Sunday, 8th September 2024

ಕ್ರಿಪ್ಟೋಕ್ಕೊಂದು ಕಡಿವಾಣ ನೀತಿ ಎಂದು ?

ಜಗತ್ತು ಕ್ರಿಪ್ಟೋ ಕರೆನ್ಸಿಯ ಹಿಂದೆ ದುಂಬಾಲು ಬಿದ್ದಿದೆ, ಅದರಲ್ಲೂ ಭಾರತೀಯರು ಇತ್ತೆಚೆಗೆ ಅತಿ ಹೆಚ್ಚು ಕ್ರಿಪ್ಟೋ ಕರೆನ್ಸಿಯ ವ್ಯವಹಾರಗಳಲ್ಲಿ ವತ್ತು ಟ್ರೇಡಿಂಗ್ ಗಳಲ್ಲಿ ತೊಡಗಿಕೊಂಡಿರುವುದು ಗಮನಾರ್ಹ, ಅಮೆರಿಕ, ಚೀನಾ ದೇಶಗಳ ನಂತರದ ಸ್ಥಾನ ದಲ್ಲಿರುವ ಭಾರತ ದಿನಕ್ಕೆ ಮಿಲಿಯನ್ ಡಾಲರ್‌ಗಳಷ್ಟು ಕ್ರಿಪ್ಟೋ ವಹಿವಾಟು ನಡಿಸುತ್ತಿದೆ, coindcx, ಕಾಯಿನ್ ಸ್ವಿಚ್ ಕುಬೇರ್‌ ನಂತಹ ಭಾರತೀಯ ಕ್ರಿಪ್ಟೋ ಸ್ಟಾರ್ಟಅಪ್‌ಗಳು ಇವತ್ತು ಯುನಿಕಾರ್ನ್ ಸಂಸ್ಥೆಗಳಾಗಿ ಹೊರಹೊಮ್ಮಿದೆ ಇಷ್ಟಾದರೂ ಭಾರತ ಕ್ರಿಪ್ಟೋ ನೀತಿಯನ್ನ ಹೊಂದದಿರುವುದು ಗಣನೀಯ ವಿಷಯ.

ಜನರು ಅತಿ ಆಸೇಗೆ ಬಿದ್ದು ಸಿಕ್ಕ ಸಿಕ್ಕ ಕ್ರಿಪ್ರೋ ಕರೆನ್ಸಿಗಳಲ್ಲಿ ಹಣ ವಿನಿಯೋಗಿಸುತ್ತಿzರೆ. ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿಗಳ ಹೆಸರಲ್ಲಿ ವಂಚನೆ ಹೆಚ್ಚಾಗುತ್ತಿದೆ, ಟವರ್ ಎಕ್ಸ್ಚೆಂಜ್ ಹೆಸರಿ ನಲ್ಲಿ ಕರ್ನಾಟಕ ಹಾಗೂ ಭಾರತದ ಮೂಲೆ ಮೂಲೆಗಳಲ್ಲಿ ಭಾರಿ ಪ್ರಮಾಣದ ಹಣ ಸಂಗ್ರಹಣೆ ಮಾಡಿ ಮೋಸಮಾಡಲಾಗಿತ್ತು, ಇದಲ್ಲದೆ ಇತ್ತೆಚೆಗೆ ಕ್ರಿಪ್ಟೋ ಹೆಸರಿನಲ್ಲಿ ಅನೇಕ ವಂಚನೆಗಳು ನಡೆಯುತ್ತಿದ್ದು ಮುಗ್ಧ ಮಂದಿ ಬಲಿಪಶುಗಳಾಗುತ್ತಿದ್ದಾರೆ.

ಭಾರತ ಸರಕಾರ ಕ್ರಿಪ್ರೋ ಕರೆನ್ಸಿಗಳನ್ನ ನಿಷೇಽಸಿದಲ್ಲಿ ಅಥವಾ ನಿರ್ಬಂಧಿಸಿದಲ್ಲಿ ಭಾರತ ಸಾವಿರಾರು ಕೋಟಿಗಳಷ್ಟು ಮೌಲ್ಯದ ಸ್ಟಾರ್ಟಅಪ್‌ಳನ್ನ ಕಳೆದುಕೊಳ್ಳುತ್ತಲ್ಲದೆ, ಅನೇಕ ಜನರು ಹಣ ಕಳೆದುಕೊಳ್ಳುತ್ತಾರೆ ಅದಲ್ಲದೆ ಭಾರತ ಬ್ಲಾಕ್‌ಚೈನ್ ಟೆಕ್ನಾಲಜಿ ಯಲ್ಲಿ ಆರು ವರ್ಷಗಳಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ ಎನ್ನುತ್ತಾರೆ ತಜ್ಞರು. ಇಷ್ಟಾಗ್ಯೂ ಭಾರತ ಸರಿಯಾಗಿ ಕ್ರಿಪ್ಟೋ ಕರೆನ್ಸಿಯ ಮೇಲೆ ಯಾವುದೆ ನಿರ್ದಾರ ತೆಗೆದುಕೊಳ್ಳದಿರುವುದು ನಿಜಕ್ಕೂ ಶೋಚನೀಯ, ಇತ್ತೆಚೆಗೆ ಎಲ್ ಸಲ್ವಾರ್ಡಾ ಎನ್ನುವ ದೇಶ ಬಿಟ್ಕಾಯಿನ್ ಅನ್ನು ಒಪ್ಪಿಕೊಂಡ ಜಗತ್ತಿನ ಮೊದಲ ದೇಶವಾಗಿ ಹೊರಹೊಮ್ಮಿತ್ತು ಇದರಬೆನ್ನ ಬ್ರಾಜಿಲ, ಉಕ್ರೇನ್ ತಮ್ಮ ನೀತಿ ಸಡಿಲಗೊಳಿಸಿವೆ.

