Tahawwur Rana:166 ಜನರನ್ನು ಬಲಿಪಡೆದ ನರಹಂತಕ ತಹಾವ್ವುರ್ ರಾಣಾ ಹಿನ್ನೆಲೆ ಏನು?
Tahawwur Rana:ತಹವ್ವುರ್ ರಾಣಾ ವಿರುದ್ಧ ರಾಷ್ಟ್ರೀ ತನಿಖಾ ಸಂಸ್ಥೆ(NIA)2008ರ ಮುಂಬೈ ಉಗ್ರ ದಾಳಿ(26/11 Mumbai terror attacks)ಗೆ ಸಂಚು ರೂಪಿಸಿದ ಆರೋಪದ ಮೇಲೆ ಪ್ರಕರಣ ದಾಳಿಸಿದೆ. ಇನ್ನು ರಾಣಾನನ್ನು ಭಾರತಕ್ಕೆ ಕರೆ ತರುತ್ತಿರುವ ಎನ್‌ಐಎ ಆತನನ್ನು ಇಂದೇ ದೆಹಲಿ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಹಾಗಿದ್ದರೆ ಈ ತಹವ್ವುರ್ ರಾಣಾ ಯಾರು? ಈತನ ಹಿನ್ನೆಲೆ ಏನು? ಇಲ್ಲಿದೆ ಡಿಟೇಲ್ಸ್


ನವದೆಹಲಿ: ಒಂದಲ್ಲ ಎರಡರಲ್ಲ ಬರೋಬ್ಬರಿ 166ಜನರನ್ನು ಬಲಿ ಪಡೆದ ನರಹಂತಕ, ಉಗ್ರ ತಹಾವ್ವುರ್ ರಾಣಾ(Tahawwur Rana)ಇನ್ನೇನು ಕೆಲವೇ ಕ್ಷಣದಲ್ಲಿ ಭಾರತಕ್ಕೆ ಬಂದಿಳಿಯಲಿದ್ದಾನೆ. ಬರೋಬ್ಬರಿ 17 ವರ್ಷಗಳ ಕಾಲ ಭಾರತ ನಡೆಸಿದ ಸತತ ಪ್ರಯತ್ನದ ಫಲವಾಗಿ ಕೊನೆಗೂ ಅಮೆರಿಕರಿಂದ ಗಡಿಪಾರಾಗಿರುವ ರಾಣಾ ಮಧ್ಯಾಹ್ನದ ಹೊತ್ತಿಗೆ ಭಾರತದಲ್ಲಿ ಲ್ಯಾಂಡ್ ಆಗಲಿದ್ದಾನೆ. ಅಮೆರಿಕದಲ್ಲಿ ಕಾನೂನು ಸಮರ ಸೋತಿರುವ ರಾಣಾನನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ. ರಾಣಾ ವಿರುದ್ಧ ರಾಷ್ಟ್ರೀ ತನಿಖಾ ಸಂಸ್ಥೆ(NIA)2008ರ ಮುಂಬೈ ಉಗ್ರ ದಾಳಿ(26/11 Mumbai terror attacks)ಗೆ ಸಂಚು ರೂಪಿಸಿದ ಆರೋಪದ ಮೇಲೆ ಪ್ರಕರಣ ದಾಳಿಸಿದೆ. ಇನ್ನು ರಾಣಾನನ್ನು ಭಾರತಕ್ಕೆ ಕರೆ ತರುತ್ತಿರುವ ಎನ್‌ಐಎ ಆತನನ್ನು ಇಂದೇ ದೆಹಲಿ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ. ಹಾಗಿದ್ದರೆ ಈ ತಹಾವ್ವುರ್ ರಾಣಾ ಯಾರು? ಈತನ ಹಿನ್ನೆಲೆ ಏನು? ಇಲ್ಲಿದೆ ಡಿಟೇಲ್ಸ್
ತಹಾವ್ವುರ್ ರಾಣಾ ಯಾರು?
ತಹಾವ್ವುರ್ ಹುಸೇನ್ ರಾಣಾ ಜನವರಿ 12, 1961 ರಂದು ಪಾಕಿಸ್ತಾನದ ಪಂಜಾಬ್‌ನ ಚಿಚಾವತ್ನಿಯಲ್ಲಿ ಜನಿಸಿದ್ದು, ಆತ ಕ್ಯಾಡೆಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ್ದ. ಕ್ಯಾಡೆಟ್ ಕಾಲೇಜಿನಲ್ಲಿ ಅಲ್ಲಿ ಅವರು 26/11 ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಸಹ-ಸಂಚುಕೋರ ಡೇವಿಡ್ ಹೆಡ್ಲಿ ಜೊತೆ ನಿಕಟ ಸಂಪರ್ಕ ಬೆಳೆದಿತ್ತು. ಕಾಲೇಜು ವಿದ್ಯಾಭ್ಯಾಸ ಮುಗಿದ ನಂತರ ರಾಣಾ ಪಾಕಿಸ್ತಾನ ಸೇನಾ ವೈದ್ಯಕೀಯ ದಳಕ್ಕೆ ಸೇರಿದ್ದ ಮತ್ತು ಕ್ಯಾಪ್ಟನ್-ಜನರಲ್ ಡ್ಯೂಟಿ ಪ್ರಾಕ್ಟೀಷನರ್ ಆಗಿ ಸೇವೆ ಸಲ್ಲಿಸಿದ. 1997 ರಲ್ಲಿ, ಮಿಲಿಟರಿಯನ್ನು ತೊರೆದ ಆತ ವೈದ್ಯೆ ಪತ್ನಿಯೊಂದಿಗೆ ಕೆನಡಾಕ್ಕೆ ತೆರಳಿದ್ದ. ರಾಣಾ ಮತ್ತು ಅವರ ಪತ್ನಿ ಇಬ್ಬರೂ 2001 ರಲ್ಲಿ ಕೆನಡಾದ ಪೌರತ್ವ ಪಡೆದಿದ್ದರು.
