Thursday, 16th May 2024

ಪುರುಷ ಶೋಷಣೆಯ ಗಂಭೀರತೆ

ಅಭಿಮತ

ಶ್ವೇತಾ ಪ್ರಸನ್ನ ಹೆಗಡೆ

shwetaprasanna@gmail.com

ಭಾರತೀಯ ಸಮಾಜದಲ್ಲಿ ಮಹಿಳಾ ಶೋಷಣೆಯ ವಿಚಾರ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಪುರುಷ ಶೋಷಣೆ ಎಂಬುದೂ ಪ್ರಮುಖ ವಿಚಾರವಾಗಿ ಆಧುನಿಕ ಕುಟುಂಬಗಳಲ್ಲಿ ಕಂಡುಬರುತ್ತಿದೆ. ಕಳೆದ ದಶಕದಲ್ಲಿ ಸಮಾಜದ ಸ್ಥಾನವು ನಾಟಕೀಯವಾಗಿ ಬದಲಾಗಿದೆ.

ಹಿಂದಿನ ಕಾಲದಲ್ಲಿ ಮಹಿಳೆಯರು ಪುರುಷರಿಂದ ಶೋಷಣೆಗೆ ಒಳಗಾಗುತ್ತಿದ್ದರು. ಆದರೆ ಈ ಆಧುನಿಕ ಯುಗ ದಲ್ಲಿ ಮಹಿಳಾ ಸಬಲೀಕರಣ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಕೆಲವು ಮಹಿಳೆಯರು ಸಹ ತಮ್ಮ ಸಂಗಾತಿ ಗಳನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸುತ್ತಿದ್ದಾರೆ. ಕೌಟುಂಬಿಕ ನೆಲೆಗಟ್ಟಿನಲ್ಲಿ ಭಾವನಾತ್ಮಕ ವಾಗಿ ಬಲಿಪಶು ಮಾಡುತ್ತಿದ್ದಾರೆ. ಮದುವೆ ಎನ್ನುವುದು ಕೇವಲ ಒಪ್ಪಂದವಲ್ಲ. ಕಾನೂನಿನ ಅಡಿಯಲ್ಲಿ ಸಂಸ್ಕಾರ ವೆಂದು ಪರಿಗಣಿಸುತ್ತದೆ. ಕುಟುಂಬ ಮತ್ತು ಸಮಾಜದ ಆಧಾರವೆಂದರೆ ಮದುವೆ. ಯಾವುದೇ ಸಮಾಜದಲ್ಲಿ ಮದುವೆ ದೈಹಿಕ-ಮಾನಸಿಕ ಧಾರ್ಮಿಕ ಮತ್ತು ಸಾಮಾಜಿಕ ಅಂಶಗಳ ನಡುವಿನ ಸಂಬಂಧವನ್ನು ಉಳಿಸಿ ಕೊಳ್ಳುತ್ತದೆ.

