Saturday, 14th December 2024

ಸಮುದ್ರ ಕಾಣುವುದಿಲ್ಲ ಎಂದು ನಿರ್ಮಾಣ ಹಂತದ ಮನೆ ಖರೀದಿಸಿದ್ದಾರೆ ರೇಖಾ ಜುಂಜುನ್‌ವಾಲಾ..!

ಮುಂಬೈ: ದೇಶದ ಖ್ಯಾತ ಹೂಡಿಕೆದಾರ, ಉದ್ಯಮಿ ರಾಕೇಶ್‌ ಜುಂಜುನ್‌ವಾಲಾ ಅವರ ಪತ್ನಿ ರೇಖಾ ಜುಂಜುನ್‌ವಾಲಾ ಅವರು ತಮ್ಮ ಮನೆಯ ಬಾಲ್ಕನಿಯಲ್ಲಿ ನಿಂತರೆ ಸಮುದ್ರ ಕಾಣುವುದಿಲ್ಲ ಎಂಬ ಒಂದೇ ಕಾರಣಕ್ಕಾಗಿ 118 ಕೋಟಿ ರೂಪಾಯಿ ಕೊಟ್ಟು ನಿರ್ಮಾಣ ಹಂತದಲ್ಲಿರುವ ಎದುರಿನ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಮಲಬಾರ್‌ ಹಿಲ್‌ನಲ್ಲಿ ರೇಖಾ ಜುಂಜುನ್‌ವಾಲಾ ಅವರ ನಿವಾಸವಾದ ‘ರೇರ್‌ ವಿಲ್ಲಾ’ ಇದೆ. ಸಮುದ್ರ ಕಡೆಗೆ ಮುಖ ಮಾಡಿ ಇರುವ ನಿವಾಸಗಳಿಗೆ ಮಲಬಾರ್‌ ಹಿಲ್‌ ಖ್ಯಾತಿಯಾಗಿದ್ದು, ಇಲ್ಲಿ ರೇಖಾ ಜುಂಜುನ್‌ವಾಲಾ ಅವರ ಬೃಹತ್‌ ಬಂಗಲೆ ಇದೆ. ಆದರೆ, ಇವರ ಮನೆಯ ಎದುರು ರಾಕ್‌ಸೈಡ್‌ ಸಿಎಚ್‌ಎಸ್‌ ಮನೆ ನಿರ್ಮಿಸಿದರೆ, ರೇಖಾ ಜುಂಜುನ್‌ವಾಲಾ ನಿವಾಸ ದಿಂದ ಸಮುದ್ರ ಕಾಣಿಸುವುದಿಲ್ಲ. ಹಾಗಾಗಿ, ರೇಖಾ ಜುಂಜುನ್‌ವಾಲಾ ಅವರು ತಮ್ಮ ಮನೆಯ ಎದುರಿನ ಮನೆಯನ್ನೇ ಖರೀದಿಸಿ ದ್ದಾರೆ.

ವಾಲ್ಕೇಶ್ವರ್‌ ಪ್ರದೇಶದಲ್ಲಿ ರಾಕ್‌ಸೈಡ್‌ ಸಿಎಚ್‌ಎಸ್‌ ಸೇರಿ ಏಳು ಕಟ್ಟಡಗಳ ಮರುನವೀಕರಣ ಕೆಲಸ ನಡೆಯುತ್ತಿದೆ. ಶಪೂರ್‌ಜಿ ಪಲ್ಲೋನ್‌ಜಿ ಡೆವಲಪರ್‌ ಕಂಪನಿಯು ನಿರ್ಮಾಣದ ಹೊಣೆ ಹೊತ್ತಿದೆ.

ರಾಕೇಶ್‌ ಜುಂಜುನ್‌ವಾಲಾ ಅವರು ದೇಶದ ಖ್ಯಾತ ಹೂಡಿಕೆದಾರರು. ಷೇರು ಮಾರುಕಟ್ಟೆಯ ಬಿಗ್‌ ಬುಲ್‌, ಭಾರತದ ವಾರೆನ್‌ ಬಫೆಟ್‌ ಎಂದೇ ಖ್ಯಾತಿಯಾಗಿದ್ದ ಅವರು 2022ರಲ್ಲಿ ನಿಧನರಾದರು.