Tuesday, 20th February 2024

ಸಂಜನಾ ನಟನೆ ಏನೆಂದು ಜನತೆಗೆ ಗೊತ್ತಿದೆ

ಸ್ಯಾಂಡಲ್‌ವುಡ್ ಡ್ರಗ್‌ಸ್‌ ದಂಧೆಯಲ್ಲಿ ಸಿಕ್ಕಿಹಾಕಿಕೊಂಡ ನಟಿಯರ ಪೈಕಿ ರಾಗಿಣಿ ಈಗಾಗಲೇ ವಿಚಾರಣೆ ಎದುರಿಸುತ್ತಿದ್ದು, ಇನ್ನೊಬ್ಬಾಕೆ ಸಂಜನಾ. ಈ ನಟಿಮಣಿಯರ ಹೇಳಿಕೆಗಳನ್ನು ಟಿಆರ್‌ಪಿಗೋಸ್ಕರ ಮಾಧ್ಯಮಗಳು ದಿನವಿಡೀ ಪ್ರಸಾರಮಾಡಿ ಸಂಜನಾಗೆ ಬಿಟ್ಟಿ ಪ್ರಚಾರ ಕೊಡುತ್ತಿವೆ. ಸದಾ ಒಂದಿಲ್ಲೊಂದು ವಿವಾದಗಳಿಂದ ಗುರುತಿಸಿಕೊಳ್ಳುವ ಸಂಜನಾ ನಟಿ ಎಂಬುವುದು, ಸಂಜನಾ ಚಲನಚಿತ್ರಗಳಲ್ಲಿ ಅಭಿನಯ ಮಾಡುತ್ತಾಳೆಂದು ಕನ್ನಡಿಗರಿಗೆ ಬಹುತೇಕರಿಗೆ ತಿಳಿದಿಲ್ಲ. ಸಂಜನಾ ತನ್ನ ನಟನಾ ಸಾಮರ್ಥ್ಯಕ್ಕಿಿಂತಲೂ ವಿವಾದದಿಂದ ಅಥವಾ ಕ್ರಿಕೆಟಿಗರ, ರಾಜಕಾರಣಿ ಮಕ್ಕಳು, ಉದ್ಯಮಿಗಳ ಮಕ್ಕಳ ಜತೆಗೆ ಡೇಟಿಂಗ್ ಮಾಡಿ
ಪ್ರಚಾರಪಡೆದಿರುವಾಕೆ. ಆಕೆ ಗುರುತಿಸಲ್ಪಡುವುದು ಕೇವಲ ಒಂದೇವೊಂದು ಚಲನಚಿತ್ರದ ಮೂಲಕ.

ಗಂಡ – ಹೆಂಡತಿ ಚಲನಚಿತ್ರ ಕುಟುಂಬ ಸಮೇತವಾಗಿ ನೋಡುವ ಚಿತ್ರವಲ್ಲ, ಟಿವಿಯಲ್ಲಿ ಪ್ರಸಾರವಾದರೂ ರಾತ್ರಿ ಹತ್ತುಗಂಟೆಯ ನಂತರವೇ ಪ್ರಸಾರವಾಗುವ ಚಲನಚಿತ್ರಗಳಲ್ಲೊಂದು. ಈ ಚಲನಚಿತ್ರವಾದ ಮೇಲೆ ಸಂಜನಾ ಗುರುತಿಸಿಕೊಳ್ಳುವ ಚಲನಚಿತ್ರ ದಲ್ಲಿ ಆಕೆ ಕಾಣಿಸಿಕೊಂಡಿಲ್ಲ ಮತ್ತು ಗ್ಲಾಮರ್ ಗೊಂಬೆಯಾಗಿ, ಬಿಚ್ಚಮ್ಮಳಾಗಿ ತೆರೆಮೇಲೆ ಕಾಣಿಸಿಕೊಳ್ಳುವ ನಟಿಗೆ ನಟನೆಯಲ್ಲಿ ಇನ್ನೂ ಮಾಗಬೇಕು. ನಟನೆ ವಿಷಯ ಬಿಟ್ಟುಬಿಡಿ. ಕಳೆದ ವರ್ಷ ಮಿಟೂ ಅಭಿಯಾನದಲ್ಲಿ ಸಂಜನಾ ಗಂಡ – ಹೆಂಡತಿ ನಿರ್ದೇಶಕ ರವಿ ಶ್ರೀವತ್ಸನ ಮೇಲೆ ಆರೋಪ ಮಾಡಿ ಪ್ರಚಾರ ಪಡೆದಿದ್ದಳು.