ಕುಟುಂಬ ಕುಟುಂಬಗಳಲ್ಲಿ ಸಾಮರಸ್ಯ ಬೆಸೆಯುವ ಬಂಧ. ಸಾಮೂಹಿಕ ಜೀವನದಲ್ಲಿ ಕುಟುಂಬ ಪ್ರಾಧಾನ್ಯತೆ ಹೆಚ್ಚಿನ ಒತ್ತು ನೀಡಲಾಗಿದೆ. ಹೆಚ್ಚಿನ ಪುರುಷರು ಕೌಟುಂಬಿಕ ನೆಲೆಗಟ್ಟಿನಲ್ಲಿ ತಮ್ಮ ಸಂಗಾತಿಗಳಿಂದ ಶೋಷಣೆಗೆ ಒಳಗಾಗುವುದನ್ನು ಅಽಕೃತವಾಗಿ ದೂರಲು ಹೋಗುವುದಿಲ್ಲ. ಹಾಗೆ ಮಾಡಿದಲ್ಲಿ, ಸಮಾಜದಲ್ಲಿ
ಅಪಹಾಸ್ಯಕ್ಕೆ ಒಳಗಾಗುತ್ತಾರೆ ಮತ್ತು ತಮ್ಮ ಖ್ಯಾತಿಗೆ ಕುಂದುಂಟಾಗುತ್ತದೆ ಎಂಬ ಮನೋಭಾವ ಅಡಗಿದೆ. ಇದರ ಬದಲಾಗಿ ಮಾನಸಿಕ ಸಂಘರ್ಷಕ್ಕೆ ಒಳಗಾಗಿ ಒಂಟಿತನದ ಮೊರೆ ಹೋಗುತ್ತಾರೆ ಮಾತ್ರವಲ್ಲದೇ ದುರಭ್ಯಾಸಗಳಿಗೆ ಒಳಗಾಗಿ ಆತ್ಮಹತ್ಯೆಯಂತಹ ನಿರ್ಧಾರಗಳನ್ನೂ ತೆಗೆದುಕೊಳ್ಳುವುದನ್ನು ನಾವು ಕಾಣಬಹುದಾಗಿರುತ್ತದೆ. ಭಾರತದಲ್ಲಿ ಪುರುಷರು ಮಹಿಳೆಯರಿಂದ ವಿವಿಧ ರೀತಿಯ ಕ್ರೌರ್ಯಗಳನ್ನು ಎದುರಿಸುತ್ತಿದ್ದಾರೆ ಎಂಬ ಅಂಶವನ್ನು ನಾನು ಈಗಾಗಲೇ ಹೇಳಿದೆ. ಆದರೆ ಇಲ್ಲಿ ದೈಹಿಕ ದೌರ್ಜನ್ಯದ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಬದಲಾಗಿ ಭಾವನಾತ್ಮಕ ತಂತ್ರಗಳಿಗೆ ಒಳಗಾಗುತ್ತಿದ್ದಾರೆ.

ಕುಟುಂಬ ಸುಗಮವಾಗಿ ಸಾಗಲು ಸ್ತ್ರೀ ಪಾಲುದಾರಿಕೆ ಹೆಚ್ಚಿನದಾಗಿದೆ. ಪತಿಯಂದಿರು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನಿಂದಿಸುವುದು ಮಾನಸಿಕವಾಗಿ ಜರ್ಜರಿತರಾಗುವಂತೆ ಮಾಡುವುದು. ತಮ್ಮ ಪೋಷಕರೊಡಗೂಡಿ ಪ್ರತ್ಯೇಕ ನಿವಾಸದ ಬೇಡಿಕೆ, ಸುಳ್ಳು ಕೇಸುಗಳ ಮೂಲಕ ಪೋಲಿಸ್ ಕ್ರಮದ ಬೆದರಿಕೆ, ಪತಿಯನ್ನು ಅವರ ತಂದೆ ತಾಯಿಯರ ಸಂಪರ್ಕದಿಂದ ದೂರ ಮಾಡುವದು, ಮತ್ತು ಅವರನ್ನು ಮನೆಯಂದಾಚೆ ಹಾಕಲು ಪ್ರಯತ್ನಿಸುವದು ಇತ್ಯಾದಿ.

ಇನ್ನು ಪತಿಯು ತನ್ನ ಕೋರಿಕೆಯನ್ನು ಈಡೇರಿಸದೇ ಇದ್ದಲ್ಲಿ, ಚುಚ್ಚು ಮಾತುಗಳ ಮೂಲಕ ಅವರನ್ನು ಹಿಂಸಿಸುವುದು. ಪುರುಷ ಸಂಗತಿಗಳನ್ನು ಅವಹೇಳನಕಾರಿ ಹೆಸರುಗಳಿಂದ ಕರೆಯುವದು. ಇನ್ನು ಪತಿ ಪತ್ನಿ ಪ್ರತ್ಯೇಕವಾಗುವ ಅನಿವಾರ್ಯತೆ ಎದುರಾದ ಸಂದರ್ಭಗಳಲ್ಲಿ ತನ್ನದೇ ಸ್ವಂತ ಮಗುವಿನ ಪಾಲನೆಯನ್ನು ನಿರಾಕರಿಸುವದು ಇತ್ಯಾದಿಗಳನ್ನು ಸಾಮಾನ್ಯ ಉದಾಹರಣೆಯಾಗಿ ನೀಡಬಹುದು. ಮಹಿಳೆಯರು ಪತಿಯಂದಿರನ್ನು ಆರ್ಥಿಕವಾಗಿ ಹಿಂಸೆ ಮಾಡುತ್ತಿದ್ದಾರೆ. ದುಬಾರಿ ಬೆಲೆಯ ಆಭರಣಗಳು ಬಟ್ಟೆಗಳು ವಾಹನಗಳು ಮನೆಗಳ ಖರೀದಿ, ಹೀಗೆ ಹಣಕಾಸಿನ ಬೇಡಿಕೆಗಳಿಗೆ ಅಧಿಕವಾಗಿ ಪುರುಷ ಸಂಗಾತಿಗಳು ತುತ್ತಾಗು ತ್ತಿದ್ದಾರೆ.