ಭಾರತವೂ ಇಂತಹುದೆ ನಿರ್ದಾರಕ್ಕೆ ಬಂದು ಕ್ರಿಪ್ಟೋ ಹೆಸರಲ್ಲಿ ನಡೆಯುವ ಮೋಸಕ್ಕೆ ಕಡಿವಾಣ ಹಾಕಿ ಹೊಸ ಬಗೆಯ ಆರ್ಥಿ ಕತೆಯನ್ನ ಅಪ್ಪಿಕೊಳ್ಳಬೇಕಿದೆ.

-ಬೊಳ್ಳಮ್ಮ, ಮಡಿಕೇರಿ ಸಂಶೋಧನಾ ವಿದ್ಯಾರ್ಥಿ

*
ಅಭಿಮಾನವಿರಲಿ ಪ್ರಾಣಕ್ಕೆ ಸಂಚಕಾರ ಬೇಡ
ಕುವೆಂಪುರವರ ಈ ಸಾಲುಗಳು- ಶೋಕವಿರುವುದು ಪ್ರದರ್ಶನ ಕ್ಕಾಗಿಯೇ? ಆತನಿಗೆ ಸಂತೋಷವಾಗುವ ರೀತಿಯಲ್ಲಿ ಬಾಳಿದರೆ ಆತನು ನಮಗೆ ದೊರಕದೆ ಹೋದಾನೇ? ನೆನಪಾಗುತ್ತಿದೆ ಏಕೆಂದರೇ ಪುನೀತ್ ರಾಜ್ ಕುಮಾರ್ ಅವರು ನಿಧನರಾದ ಸುದ್ದಿ ಕೇಳಿ ಅವರ ಅಭಿಮಾನಿಗಳು ಒಂದಿಬ್ಬರು ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದಾಗ ನೆಚ್ಚಿನ ನಟನ ಮೇಲಿನ ಅಭಿಮಾನವನ್ನು
ವ್ಯಕ್ತಪಡಿಸಲು ಆತ್ಮಹತ್ಯೆಯೊಂದೇ ಮಾರ್ಗವೇ? ಹಾಗೆ ನೋಡಿದರೆ ಪುನೀತ್ ಈ ಸಮಾಜದ ಬಗೆಗೆ ಅತ್ಯಂತ ಕಾಳಜಿಯನ್ನು ಹೊಂದಿದ್ದ ವ್ಯಕ್ತಿ.

ನಿಜವಾಗಿಯೂ ಅವರ ಮೇಲಿನ ಅಭಿಮಾನವನ್ನು ಅವರ ಅಭಿಮಾನಿಗಳು ಸಮಾಜಕ್ಕೆ ನಾಲ್ಕು ಒಳ್ಳೆ ಕೆಲಸಗಳನ್ನು ಮಾಡುವು ದರ ಮೂಲಕ ಇನ್ನೂ ಉತ್ತಮ ರೀತಿಯಲ್ಲಿ ವ್ಯಕ್ತಪಡಿಸಬಹುದಿತ್ತು. ಇದು ಪುನೀತ್ ಅವರ ಆತ್ಮಕ್ಕೆ ಸಂತೋಷ ತರುವಂತಹ ಕೆಲಸ. ಕುವೆಂಪು ಅವರು ಹೇಳಿದ ರೀತಿ ನಡೆದುಕೊಂಡು ತಮ್ಮ ನೆಚ್ಚಿನ ನಟನಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸಬೇಕು.
-ಹನುಮಂತ ಗುಡ್ಡದ ಬೆಳಗಾವಿ 

