲ್, ಬಿರಿಯಾನಿ ಬೇಡ... ಪ್ರತ್ಯೇಕ ಕಾನೂನು ಬೇಕು
Tahawwur Rana: ಭಯೋತ್ಪಾದಕರಿಗೆ ಸೆಲ್ ಫೋನ್, ಬಿರಿಯಾನಿ ನಿಷೇಧ ಮಾಡುವ ಪ್ರತ್ಯೇಕ ಕಾನೂನು ಬೇಕು ಎಂದು 26/11 ಮುಂಬೈ ದಾಳಿಯ ಹೀರೋ ಮುಂಬೈನ ಚಾಯ್ ವಾಲಾ ಅಕಾ ಮೊಹಮ್ಮದ್ ತೌಫಿಕ್ ಹೇಳಿದ್ದಾರೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಹಾವ್ವುರ್ ಹುಸೇನ್ ರಾಣಾನನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದ್ದು, ಆತನನ್ನು ಕರೆ ತರಲಾಗುತ್ತಿದೆ ಎನ್ನುವ ವಿಚಾರ ತಿಳಿದು ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.


ಮುಂಬೈ: ಭಯೋತ್ಪಾದಕರಿಗೆ ಸೆಲ್ ಫೋನ್, ಬಿರಿಯಾನಿ ನಿಷೇಧ ಮಾಡುವ ಪ್ರತ್ಯೇಕ ಕಾನೂನು ಬೇಕು ಎಂದು 26/11 ಮುಂಬೈ ದಾಳಿಯ ಹೀರೋ ಮುಂಬೈನ ಚಾಯ್ ವಾಲಾ ಅಕಾ ಮೊಹಮ್ಮದ್ ತೌಫಿಕ್ ಹೇಳಿದ್ದಾರೆ. ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಹಾವ್ವುರ್ ಹುಸೇನ್ ರಾಣಾ(Tahawwur Rana)ನನ್ನು ಅಮೆರಿಕ ಭಾರತಕ್ಕೆ ಹಸ್ತಾಂತರಿಸಿದ್ದು, ಆತನನ್ನು ಕರೆ ತರಲಾಗುತ್ತಿದೆ ಎನ್ನುವ ವಿಚಾರ ತಿಳಿದು ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಸಮಯದಲ್ಲಿ ಹಲವಾರು ಮಂದಿಯ ಜೀವ ಉಳಿಸಿದ 'ಚಾಯ್ ವಾಲಾ' ಅಕಾ ಮೊಹಮ್ಮದ್ ತೌಫಿಕ್, ಮುಂಬೈ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಲ್ಲಿ ಒಬ್ಬನಾದ ಅಜ್ಮಲ್ ಕಸಬ್‌ಗೆ ಒದಗಿಸಲಾದ ಸೆಲ್, ಬಿರಿಯಾನಿ ಮತ್ತು ಇತರ ಸೌಲಭ್ಯಗಳನ್ನು ಭಾರತವು ತಹವ್ವುರ್ ರಾಣಾಗೆ ಒದಗಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಭಯೋತ್ಪಾದಕರನ್ನು ಎದುರಿಸಲು ಪ್ರತ್ಯೇಕ ಕಾನೂನುಗಳನ್ನು ರೂಪಿಸಬೇಕು. ಭಯೋತ್ಪಾದಕರಿಗೆ ಪ್ರತ್ಯೇಕ ಕಾನೂನು ಬೇಕು, 2- 3 ತಿಂಗಳೊಳಗೆ ಅವರನ್ನು ಗಲ್ಲಿಗೇರಿಸುವಂತಹ ವ್ಯವಸ್ಥೆ ಇರಬೇಕು ಎಂದು ಅವರು ತಿಳಿಸಿದ್ದಾರೆ. ಮುಂಬೈ ಅಪರಾಧ ವಿಭಾಗದ ಪ್ರಕಾರ, 2008ರ ನವೆಂಬರ್ ನಲ್ಲಿ ನಡೆದ ಮುಂಬೈ ದಾಳಿಯಲ್ಲಿ ಭಾಗಿಯಾಗಿರುವ ರಾಣಾ ವಿರುದ್ಧ ದೆಹಲಿಯಲ್ಲಿ ಎನ್ ಐಎ ಪ್ರಕರಣ ದಾಖಲಿಸಿತ್ತು. ಈ ಘಟನೆಯಲ್ಲಿ 160 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಇದನ್ನೂ ಓದಿ: Tahawwur Rana:166 ಜನರನ್ನು ಬಲಿಪಡೆದ ನರಹಂತಕ ತಹಾವ್ವುರ್ ರಾಣಾ ಹಿನ್ನೆಲೆ ಏನು?
ಮುಂಬೈ ದಾಳಿಗಳಿಗೆ ಸಂಬಂಧಿಸಿದ ಯಾವುದೇ ಸ್ಥಳೀಯ ತನಿಖೆಗಾಗಿ ಮುಂಬೈ ಪೊಲೀಸರು ಆತನನ್ನು ಕಸ್ಟಡಿಗೆ ಪಡೆಯಬಹುದೇ ಎನ್ನುವ ಕುರಿತು ಇನ್ನೂ ನಿರ್ಧರಿಸಲಾಗಿಲ್ಲ. ಆಧಾರಗಳನ್ನು ಪರಿಶೀಲಿಸಿದ ಅನಂತರವೇ ಈ ವಿಷಯದಲ್ಲಿ ಮುಂಬೈ ಅಪರಾಧ ವಿಭಾಗದವರು ಕಸ್ಟಡಿಗೆ ಪಡೆಯಬಹುದೇ ಎಂಬುದು ಸ್ಪಷ್ಟವಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ರಾಣಾನನ್ನು ವಿಚಾರಣೆಗಾಗಿ ಅಥವಾ ನ್ಯಾಯಾಂಗ ಪ್ರಕ್ರಿಯೆಗಳಿಗಾಗಿ ನಗರಕ್ಕೆ ವರ್ಗಾಯಿಸುವ ಬಗ್ಗೆ ಮುಂಬೈ ಪೊಲೀಸರಿಗೆ ಇದುವರೆಗೆ ಯಾವುದೇ ಸಂದೇಶ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.