ಹಿಂದಿ ಸುದ್ದಿವಾಹಿನಿಯೊಂದರ ಪ್ಯಾನಲ್ ಡಿಸ್ಕಷನ್‌ನಲ್ಲಿ ಸುಶಾಂತ ಸಿಂಗ್ ರಾಜಕೀಯ ಅನುಮಾನಾಸ್ಪದ ಸಾವಿನ ಕುರಿತು ನಡೆದ ಚರ್ಚೆಯಲ್ಲಿ, ಇದೇ ಸಂಜನಾ ಲೈವ್ ಡಿಸ್ಕಷನ್ ನಡೆಯುತ್ತಿದ್ದರೂ ತುಟಿಗೆ ಲಿಪಸ್ಟಿಕ್ ಹಚ್ಚಿಕೊಳ್ಳುವುದು, ಮೇಕಪ್ ಮಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದಳು. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟ್ಟಿಗರು ಸಂಜನಾಗೆ ಛೀಮಾರಿ ಹಾಕಿದರು. ಸದಾ ಹೀಗೆ ಒಂದಿಲ್ಲೊಂದು ವಿವಾದದಿಂದ ಪ್ರಚಾರಪಡೆಯುವ ಸಂಜನಾ ತಾನು ಸಾಚಾ ಎಂಬಂತೆ ವರ್ತಿಸುವುದು ಅತಿಶೋಕ್ತಿಯಂತೆ ಕಾಣುತ್ತದೆ. ಈ ಹಿಂದಿನಿಂದಲೂ ವಿವಾದಳಿಂದ ಗುರುತಿಸಲ್ಪಡುವ ಸಂಜನಾ ಹೇಗೆ ಎಂಬುದು ಕರ್ನಾಟಕ ಜನತೆಗೆ ಗೊತ್ತಿದೆ.
-ಶ್ರೀರಂಗ ಪುರಾಣಿಕ

ಸಾಮೂಹಿಕ ಹಲ್ಲೆೆಗಳಿಗೆ ಕೊನೆ ಎಂದು
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಏರಿಕೆ ಆಗುತ್ತಿರುವ ಸಾಮೂಹಿಕ ಹಲ್ಲೆ ಮತ್ತು ಹತ್ಯೆಯ ಅಪರಾಧ ಪ್ರಕರಣಗಳು ನಿರಂತರ ವಾಗಿ ವರದಿಯಾಗುತ್ತಿವೆ. ಇವೆಲ್ಲವೂ ಅಮಾನವೀಯ. ಈ ಬಗೆಯ ಹಲ್ಲೆಗಳನ್ನು ಅಪರಾಧ ಪ್ರವೃತ್ತಿ ಎಂದಷ್ಟೇ ಪರಿಗಣಿಸಲು ಸಾಧ್ಯವಿಲ್ಲ. ಇಂಥ ಮನೋಭಾವವು ಸಾಮಾಜಿಕ ಪಿಡುಗು. ಕಠಿಣವಾದ ಕಾನೂನು ಅಗತ್ಯವೇ ಆದರೂ ಸಾಮಾಜಿಕ ಪಿಡುಗನ್ನು ಕಾಯ್ದೆಯ ಮೂಲಕವಷ್ಟೇ ನಿವಾರಿಸಲು ಸಾಧ್ಯವಿಲ್ಲ ಎಂಬುದು ನಮ್ಮ ಗಮನದಲ್ಲಿರಬೇಕು.

ಧರ್ಮ, ಜಾತಿ, ಪರಂಪರೆ, ಭಾಷೆ ಮುಂತಾದವುಗಳ ಶ್ರೇಷ್ಠತೆಯ ಭ್ರಮೆಯಲ್ಲಿ ಪರಸ್ಪರರನ್ನು ದ್ವೇಷಿಸುವುದು ಅನಾಗರಿಕ ಪ್ರವೃತ್ತಿ ಎಂಬುದನ್ನು ಜನರಿಗೆ ಮನದಟ್ಟು ಮಾಡಿಸುವ ಅಗತ್ಯವೂ ಇದೆ. ಈ ಹಿಂದೆ ಸುಪ್ರೀಂ ಕೋರ್ಟ್, ಗುಂಪು ಹಲ್ಲೆಯ ಸಮೂಹ ಸನ್ನಿಯು ಘೋರ’ ಎಂದು 2018ರ ಜುಲೈನಲ್ಲಿ ಹೇಳಿತ್ತು. ಇದನ್ನು ತಡೆಯಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು,
ಗುಂಪು ಹಲ್ಲೆ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು, ತ್ವರಿತಗತಿ ನ್ಯಾಯಾಲಯಗಳ ಮೂಲಕ ಪ್ರಕರಣ ಶೀಘ್ರವಾಗಿ ಇತ್ಯರ್ಥವಾಗಬೇಕು ಮತ್ತು ಗುಂಪು ಹಲ್ಲೆ ನಡೆಸುವವರಲ್ಲಿ ಭೀತಿ ಮೂಡಿಸಬೇಕು ಎಂದು ಸೂಚಿಸಿತ್ತು.