ನಂತರ ಚಿಕಾಗೋ, ನ್ಯೂಯಾರ್ಕ್ ಮತ್ತು ಟೊರೊಂಟೊದಲ್ಲಿ ಫಸ್ಟ್ ವರ್ಲ್ಡ್ ಇಮಿಗ್ರೇಷನ್ ಸರ್ವೀಸಸ್ ಸೇರಿದಂತೆ ಹಲವಾರು ವ್ಯವಹಾರಗಳನ್ನು ಪ್ರಾರಂಭಿಸಿದ. ಅಲ್ಲದೇ 'ಹಲಾಲ್ ಕಸಾಯಿಖಾನೆ'ಯನ್ನೂ ಸಹ ಸ್ಥಾಪಿಸಿದರು. ರಾಣಾ ಕೆನಡಾದ ಒಟ್ಟಾವಾದಲ್ಲಿ ಒಂದು ಮನೆಯನ್ನು ಹೊಂದಿದ್ದಾನೆ. ಅಲ್ಲಿ ಆತನ ತಂದೆ ಮತ್ತು ಸಹೋದರ ವಾಸಿಸುತ್ತಿದ್ದಾರೆ. ಆತನ ತಂದೆ ಲಾಹೋರ್ ಬಳಿಯ ಶಾಲೆಯಲ್ಲಿ ಪ್ರಾಂಶುಪಾಲರಾಗಿದ್ದರು, ಮತ್ತು ಅವರ ಸಹೋದರರಲ್ಲಿ ಒಬ್ಬರು ಪಾಕಿಸ್ತಾನಿ ಮಿಲಿಟರಿಯಲ್ಲಿ ಮನೋವೈದ್ಯರಾಗಿದ್ದಾನೆ. ಮತ್ತೊಬ್ಬ ಕೆನಡಾದ ರಾಜಕೀಯ ಪತ್ರಿಕೆಯ ಪತ್ರಕರ್ತರಾಗಿದ್ದಾನೆ.
64 ವರ್ಷದ ಈತ 2005 ರಲ್ಲಿ ಪ್ರವಾದಿ ಮುಹಮ್ಮದ್ ಅವರ ವ್ಯಂಗ್ಯಚಿತ್ರಗಳನ್ನು ಪ್ರಕಟಿಸಿದ್ದಕ್ಕಾಗಿ ಡ್ಯಾನಿಶ್ ಪತ್ರಿಕೆ ಜಿಲ್ಯಾಂಡ್ಸ್-ಪೋಸ್ಟನ್ ಅನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಸಂಚಿನಲ್ಲಿ ಭಾಗಿಯಾಗಿದ್ದ. ಕೋಪನ್ ಹ್ಯಾಗನ್ ನಲ್ಲಿ ಪತ್ರಿಕೆಯ ಸಿಬ್ಬಂದಿಯ ಶಿರಚ್ಛೇದ ಮಾಡಿ ಅವರ ತಲೆಗಳನ್ನು ಬೀದಿಗೆ ಎಸೆಯುವ ಗುರಿಯನ್ನು ಹೊಂದಿತ್ತು. ಡೇವಿಡ್ ಹೆಡ್ಲಿಯೊಂದಿಗೆ ರಾಣಾ ಈ ಸಂಚಿನಲ್ಲಿ ಕೆಲಸ ಮಾಡಿದ್ದ. ಹೆಡ್ಲಿಯನ್ನು ಬಂಧಿಸಿದ ನಂತರ ದಾಳಿ ನಡೆಯಲು ಸಾಧ್ಯವಾಗಲಿಲ್ಲ.