*
ರಾಜ್ಯೋತ್ಸವ ಪ್ರಶಸ್ತಿಯ ಆಯ್ಕೆಯ ಕ್ರಮ ಸ್ವಾಗತಾರ್ಹ
ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಅಗತ್ಯ ಇಲ್ಲ, ಆಯ್ಕೆ ಸಮಿತಿಯೇ ಸಾಧಕರನ್ನು ಗುರುತಿಸುತ್ತದೆ ಎಂಬುದನ್ನು ತಿಳಿದು ಹರ್ಷವಾಯಿತು. ಸ್ವಾಭಿಮಾನವುಳ್ಳ ಯಾವೊಬ್ಬ ಸಾಧಕನೂ ನನಗೆ ಪ್ರಶಸ್ತಿ ಕೊಡಿ’ ಎಂದು ಅರ್ಜಿ ಸಲ್ಲಿಸಲು ಇಷ್ಟ ಪಡುವು ದಿಲ್ಲ. ತನ್ನ ಸಾಧನೆಯನ್ನು ತಾನೇ ಬಿಂಬಿಸಿ ಅದನ್ನು ಅರ್ಜಿ ರೂಪದಲ್ಲಿ ಸಲ್ಲಿಸಲು ಕೆಲವರಿಗೆ ಮುಜುಗರ ಎನಿಸುತ್ತಿತ್ತು. ಆ ದಿಸೆಯಲ್ಲಿ ಸರಕಾರ ಕೈಗೊಂಡಿರುವ ಕ್ರಮ ಸ್ವಾಗತಾರ್ಹ.
-ಜಗದೀಶ್, ಬೆಂಗಳೂರು

*
ಪುನೀತ್‌ಗೆ ’ಕರ್ನಾಟಕ ಯುವರತ್ನ’ ಪ್ರಶಸ್ತಿ ನೀಡಿ
ಯುವಜನರಿಗೆ ಸೂರ್ತಿಯಾಗಿದ್ದ ಪುನೀತ್ ರಾಜ್ ಕುಮಾರ್ ಭೌತಿಕವಾಗಿ ಕಣ್ಮರೆಯಾಗಿದ್ದಾರೆ. ಆದರೆ ತಮ್ಮ ಸಮಾಜಮುಖಿ ಕೆಲಸಗಳಿಂದ, ಅಭಿನಯ, ನೃತ್ಯ, ಗಾಯನ, ವ್ಯಾಯಾಮ, ಸಿನಿಮಾ ನಿರ್ಮಾಣ, ಆಹಾರಸೇವನೆಯ ಶಿಸ್ತಿನಿಂದಾಗಿ ಕೋಟ್ಯಂತರ ಯುವಕರ ಪಾಲಿನ ಆದರ್ಶವಾಗಿದ್ದಾರೆ. ಅನಾಥಾಶ್ರಮ, ವೃದ್ಧಾಶ್ರಮ, ಶಾಲಾ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತು ಮತ್ತು ಸರ್ಕಾರದ ಸುಧಾರಣಾ ಕಾರ್ಯಕ್ರಮಗಳ ರಾಯಭಾರಿಯಾಗಿ ಆಡಳಿತ ವ್ಯವಸ್ಥೆಗೆ ಬಲ ತುಂಬಿದ್ದರು.

ಕನ್ನಡ ನಾಡಿನ ನೆಲ, ಜಲ ವನ್ಯಜೀವಿ ವೈವಿಧ್ಯ ಮತ್ತು ಸಂರಕ್ಷಣೆಯ ಕುರಿತು ಸಾಕ್ಷ್ಯಚಿತ್ರವನ್ನು ನಿರ್ಮಿಸಿ ಜನರಲ್ಲಿ ಪರಿಸರ ಆಸಕ್ತಿ ಮೂಡಿಸಲು ವಿಶೇಷ ಪ್ರಯತ್ನ ನಡೆಸಿದ್ದರು. ಸದಭಿರುಚಿಯ ಚಿತ್ರಗಳಲ್ಲಿ ನಟಿಸುತ್ತಾ ಅಭಿನಯದಲ್ಲಿ ಮಾಗುತ್ತ, ಕಲಿಯುತ್ತಾ ಕನ್ನಡ ಚಿತ್ರ ಜಗತ್ತಿಗೆ ಹೊಸ ಸಾಧ್ಯತೆಗಳನ್ನು ಪರಿಚಯಿಸುವ ಉತ್ಕಟ ಅಪೇಕ್ಷೆ ಹೊಂದಿದ್ದ ಪುನೀತ್ ಕನ್ನಡ ಸಿನಿಮಾಗಳ ಮಾರುಕಟ್ಟೆಯನ್ನು ಓಟಿಟಿ ವೇದಿಕೆಗೂ ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದರು.

ಅವರ ಅಂತಿಮಯಾತ್ರೆಯನ್ನು ಅತ್ಯಂತ ಶಾಂತಿಯುತವಾಗಿ,  ಗೌರವಯುತವಾಗಿ ನಡೆಸಿಕೊಟ್ಟ ರಾಜ್ಯ ಸರಕಾರವು ಯುವ ಜನರಿಗೆ ಸೂರ್ತಿ ತುಂಬಲು, ಅವರ ಕೆಲಸಗಳನ್ನು ಗುರುತಿಸಲು ಪುನೀತ್ ಹೆಸರಿನಲ್ಲಿ ‘ಕರ್ನಾಟಕ ಯುವರತ್ನ’ ಪ್ರಶಸ್ತಿಯನ್ನು ಸ್ಥಾಪಿಸಬೇಕು.
-ರಷಿತಾ ಕುಬಾಜಿ ಬೆಂಗಳೂರು

Leave a Reply

Your email address will not be published. Required fields are marked *

error: Content is protected !!