ಗುಂಪು ಹಲ್ಲೆ ತಡೆಗಾಗಿ ಪ್ರತ್ಯೇಕ ಕಾನೂನು ರಚನೆಯ ಬಗ್ಗೆೆಯೂ ಕೇಂದ್ರ ಯೋಚಿಸಬಹುದು ಎಂಬ ಸಲಹೆ ಕೊಟ್ಟಿತ್ತು. ಸುಪ್ರೀಂ ಕೋರ್ಟ್ ಸಲಹೆ ಮತ್ತು ಮಾರ್ಗದರ್ಶಿ ಸೂತ್ರದ ಬಗ್ಗೆೆ ಕೇಂದ್ರ ಹಾಗೂ ವಿವಿಧ ರಾಜ್ಯ ಸರಕಾರಗಳು ಹೆಚ್ಚು ತಲೆಕೆಡಿಸಿಕೊಂಡಂತೆ
ಕಾಣಿಸುವುದಿಲ್ಲ. ಗುಂಪು ಹಲ್ಲೆ – ಹತ್ಯೆೆಯ ಪ್ರತ್ಯೇಕ ದತ್ತಾಾಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಸಂಗ್ರಹಿಸುತ್ತಿಲ್ಲ. ಆದರೆ, ಇಂಡಿಯಾ ಸ್ಪೆೆಂಡ್ – ಹೇಟ್ ಕ್ರೈಮ್ ಫ್ಯಾಕ್‌ಟ್‌ ಚೆಕ್ ಜಾಲತಾಣವು 2010ರಿಂದ ಈ ದತ್ತಾಾಂಶವನ್ನು ಸಂಗ್ರಹಿಸುವ ಕೆಲಸ ಮಾಡುತ್ತಿದೆ. ಅದರ ಪ್ರಕಾರ, ಕಳೆದ ಎಂಟು ವರ್ಷಗಳಲ್ಲಿ ಇಂಥ 133 ಪ್ರಕರಣಗಳು ವರದಿಯಾಗಿವೆ. 50 ಮಂದಿ ಹತ್ಯೆೆಯಾಗಿದ್ದರೆ, 340 ಮಂದಿ ಇದರ ಸಂತ್ರಸ್ತರು. ಈ ವಿದ್ಯಮಾನವು ಯಾವುದೋ ಒಂದು ರಾಜ್ಯ ಅಥವಾ ಪ್ರದೇಶಕ್ಕೆ
ಸೀಮಿತವಲ್ಲ ಎಂಬುದನ್ನೂ ಈ ದತ್ತಾಾಂಶಗಳು ಹೇಳುತ್ತವೆ. ಮುಸ್ಲಿಮರ ವಿರುದ್ಧ ಶೇ.57ರಷ್ಟು, ದಲಿತರ ವಿರುದ್ಧ ಶೇ.9ರಷ್ಟು ಗುಂಪು ಹಲ್ಲೆ ಪ್ರಕರಣಗಳು ನಡೆದಿವೆ. ಗುಂಪು ಹಲ್ಲೆಗಳ ಪೈಕಿ ಶೇ 57.8ರಷ್ಟು ಪ್ರಕರಣಗಳು ವರದಿಯಾಗಿವೆ. ಈ ವಿದ್ಯಮಾನವು ಯಾವುದೋ ಒಂದು ರಾಜ್ಯ ಅಥವಾ ಪ್ರದೇಶಕ್ಕೆ ಸೀಮಿತವಲ್ಲ ಎಂಬುದನ್ನೂ ಈ ದತ್ತಾಾಂಶಗಳು ಹೇಳುತ್ತವೆ. ದೇಶದಲ್ಲಿ ಗುಂಪು ಹಲ್ಲೆೆ ಮತ್ತು ಹತ್ಯೆೆಗಳಿಗೆ ಕೊನೆ ಎಂದು ಎನ್ನುವಂತಾಗಿದೆ. ಇನ್ನಾದರೂ ಸರಕಾರವು ಎಚ್ಚೆತ್ತುಕೊಂಡು ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೂಂಡು ಗುಂಪು ಹತ್ಯೆಗಳಿಗೆ ಕಡಿವಾಣ ಹಾಕಬೇಕು.
-ಬಿ.ಆರ್. ಸಂತೋಷ ಜಾಬೀನ್ ಸುಲೇಪೇಟ

Leave a Reply

Your email address will not be published. Required fields are marked *

error: Content is protected !!