Friday, 12th April 2024

ಚಾಲಕರಿಗೆ ಪರಿಹಾರ ವಿತರಣೆಗೆ ಕ್ರಮ: ಡಿಸಿಎಂ ಸವದಿ

ಬೆಂಗಳೂರು: ಕೋವಿಡ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಈ ಲಾಕ್ ಡೌನ್ ನಿಂದಾಗಿ ತೊಂದರೆಯಾ ಗುವ ಅರ್ಹ ಆಟೋ-ಟ್ಯಾಕ್ಸಿ ಮತ್ತು ಕ್ಯಾಬ್ ಚಾಲಕರಿಗೆ ತಲಾ ಮೂರು ಸಾವಿರ ರೂಪಾಯಿಯಷ್ಟು ಆರ್ಥಿಕ ಸಹಾಯ ನೀಡಲು ನಮ್ಮ ಸರ್ಕಾರವು ನಿರ್ಧರಿಸಿದಂತೆ ಸಾರಿಗೆ ಇಲಾಖೆಯಿಂದ ಈ ಪರಿಹಾರ ವಿತರಿಸಲು ವ್ಯವಸ್ಥೆ ಮಾಡಲಾಗಿದೆ.

ಅರ್ಹ ಅಭ್ಯರ್ಥಿಗಳು ಸೇವಾ ಸಿಂಧು ವೆಬ್ ಪೋರ್ಟಲ್ ಮೂಲಕ ಸೂಕ್ತ ದಾಖಲೆಗಳನ್ನು ಒದಗಿಸಿ ಈ ಪರಿಹಾರ ಧನ ಪಡೆದು ಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.

ನಾಳೆ (ಮೇ 27) ಮಧ್ಯಾಹ್ನದಿಂದ ಅರ್ಜಿ ಸ್ವೀಕಾರ ಪ್ರಕ್ರಿಯೆ ಪ್ರಾರಂಭವಾಗುವುದು. ಹೀಗೆ ಅರ್ಜಿ ಸಲ್ಲಿಸಿದ ಸೂಕ್ತ ಫಲಾನು ಭವಿಗಳ ಅಕೌಂಟ್ ಗಳಿಗೆ ನೇರವಾಗಿ ಈ ಪರಿಹಾರ ಧನವನ್ನು ವರ್ಗಾಯಿಸಲಾಗುವುದು. ಬಡ ಚಾಲಕರ ನೆರವಿಗೆ ಮುಂದಾ ಗಿರುವ ನಮ್ಮ ಸರ್ಕಾರದ ಸೌಲಭ್ಯವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಸವದಿ ಅವರು ಮನವಿ ಮಾಡಿಕೊಂಡಿ ದ್ದಾರೆ.

***

ಕಳೆದ ಬಾರಿಯೂ ಲಾಕ್ ಡೌನ್ ಘೋಷಿಸಿದ ಸಂದರ್ಭದಲ್ಲಿ ಸಾರಿಗೆ ಇಲಾಖೆಯಿಂದ ಲಕ್ಷಾಂತರ ಮಂದಿ ಅರ್ಹ ಚಾಲಕರಿಗೆ ಪರಿಹಾರಧನವನ್ನು ವಿತರಿಸಲಾಗಿತ್ತು ಎಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.

ಲಕ್ಷ್ಮಣ ಸವದಿ, ಉಪ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ.

Leave a Reply

Your email address will not be published. Required fields are marked *

error: Content is protected !!