Saturday, 27th July 2024

ಸಹಿಷ್ಣುತೆಯ ಭಾವ ಬಿತ್ತಿದವರನ್ನು ನೆನೆಯೋಣ

ರಾಜಕೀಯ ಪಕ್ಷಗಳು ಮತಬ್ಯಾಾಂಕ್ ಸೃಷ್ಟಿಸಿಕೊಳ್ಳಲು ಅಥವಾ ಛಿದ್ರ ಮಾಡಲು ಜನರು ನಂಬಿರುವ ಧಾರ್ಮಿಕ ಭಾವನೆಗಳನ್ನು ದಾಳವಾಗಿ ಬಳಸಿಕೊಳ್ಳುವುದು ಇಂದು ನಿನ್ನೆೆಯ ಕೃತ್ಯವಲ್ಲ. ಒಂದು ಪಕ್ಷ ಅಧಿಕಾರಕ್ಕೆೆ ಬಂದು, ಒಂದು ಜಯಂತಿ ಆಚರಣೆಗೆ ತರುವುದು; ಕಾಲಾಂತರದಲ್ಲಿ ಮತ್ತೊೊಂದು ಪಕ್ಷ ಅಧಿಕಾರಕ್ಕೆ ಬಂದು ಆ ಆಚರಣೆ ರದ್ದು ಮಾಡುವುದು. ಈ ರೀತಿಯ ರಾಜಕೀಯ ದೊಂಬರಾಟದಲ್ಲಿ ಮೂಕ ಪ್ರೇಕ್ಷಕರಾಗಿ ಪ್ರಜೆಗಳು ಮಾತ್ರ, ಯಾವತ್ತೂ ವ್ಯವಸ್ಥೆೆಯ ಬಲಿ ಪಶುಗಳಾಗುತ್ತಾಾರೆ. ಒಂದೆಡೆ ಪರೋಕ್ಷವಾಗಿ ಕೋಮು ದಳ್ಳುರಿಗೆ ಪ್ರಚೋದಿಸಿ, ಜನರ ಭಾವನೆಗಳನ್ನು ಕೆರಳಿಸಿ, ಶಾಂತಿ ನೆಮ್ಮದಿಗೆ ಭಂಗ ತಂದು, ಇನ್ನೊೊಂದೆಡೆ ಭ್ರಾಾತೃತ್ವ, ಸಮಾನತೆ ಧಾರ್ಮಿಕ ಸಹಿಷ್ಣುತೆಯ ಮಂತ್ರ ಜಪಿಸುತ್ತಾರೆ.

ಇದು ಒಂದು ರೀತಿಯಲ್ಲಿ ಮಗುವನ್ನು ಚೂಟಿ ಅಳಿಸಿ ತೊಟ್ಟಿಲನ್ನು ತಾವೇ ತೂಗಿದಂತಲ್ಲವೇ?
ನಿಜಕ್ಕೂ ಜಾತ್ಯತೀತ ಮನೋಭಾವದ ಪ್ರಬುದ್ಧ ಮತದಾರ ಈ ರೀತಿಯ ನಾಟಕಗಳನ್ನೆೆಲ್ಲ ನೋಡಿ ರೋಷಿ ಹೋಗಿದ್ದಾನೆ. ರಾಜಕೀಯದ ಈ ತುಷ್ಟೀಕರಣದಿಂದ ಭ್ರಮನಿರಸನಗೊಂಡು ದೂರ ಉಳಿಯುತ್ತಿದ್ದಾನೆ. ಈ ಪರಿಸ್ಥಿಿತಿ ಹೀಗೆ ಮುಂದುವರಿದರೆ, ಮುಂದೆ ರಾಜಕೀಯದ ವ್ಯಾಾಖ್ಯಾಾನವೇ ಬದಲಾಗುವುದು. ಸಮುದಾಯದ ಏಳಿಗೆಗಾಗಿ, ಸಾಮರಸ್ಯದ ಭಾವೈಕ್ಯತೆಗಾಗಿ, ಶಾಂತಿಯುತ ಬದುಕು ಕಟ್ಟಿಕೊಡಲು, ನಾಡು ಕಟ್ಟಲು, ಸರಳ ಧಾರ್ಮಿಕ ಚಿಂತನೆಗಳ ಮೂಲ ಜನರಲ್ಲಿ ಜಾಗೃತಿ ಮೂಡಿಸಲು, ಈ ಹಿಂದೆ ನೂರಾರು ಸಂತರು, ಶರಣರು, ಸೂಫೀಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಈ ಮಹಾನುಭಾವರುಗಳೆಲ್ಲ ಜನರಲ್ಲಿ ಮೌಢ್ಯ ಕಳಚಿ ಬದುಕಿನ ನಿಜಾರ್ಥ ಅರಿಯುವ ಸರಳ ಮಾರ್ಗ ಸೂಚಿಸಿದ್ದಾರೆ. ಇಂಥ ಉದಾತ್ತ ಚಿಂತನೆಗಳನ್ನು

ಪೀಳಿಗೆಗೆ ತಲುಪಿಸಬೇಕಾದ ಜನ ನಾಯಕರು ಮಾಡುತ್ತಿರುವುದಾದರೂ ಏನು?
ವಿವಾದಿತ ವ್ಯಕ್ತಿಗಳನ್ನು ಮುನ್ನೆೆಲೆಗೆ ತಂದು, ಜನರಲ್ಲಿ ಆಕ್ರೋೋಶ, ಅಸಹನೆಯ ಕಿಡಿ ಹೊತ್ತಿಸುತ್ತಿದ್ದಾರೆ. ನಿಜವಾಗಿಯೂಧಾರ್ಮಿಕ, ಸಮಾಜ ಸುಧಾರಕರನ್ನು ಸ್ಮರಿಸಬೇಕೆಂದು ಇಚ್ಛಿಸಿದರೆ, ಸಂತ ಶಿಶುನಾಳ ಶರೀಫ್, ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರಂಥ ಧಾರ್ಮಿಕ ಸಹಿಷ್ಣುತೆಯ ಮಹಾನುಭಾವರನ್ನು ಸ್ಮರಿಸಬೇಕುವಂತಾಗಲಿ.
ಪ್ರಹ್ಲಾದ್ ವಾ ಪತ್ತಾರ, ಯಡ್ರಾಮಿ , ಕಲಬುರ್ಗಿ

Leave a Reply

Your email address will not be published. Required fields are marked *

error: Content is protected !!