ಮೊದಲಿನಿಂದಲೂ ಸ್ತ್ರೀ ವರ್ಗದವರು ಪುರುಷರಿಂದ ಹೆಚ್ಚಾಗಿ ದೈಹಿಕ ಶೋಷಣೆಗೆ ಒಳಪಟ್ಟಿದ್ದಾರೆ. ಆದರೆ ಕಾನೂನುಗಳು ಮಹಿಳೆಯರಿಗೆ ಸುರಕ್ಷಿತತೆ ನಿರ್ಮಿಸಿ ಕೊಟ್ಟಿದ್ದು ಇವರ ಪಾಲಿಗೆ ವರದಾನವಾಗಿದೆ. ಕೆಲವರು ತಮಗಾಗಿಯೇ ಇರುವ ಕಾನೂನುಗಳ ಬಲ ಪಡೆದು, ವರದಕ್ಷಿಣೆ ಕಿರುಕುಳ ಇತ್ಯಾದಿ ಕೌಟುಂಬಿಕ ದೌರ್ಜನ್ಯ ಆರೋಪಗಳನ್ನು ದಾಖಲಿಸುವುದು, ಸೆರಮನೆಗೆ ಅಟ್ಟಲು ಪ್ರಯತ್ನಿಸುವದು ಹೀಗೆ ಕಾನೂನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಾತೆತ್ತಿದರೇ ಡೈವೋರ್ಸ್ ಅಸವನ್ನೇ ಮಹಿಳಾಮಣಿಯರು ಪ್ರಯೋಗ ಮಾಡುತ್ತಿದ್ದಾರೆ. ಭಾವನಾತ್ಮಕವಾಗಿ ಶೋಷಣೆ ಮಾಡಿ ಆರ್ಥಿಕವಾಗಿ ಪಾಲು ಪಡೆಯಲು ಪಯತ್ನದ ಟ್ರೆಂಡ್ ಶುರುವಾಗಿದೆ. ಹೊಸದಾಗಿ ಶುರುವಾಗಿರುವ ಆಧುನಿಕ ಟ್ರೆಂಡ್‌ನಲ್ಲಿ ಕಾನೂನುಗಳ ಮೊರೆ ಹೋಗಿ ಮಹಿಳೆಯರ ಹಕ್ಕುಗಳ ದುರುಪಯೋಗವಾಗು ತ್ತಿರುವುದು ಮಾತ್ರ ವಾಸ್ತವ.

ಪುರುಷರ ಮೇಲಿನ ನಿಂದನೆ ನಗುವ ವಿಷಯವಲ್ಲ ಇಂಡಿಯನ್ ಫ್ಯಾಮಿಲಿ ಫೌಂಡೇಶನ್ ನಡೆಯುವ ಸಭೆಗಳಲ್ಲಿ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಿ ನಮಗೆ ಆಗುವ ಅನ್ಯಾಯಗಳ ವಿರುದ್ಧ ಧ್ವನಿ ಎತ್ತುತ್ತಾ ಇರುವುದು ಖೇದದ ಸಂಗತಿ.

Leave a Reply

Your email address will not be published. Required fields are marked *

error: Content is protected !!