Sunday, 8th September 2024

ಚುನಾವಣೆ ಪ್ರಚಾರವಲ್ಲ, ಪ್ರಜಾಪ್ರಭುತ್ವದ ವಸ್ತ್ರಾಭರಣ

ರಾಜ್ಯದ ಎರಡು ಕ್ಷೇತ್ರಗಳಿಗೆ ಈಗ ಉಪಚುನಾವಣೆ ನಡೆಯುತ್ತಿದೆ. ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಇದೊಂದು ಸುವರ್ಣಾವಕಾಶ. ಆಡಳಿತ ವಹಿಸಿಕೊಂಡ ದಿನದಿಂದ ಕ್ಷೇತ್ರದಲ್ಲಿ ಆಡಳಿತ ಪಕ್ಷ ಇದುವರೆಗೂ ಏನೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ ಎಂಬುದನ್ನು ಮತದಾರರ ಗಮನಕ್ಕೆ ತಂದು, ಹೆಮ್ಮೆಯಿಂದ ಇನ್ನೂ ಏನು ಮಾಡುವುದಿದೆ ಎಂದು ಹೇಳಿ ಚುನಾವಣೆ ಗೆಲ್ಲಲು
ಇದೊಂದು ವೇದಿಕೆ.

ಹಾಗೆಯೇ ಪ್ರತಿಪಕ್ಷಗಳಿಗಂತೂ ದೇವರು ಕೊಟ್ಟ ವರ. ಆಡಳಿತ ಪಕ್ಷದ ಲೋಪದೋಷ ಗಳನ್ನು ಹೇಳಿ ಅದರ ಅಸಾಮರ್ಥ್ಯವನ್ನು ಎಳೆ ಎಳೆಯಾಗಿ ಜನರ ಮುಂದಿಟ್ಟು ಇನ್ನೂ ಅವರ ಪಕ್ಷದ ಅಭ್ಯರ್ಥಿಯನ್ನೇ ಗೆಲ್ಲಿಸುತ್ತೀರಾ?’ ಎಂದು ಪ್ರಶ್ನಿಸಿ, ಮತದಾರರ ಮನ ಗೆದ್ದು ಚುನಾವಣೆ ಗೆಲ್ಲಲು ಒಂದು ಸುಸಂದರ್ಭ. ಇದು ಮತದಾರರಲ್ಲಿ ಸರಕಾರದ ಆಡಳಿತ ವೈಫಲ್ಯ ಅಥವಾ ಸಾಫಲ್ಯ ವನ್ನು ಉದಾಹರಣೆ ಸಹಿತ ಬಯಲು ಮಾಡುವ ಸಂದರ್ಭ. ಆದರೆ ಇದರ ಅರಿವು ಇಲ್ಲದೆ ರಾಜಕಾರಣಿಗಳು ಒಬ್ಬರನ್ನೊಬ್ಬರು ಹೀನಾ ಮಾನವಾಗಿ ತೆಗಳುತ್ತಾ ಪರಸ್ಪರ ಕೆಸರೆರಚಾಡಿಕೊಂಡು ಕುಣಿದಾಡುತ್ತಿರುವುದನ್ನು ಕಂಡು ಜನ ಅಸಹ್ಯಪಡುತ್ತಿದ್ದಾರೆ.

ಈ ಸಂದರ್ಭದಲ್ಲಿ ಕೇಂದ್ರದ ನಾಯಕರ ಹೆಸರುಗಳನ್ನೂ ಎಳೆದುತಂದು ಅವರ ಮರ್ಯಾದೆಯನ್ನು ಹರಾಜು ಹಾಕಲು ಹೊರಟಿರುವುದು ನಾಚಿಕೆಗೇಡು.
– ಸತ್ಯಬೋಧ, ೫೩, ೩ ಕ್ರಾಸ್ ಹೊಸಕೆರೆಹಳ್ಳಿ ಬಡಾವಣೆ ಬೆಂಗಳೂರು ೮೫

ವಿದ್ಯಾರ್ಥಿವೇತನ : ಅರ್ಜಿ ಸಲ್ಲಿಕೆ ಸಮಸ್ಯೆ ಬಗೆಹರಿಸಿ
ಶಾಲಾ ಕಾಲೇಜುಗಳ ಹಲವು ವಿದ್ಯಾರ್ಥಿವೇತನದ ಅರ್ಜಿಗಳನ್ನು ಆನ್‌ಲೈನ್‌ನಲ್ಲಿಯೇ ಕರೆಯಲಾಗಿದೆ. ಆದರೆ ಪ್ರತಿಯೊಂದು ವಿದ್ಯಾರ್ಥಿವೇತನದ ಅರ್ಜಿ ಒಂದೊಂದು ವೆಬ್‌ಸೈಟ್‌ನಲ್ಲಿ ಇದ್ದು, ವಿದ್ಯಾರ್ಥಿಯು ಮಾಹಿತಿ ಭರ್ತಿ ಮಾಡುವಾಗ ಬಹಳಷ್ಟು ಮಾಹಿತಿಯನ್ನು ತುಂಬುವುದು ಕಠಿಣವೆನಿಸುತ್ತಿದೆ.

ಎಸ್‌ಎಸ್‌ಪಿ ವಿದ್ಯಾರ್ಥಿವೇತನದ ಅರ್ಜಿ ಭರ್ತಿ ಮಾಡಲಂತೂ ಸೈಬರ್ ಕೇಂದ್ರದವರೂ ಹಿಂದೇಟು ಹಾಕುತ್ತಿದ್ದಾರೆ. ಕೆಲವರು ಅರ್ಜಿ ಹಾಕಲು ಹೆಚ್ಚಿಗೆ ಹಣ ತೆಗೆದುಕೊಳ್ಳುತ್ತಿದ್ದಾರೆ. ಅಲ್ಲದೆ ಸರ್ವರ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕುವುದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಆದಕಾರಣ ಸಂಬಂಧಪಟ್ಟ ಅಧಿಕಾರಿಗಳು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಮತ್ತು ಸರ್ವರ್ ಸಮಸ್ಯೆಯನ್ನು ಸರಿಪಡಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು.
-ವಿನೋದ್ ರಾವ್ ವಿಜಯನಗರ ಬೆಂಗಳೂರು

ಹದಗೆಟ್ಟಿರುವ ರಸ್ತೆಯನ್ನು ಸರಿಪಡಿಸಿ

ಇಡೀ ಬೆಂಗಳೂರಿನಲ್ಲಿ ಇತ್ತೀಚೆಗೆ ರಸ್ತೆಗಳಲ್ಲಿ ಡಾಂಬರಗಳಿಗಿಂತ ಅದರಲ್ಲಿ ಗುಂಡಿಗಳೇ ಜಾಸ್ತಿ ಕಾಣಿಸುತ್ತದೆ. ಎಲ್ಲಿ ನೋಡಿದರು ಗುಂಡಿ, ವೈಟ್ ಟ್ಯಾಪಿಂಗ್ ನಿಂದ ಗಾರ್ಡನ್ ಸಿಟಿಯ ಅಂದವೆಲ್ಲಾ ಹಾಳಾಗುತ್ತಿದೆ ಅದರ ಜತೆಗೆ ಟ್ರಾಫಿಕ್ ಬೇರೆ. ಮೊನ್ನೆ ಇದೇ ತರಹದ ಹದೆಗೆಟ್ಟ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂದು ಕುಟುಂಬ ಅಪಘಾತಕ್ಕೀಡಾಗಿ ಗಂಡ ಹೆಂಡತಿ ಮತ್ತೆ ಮಕ್ಕಳು ಪ್ರಾಣ
ಕಳೆದುಕೊಂಡಿದ್ದಾರೆ.

ಇನ್ನೂ ಹಲವಾರು ಅಪಘಾತಗಳು ದಿನಾಲೂ ನಡೆಯುತ್ತಿದೆ ಸಂಚರಿಸಲಿಕ್ಕಾಗದ ಪರಿಸ್ಥಿತಿ ಉಲ್ಬಣಗುತ್ತಿದೆ. ಯಾವುದೇ ತರಹದ ಅಪಘಾತಗಳು ಮುಂದೆ ಉಂಟಾಗದಿರಲು. ಸುಗಮ ಸಂಚಾರಕ್ಕಾಗಿ ನಗರ ಪಾಲಿಕೆ ಹಾಗೂ ನಾಯರುಗಳು ಹದೆಗೆಟ್ಟ ರಸ್ತೆಗಳನ್ನು
ಸರಿಮಾಡಿ, ನಡೆಯುತ್ತಿರುವ ಕೆಲಸಗಳನ್ನು ಬೇಗ ಮುಗಿಸಬೇಕಾದ ಅನಿವಾರ್ಯತೆ ಇದೆ.
-ಐಶ್ವರ್ಯಾ ಬೆಂಗಳೂರು

ಸಂಘದ ಬಗ್ಗೆ ಹಗುರವಾಗಿ ಮಾತಾಡಬೇಡಿ
ಇತ್ತೀಚೆಗೆ ರಾಜಕಾರಣಿಗಳು ತಮ್ಮ ಘನತೆಗೆ ತಾವೆ ಕಪ್ಪು ಚುಕ್ಕೆ ತಂದುಕೊಳ್ಳುತ್ತಿದ್ದಾರೆ.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಎಲ್ಲಂದರಲ್ಲಿ ಬಾಯಿ ಬಿಡುತ್ತಿದ್ದಾರೆ. ಅದು ಒಂದು ಪವಿತ್ರ ಪೂಜೆ ಮಾಡುವ ಜಗಲಿ ಇದ್ದಂತೆ. ನಮ್ಮ ಮನೆಗಳಲ್ಲಿ ಜಗಲಿಯನ್ನು ಹೇಗೆ ಪವಿತ್ರವಾದ ಸ್ಥಾನವನ್ನೂ ನೀಡಿದ್ದೇವೋ ಹಾಗೆಯೇ ಕೊಟ್ಯಾಂತರ ಜನರ ಹೃದಯದಲ್ಲಿ ರಾ.ಸ್ವ.ಸೇ ಸಂಘದ ಅಭಿಮಾನ ವನ್ನು ಇಟ್ಟುಕೊಂಡಿದ್ದಾರೆ.

ಸಂಘದ ಪ್ರಮುಖರು ಒಂದೆ ಒಂದು ಕರೆ ನೀಡಿದರೆ ಎಲ್ಲಿ ಅವಶ್ಯಕತೆಯಿದೆಯೋ ಅಲ್ಲಿ ಸಂಘದ ಸೇವಕರು ಮುಂಚೂಣಿಯಲ್ಲಿ ನಿಂತಿರುತ್ತಾರೆ. ಇಂತಹ ನಾಸ್ಥಿಕ ಸಂಘಟನೆಯ ಬಗ್ಗೆ ಹಗುರವಾಗಿ ಮಾತನಾಡುವದಾಗಲಿ ಹೀಯಾಳಿಸುವದಾಗಲಿ ಮಾಡುವದು ನಿಮ್ಮ ರಾಜಕೀಯ ಜೀವನಕ್ಕೆ ಶೋಭಿಸುವದಿಲ್ಲ. ನಿಮಗೆ ಸಂಘ ಕಂಡರೆ ಯಾಕೆ ಭಯ? ಹಿಂದೆ ನೀವೆ ಅದೊಂದು ನಿರೂಪ ಯುಕ್ತ ಸಂಘಟನೆ ಎಂದು ಹೀಯಾಳಿಸುದ್ದುಂಟು ಇವಾಗ ನೋಡಿದರೆ ಇಷ್ಟೊಂದು ಉರಿದು ಬೀಳುವುದಾ!

ಅಂದ್ರೆ ಏನರ್ಥ? ಬೆಳೆದು ನಿಂತಿದೆ ಇದನ್ನು ಹೇಗೆ ಬೀಳಿಸಬೇಕು ಎಂದು ಚಿಂತೆ ಮಾಡುತ್ತಿದ್ದರೆ ನಿಮ್ಮಷ್ಟು ಮೂರ್ಖರು ಯಾರು ಇಲ್ಲ. ಇಲ್ಲಿ ಕೂಲಿಗಾಗಿ? ಆಸೆ ಅಪೇಕ್ಷೆ ಇಟ್ಟುಕೊಂಡು ಸೇರುವ ಸಂಘಟನೆ ಇದಲ್ಲ . ಇದು ದೇಶ?ಧರ್ಮ ರಕ್ಷಣೆಗೆ ನಿಂತಿರುವ ಸಂಘ. ಇದು ಇಂದು ಹೆಮ್ಮರವಾಗಿ ಬೆಳೆದು ನಿಂತಿರುವದರಿಂದ ನಿಮ್ಮ ಒಡೆದು ಆಳುವ ನೀತಿ ನಡೆಯದ ಕಾರಣ ಹಗೆತನವನ್ನು
ತೊರಿಸುತ್ತಿದ್ದಿರಿ. ನಿಮ್ಮ ಕಾರ್ಯವೈಖರಿಗಳು ಜನರ ಮನಸ್ಸನ್ನು ಗೆಲ್ಲುವಂತಿರಬೇಕೆ ಹೊರತು ಜನರ ಮನಸ್ಸನ್ನು ಕೊಲ್ಲು ವಂತಿರಬಾರದು.

ರಾಜಕೀಯ ನಾಯಕರ ನಡುವೆ ನಡೆದ ವಾಗ್ವಾದವನ್ನು ತಂದು ಸಂಘದ ಮೇಲೆ ಹಾಕುವದು ಎಷ್ಟು ಸರಿ? ನಿಮ್ಮ ಕೈಯಿಂದ ಎದುರಿಸಲಾಗದೆ ಅಪಪ್ರಚಾರ ಮಾಡುವದು ಜನತೆಗೆ ತಿಳಿಯುತ್ತದೆ. ಜನರು ಬಹಳಷ್ಟು ಪ್ರಜ್ಞಾವಂತರಾಗಿದ್ದಾರೆ ಯಾರಿಗೆ ಯಾವ ಸಮಯದಲ್ಲಿ ಎಲ್ಲಿ ತಲೆಬಗ್ಗಿಸಬೇಕು ಎನ್ನುವದು ಮತದಾರರ ಕೈಯಲ್ಲಿದೆ.  ಪ್ರಜ್ಞಾವಂತ ಜನರು ಅಂಗೈಯಲ್ಲಿ ಜಗತ್ತನ್ನೆ ನೋಡುತ್ತಿದ್ದಾರೆ. ಇವರು ಹೇಳುವ ಸುಳ್ಳುಗಳು ಗೊತ್ತಾಗುವುದಿಲ್ಲವೇ? ರಾಜಕಾರಣ ಮಾಡುವ ಸಮಯದಲ್ಲಿ ಮಾಡಿ ಉಳಿದ
ಸಮಯದಲ್ಲಿ ಎಲ್ಲ ಪಕ್ಷದ ನಾಯಕರು ಸೇರಿ ಅಭಿವೃದ್ಧಿ ಕಾರ್ಯಗಳನ್ನೂ ಮಾಡಬೇಕು. ಎಷ್ಟು ದಿವಸ ಹೀಗೆ ವಿನಾಃ ಕಾರಣ ಪರಸ್ಪರ ಕಾಲೆಳೆಯುವದನ್ನು ಮಾಡುತ್ತಾ ಕಾಲಹರಣ ಮಾಡುತ್ತಿರಿ.

ಎಲ್ಲರೂ ಒಗ್ಗೂಡಿ ಜನತೆಯ ಸೇವೆ ಮಾಡಿದರೆ ಜನತೆಯೇ ನಿಮ್ಮ ಕಾರ್ಯ ವೈಖರಿಯನ್ನು ಗಮನಿಸಿ ಮತವನ್ನು ನೀಡುತ್ತಾರೆ. ನೀವು ಮತದಾರರನ್ನು ಹುಡುಕಿಕೊಂಡು ಹೋಗುವ ಪ್ರಮೇಯವೆ ಬರುವದಿಲ್ಲ. ಹಾಗಾಗಿ ಇರುವ ಸ್ವಲ್ಪ ಸಮಯದಲ್ಲಿ ಕಾಲೆಳೆಯುವದನ್ನು ಬಿಡಿ.

– ವಿಠಲ.ಆರ್.ಯಂಕಂಚಿ
ಬಮ್ಮನಜೋಗಿ

Leave a Reply

Your email address will not be published. Required fields are marked *

error: Content is protected !!