26/11 ದಾಳಿಯನ್ನು ಯೋಜಿಸಲು ಬಳಸಲಾಗುವ ಮುಂಬೈನಲ್ಲಿ ಮುಂಭಾಗದ ಕಚೇರಿಯನ್ನು ಸ್ಥಾಪಿಸಲು ರಾಣಾ ಹೆಡ್ಲಿಗೆ ಸಹಾಯ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. NIA ಚಾರ್ಜ್‌ಶೀಟ್ ಪ್ರಕಾರ, 166 ಜನರನ್ನು ಬಲಿತೆಗೆದುಕೊಂಡ 2008 ರ ಮುಂಬೈ ಭಯೋತ್ಪಾದಕ ದಾಳಿಗೆ ರಾಣಾ ಲಾಜಿಸ್ಟಿಕಲ್ ಮತ್ತು ಆರ್ಥಿಕ ಬೆಂಬಲವನ್ನು ಒದಗಿಸಿದ್ದಾನೆ. ಆತನನ್ನು 2009 ರಲ್ಲಿ ಅಮೆರಿಕದಲ್ಲಿ ಅರೆಸ್ಟ್ ಮಾಡಲಾಗಿತ್ತು.
ಈ ಸುದ್ದಿಯನ್ನೂ ಓದಿ: Tahawwur Rana: ತಹವ್ವುರ್ ರಾಣಾ ಭಾರತಕ್ಕೆ ಬಂದ ಬಳಿಕ ನಡೆಯುವ ಪ್ರಕ್ರಿಯೆ ಹೇಗಿರುತ್ತೆ ಗೊತ್ತೆ? ಇಲ್ಲಿದೆ ಡಿಟೇಲ್ಸ್!
2024ರಲ್ಲೇ ಆಗಬೇಕಿತ್ತು ಹಸ್ತಾಂತರ
2024ರಲ್ಲಿಯೇ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾನನ್ನು ಹಸ್ತಾಂತರ ಮಾಡಲಾಗುತ್ತದೆ ಎಂಬ ಮಾಹಿತಿ ಇತ್ತು. ಆದರೆ ಈ ಪ್ರಕ್ರಿಯೆಗಳನ್ನು ಕೈಗೊಳ್ಳಲು ಅಮೆರಿಕ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿರಲಿಲ್ಲ. ಡಿಸೆಂಬರ್‌ನಲ್ಲಿ ಭಾರತಕ್ಕೆ ತಹವ್ವುರ್ ಹುಸೇನ್ ರಾಣಾನನ್ನು ಕರೆತರಲಾಗುತ್ತದೆ ಎಂದು ಮುಂಬೈನ ಜೈಲಿನಲ್ಲಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಗಡಿಪಾರು ಮಾಡದಂತೆ ಕೋರಿ ತಹವ್ವುರ್ ಹುಸೇನ್ ರಾಣಾ ಸಲ್ಲಿಕೆ ಮಾಡಿದ್ದ ಮನವಿಯನ್ನು ಕೋರ್ಟ್ ವಜಾಗೊಳಿಸಿತ್ತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಭಾರತಕ್ಕೆ ಹಸ್ತಾಂತರ ಮಾಡಲು ಅವಕಾಶವಿದೆ ಎಂದು ಹೇಳಿತ್ತು.
ತಹವ್ವುರ್ ಹುಸೇನ್ ರಾಣಾ ವಿರುದ್ಧ ಅಮೆರಿಕದಲ್ಲಿಯೂ ಹಲವು ಪ್ರಕರಣಗಳ ವಿಚಾರಣೆ ನಡೆದಿದೆ. 2008ರ ಮುಂಬೈ ಭಯೋತ್ಪಾದಕ ದಾಳಿಯ ಕುರಿತು ತನಿಖೆ ಕೈಗೊಂಡಿದ್ದ ಎನ್‌ಐಎ ತಹವ್ವುರ್ ಹುಸೇನ್ ರಾಣಾ ಸೇರಿದಂತೆ ಇತರ 9 ಮಂದಿ ದಾಳಿಗೆ ಯೋಜನೆ ರೂಪಿಸಿದ ಆರೋಪ ಮಾಡಿತ್ತು. ಇದು ಕೋರ್ಟ್‌ನಲ್ಲಿಯೂ ಸಾಬೀತಾಗಿತ್ತು.ಮುಂಬೈ ದಾಳಿಯ ಸಂಚು ಆರೋಪದ ಮೇಲೆ ಅಮೆರಿಕದಲ್ಲಿ ತಹವ್ವುರ್ ಹುಸೇನ್ ರಾಣಾನನ್ನು ಬಂಧಿಸಲಾಗಿತ್ತು. ಎನ್‌ಐಎ ತಹವ್ವುರ್ ಹುಸೇನ್ ರಾಣಾ ವಿರುದ್ಧ ಅಂತರಾಷ್ಟ್ರೀಯ ಬಂಧನದ ವಾರೆಂಟ್ ಅನ್ನು ಹೊರಡಿಸಿತ್ತು. ಮಾಹಿತಿಗಳ ಪ್ರಕಾರ ರಾಣಾ ತನ್ನ ಪಾಕಿಸ್ತಾನದ ಬಾಲ್ಯ ಸ್ನೇಹಿತ ಅಮೆರಿಕನ್ ಡೇವಿಡ್ ಕೋಲ್‌ಮನ್ ಹೆಡ್ಲಿ ಜೊತೆ ಸೇರಿಕೊಂಡು ಈ ಕೃತ್ಯದ ಯೋಜನೆ ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ.